ಧಾರವಾಡ: ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಬ್ಲಾಗ್ ಮತ್ತು ವೆಬ್‌ಸೈಟ್‌ಗಳಿಗೆ ಬರೆಯುವುದನ್ನು ಕಲಿಯಬೇಕು. ಈ ಮೂಲಕ ತಂತ್ರಜ್ಞಾನದ ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಡಿ.ರಾಮರಾಜ್ ಹೇಳಿದರು. ಕವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ನಡೆದ ವೆಬ್ ಪೋರ್ಟಲ್ ನಿರ್ವಹಣೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನ್ಯೂಸ್ ಪೋರ್ಟಲ್‌ನಲ್ಲಿ ಸುದ್ದಿಗಳನ್ನು ಅಳವಡಿಸಲು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಳಕೆ ಅತೀ ಅವಶ್ಯಕವಾಗಿದೆ. ವೆಬ್‌ಪೇಜ್ ಗಳಲ್ಲಿ ಸುದ್ದಿಯನ್ನು ಹಾಕುವುದರ ಜೊತೆಗೆ ಆಯಾ ಪ್ರದೇಶದ ವಿಷಯದ ಹೆಸರು ಇರಬೇಕು. ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಅ ಧಿಕವಾಗುತ್ತಿದ್ದು, ನ್ಯೂಸ್ ಪೋರ್ಟಲ್‌ಗಳು ಇನ್ನೂ ಹೆಚ್ಚು ಹೆಚ್ಚು ಬಳಕೆಗೆ ಬರುತ್ತವೆ ಎಂದರು.
ವಿಜಯಪುರ ಮಹಿಳಾ ವಿವಿ ಸಹಾಯಕ ಪ್ರಾಧ್ಯಾಪಕ ಸಂದೀಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೆಬ್‌ಪೋರ್ಟಲ್‌ಗಳು ಹೆಚ್ಚು ಮಹತ್ವ ಪಡೆಯುತ್ತಿವೆ. ದಿನದ 24 ಗಂಟೆ ಕಾಲವೂ ಅಪ್‌ಟೇಡ್ ಸುದ್ದಿ ಇಲ್ಲಿ ದೊರೆಯುವುದರಿಂದ ಪ್ರತಿಯೊಂದು ಮಾಧ್ಯಮ ಸಂಸ್ಥೆಗಳು ಈಗ ತಮ್ಮದೇ ನ್ಯೂಸ್ ಪೋರ್ಟಲ್ ಹೊಂದಿವೆ. ಇಲ್ಲಿ ಕೆಲಸ ಮಾಡಲು ಅವಶ್ಯಕ ತಂತ್ರಜ್ಞಾನದ ಅರಿವನ್ನು ವಿದ್ಯಾರ್ಥಿಗಳುಪಡೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ:ಪಿಎಂ ಕಿಸಾನ್ ಯೋಜನೆ: 17 ಕೋಟಿ ಜಮಾ
ವಿಭಾಗದ ಮುಖ್ಯಸ್ಥ ಪ್ರೊ| ಜೆ. ಎಂ. ಚಂದುನವರ ಮಾತನಾಡಿ, ಡಿಜಿಟಲ್ ಮಾಧ್ಯಮದ ಎಲ್ಲ ಆಯಾಮಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾದ ಅವಶ್ಯಕತೆ ಇದೆ ಎಂದರು. ಡಾ| ಮಂಜುನಾಥ ಅಡಿಗಲ್, ವಿಶ್ವಾಸ ಅಂಗಡಿ ಇದ್ದರು. ಶುಶ್ಮಿತಾ ಪಟ್ಟಣಶೆಟ್ಟಿ ನಿರೂಪಿಸಿದರು. ಜಶ್ಮಿನ್ ಸಯ್ಯದ ಪರಿಚಯಿಸಿದರು. ಅವಧಾನಿ ವಂದಿಸಿದರು.