Advertisement

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧ

10:32 AM May 01, 2017 | |

ಗುವಾಹಾಟಿ: ಗಾಯಕ ಸೋನು ನಿಗಂ ಅವರು ಮೈಕ್‌ನಿಂದಾಗುವ ತೊಂದರೆ ಬಗ್ಗೆ ಅಪಸ್ವರವೆತ್ತಿ ದೇಶ‌ವ್ಯಾಪಿ ಸುದ್ದಿಯಾದ ಬೆನ್ನಲ್ಲೇ ಇದೀಗ ಅಸ್ಸಾಂ ಸರಕಾರ ವು ದೇವಸ್ಥಾನ, ಮಸೀದಿ, ಚರ್ಚ್‌, ಗುರುದ್ವಾರ ಸೇರಿದಂತೆ ಧಾರ್ಮಿಕ ಪ್ರದೇಶಗಳ 100 ಮೀಟರ್‌ ಸುತ್ತಲಿನ ಪ್ರದೇಶವನ್ನು “ಸೈಲೆಂಟ್‌ ಜೋನ್‌'(ಮೌನ ವಲಯ) ಎಂದು ಘೋಷಿಸಿ, ಹೊಸ ಆದೇಶ ಹೊರಡಿಸಿದೆ.

Advertisement

ಈ ಮೌನ ವಲಯದ ವ್ಯಾಪ್ತಿಗೆ ಧಾರ್ಮಿಕ ಕೇಂದ್ರಗಳಷ್ಟೇ ಅಲ್ಲದೆ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯಗಳು ಕೂಡ ಬರುತ್ತವೆ ಎಂದು ಆದೇಶ ತಿಳಿಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇವುಗಳಿಂದ ಉಂಟಾಗುತ್ತಿರುವ ಶಬ್ದಮಾಲಿನ್ಯ ನಿಯಂತ್ರಣ ಮಾಡುವಂತೆ ಕೊಟ್ಟಿರುವ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಈ ಆದೇಶ ಹೊರಡಿಸಿದ್ದಾರೆ. ಅದರಂತೆ ಬೆಳಗ್ಗೆ 6ರಿಂದ ರಾತ್ರಿ 10 ರವರೆಗೆ ಈ ಪ್ರದೇಶಗಳಲ್ಲಿ ಯಾರೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಅಧಿಸೂಚನೆ ತಿಳಿಸಿದೆ. ಜತೆಗೆ, 15 ದಿನಗಳ ಒಳಗಾಗಿ ಇಂತಹ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಸೂಚನಾ ಫ‌ಲಕಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next