Advertisement

ಜೈವಿಕ ಇಂಧನ ಬಳಕೆ ಇಂದಿನ ಅಗತ್ಯ

12:17 PM Aug 19, 2017 | |

ಔರಾದ: ಬರುವ 20 ವರ್ಷಗಳಲ್ಲಿ ಬಹುತೇಕ ಇಂಧನ ಸಂಪನ್ಮೂಲಗಳು ಬರಿದಾಗಲಿವೆ ಎಂದು ವಿಜ್ಞಾನಿಗಳು ಹಾಗೂ ತಜ್ಞರು ಹೇಳುತ್ತಾರೆ. ಆದ್ದರಿಂದ ಪೆಟ್ರೋಲ್‌, ಡೀಸೆಲ್‌ ಮೇಲಿನ ಅತಿಯಾದ ಅವಲಂಬನೆ ಸರಿಯಲ್ಲ ಎಂದು ತಾಲೂಕು ಪ್ರಭಾರಿ ಅರಣ್ಯಾಧಿಕಾರಿ ಹಾವಪ್ಪ ಶೆಂಬೆಳ್ಳೆ ಹೇಳಿದರು. ಸಂತಪುರ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸಾಮಾಜಿಕ ಅರಣ್ಯ ವಿಭಾಗ ಆಯೋಜಿಸಿದ್ದ “ಜೈವಿಕ ಇಂಧನ’ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತಿಯಾದ ಪೆಟ್ರೋಲ್‌, ಡೀಸೆಲ್‌
ಬಳಕೆಯಿಂದ ಪರಿಸರ ಕಲುಷಿತಗೊಳ್ಳುತ್ತದೆ. ಪೆಟ್ರೋಲ್‌ ಇಂಧನಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಬಳಸಬೇಕು. ಸಂಘ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮಗಳು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ರುಢಾಲ್‌ ಡೀಸೆಲ್‌ ಎಂಬಾತ ಮೊದಲು ಕಡಲೆಕಾಯಿ ಎಣ್ಣೆಯಿಂದ ಚಲಿಸುವ ಕಾರಿನ ಇಂಜಿನ್‌ ಕಂಡುಹಿಡಿದ ಸ್ಮರಣೆಗಾಗಿ ಜೈವಿಕ ಇಂಧನ ದಿನ ಆಚರಿಸಲಾಗುತ್ತಿದೆ. ಮುಂದುವರಿದ ರಾಷ್ಟ್ರಗಳಾದ ಅಮೆರಿಕಾ, ಬ್ರೆಜಿಲ್‌, ಜರ್ಮನಿ ರಾಷ್ಟ್ರಗಳಲ್ಲಿ ಜೈವಿಕ
ಇಂಧನ ಬಳಕೆ ಯಶಸ್ವಿಯಾಗಿದೆ. ಬ್ರೆಜಿಲ್‌ನಲ್ಲಿ ಶೇ.80ರಷ್ಟು ಜೈವಿಕ ಇಂಧನ ಬಳಸಲಾಗುತ್ತಿದೆ. ಹೊಂಗೆ, ಬೇವು, ಜಟ್ರೋಪಾ ಗಿಡಗಳ ಬೀಜದಿಂದ ಜೈವಿಕ ಇಂಧನ ತಯಾರಿಸಲಾಗುತ್ತದೆ ಎಂದು ಹೇಳಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು ಮಾತನಾಡಿ, ರೈತರ ಅಭಿವೃದ್ಧಿಗೆ ಜೈವಿಕ ಇಂಧನ ಉತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರು ತಮ್ಮ ಹೊಲ-ಗದ್ದೆಗಳಲ್ಲಿ ಜೈವಿಕ ಇಂಧನ ಅಂಶಗಳಿರುವ ಮರಗಳನ್ನು ಬೆಳೆಸಲು ಮುಂದಾಗಬೇಕೆಂದು ಸಲಹೆ ನೀಡಿದರು. ಇದೇ ವೇಳೆ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 200 ಸಸಿಗಳನ್ನು ನೆಟ್ಟರು. ಒಬ್ಬ ವ್ಯಕ್ತಿಗೆ ಅವುಗಳ ರಕ್ಷಣೆಯ ಜವಬ್ದಾರಿಯನ್ನೂ ವಹಿಸಲಾಗಿದೆ ಎಂದು ಹೇಳಿದರು. ಡಿಎಫ್‌ಒ ಕೆ.ಎಂ. ರಾಮನಟ್ಟಿ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ
ಧನರಾಜ ಮುಸ್ತಾಪುರ, ಪತ್ರಕರ್ತ ಶರಣಪ್ಪ ಚಿಟ್ಟೆ, ಸಂತಪುರ ಪಿಎಸ್‌ಐ ರಘುನಾಥ ರೆಡ್ಡಿ, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next