ಬೆಂಗಳೂರು: ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಚಿತ್ರದುರ್ಗದ ಮುರುಘಾ ಮಠದ ಪ್ರಸ್ತಾವನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಅನುಮೋದನೆ ಕೊಟ್ಟಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದರೆ ಆದಷ್ಟು ಬೇಗ ಈ ಪ್ರಸ್ತಾವನೆ ಕಾರ್ಯಗತಗೊಳ್ಳಲಿದೆ.
ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಬಗ್ಗೆ 66 ಎಕರೆ ಜಾಗದ ದಾಖಲೆಗಳೊಂದಿಗೆ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು 2016ರ ಮಾ.12 ರಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಪ್ರಸ್ತಾಪನೆ ಸಲ್ಲಿಸಿದ್ದರು. ಪರಿಶೀಲನಾ ಹಂತ ದಾಟಿದ ಬಳಿಕ ಫೆ.2ರಂದು ಗ್ರಾಮೀಣಾಭಿವೃದ್ಧಿ ಸಚಿವರು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.
ಒಂದೊಮ್ಮೆ ಮುರುಘಾ ಮಠದ ವತಿಯಿಂದ ಜೈವಿಕ ಇಂಧನ ಉದ್ಯಾನ ನಿರ್ಮಾಣವಾದರೆ, ಅದು ರಾಜ್ಯದ ನಾಲ್ಕನೇ ಜೈವಿಕ ಇಂಧನ ಉದ್ಯಾನ ಆಗಲಿದೆ. ಈಗಾಗಲೇ, ಜೈವಿಕ ಇಂಧನ ಅಭಿವೃದಿಟಛಿ ಮಂಡಳಿ ವತಿಯಿಂದ ರಾಜ್ಯ ದಲ್ಲಿ 3 ಜೈವಿಕ ಇಂಧನ ಉದ್ಯಾನಗಳು ಅನುಷ್ಠಾನದಲ್ಲಿವೆ. ರಾಜ್ಯದ ಪ್ರತಿ ಕಂದಾಯ ವಿಭಾಗಕ್ಕೊಂದು ಜೈವಿಕ ಇಂಧನ ಉದ್ಯಾನ ಇರಬೇಕು ಎನ್ನುವುದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಯೋಜನೆಯಾಗಿತ್ತು.
ಅದರಂತೆ, ಮೈಸೂರು ಕಂದಾಯ ವಿಭಾಗದಲ್ಲಿ ಹಾಸನ ಜಿಲ್ಲೆಯ ಮಡೆನೂರು, ಬೆಳಗಾವಿ ಕಂದಾಯ ವಿಭಾಗದಲ್ಲಿ ಧಾರವಾಡ, ಕಲಬುರಗಿ ಕಂದಾಯ ವಿಭಾಗದಲ್ಲಿ ಯಾದಗಿರಿ ಜಿಲ್ಲೆಯ ತಿಂತಣಿಯಲ್ಲಿ ಜೈವಿಕ ಇಂಧನ ಉದ್ಯಾನಗಳು ಕಾರ್ಯ ನಿರ್ವಹಿಸುತ್ತಿವೆ. ಈ 3 ಜೈವಿಕ ಇಂಧನ ಉದ್ಯಾನಗಳು ತಲಾ 40 ರಿಂದ 50 ಎಕರೆ ಪ್ರದೇಶದಲ್ಲಿದೆ. ಜೈವಿಕ ಇಂಧನ ಕ್ಷೇತ್ರ ಕುರಿತ ಸಮಗ್ರ ಮಾಹಿತಿ, ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳುಹಾಗೂ ಉದ್ದಿಮೆದಾರರಿಗೆ ತಲುಪಿಸುವಲ್ಲಿ ಕ್ರಿಯಾಶೀಲವಾಗಿವೆ. ಆಯಾ ವಿಭಾಗಗಳಲ್ಲಿ ದೊರಕುವ ಹಾಗೂ ಬೇರೆ ಭೌಗೋಳಿಕ ಸನ್ನಿವೇಶಗಳಿಗೆ ಪೂರಕವಾದ ಜೈವಿಕ ಇಂಧನ ಸಸಿಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ ಮುಂತಾದ ಸಸಿಗಳನ್ನು ಬೆಳೆಸುವುದು, ಅವುಗಳನ್ನು ರೈತರಿಗೆ ನೀಡಿ ಅವರ ಜಮೀನಿನಲ್ಲಿ ನೆಟ್ಟು ಬೆಳೆಸುವಲ್ಲೂ ನೆರವು ನೀಡುತ್ತಿವೆ.
ಮುರುಘಾ ಮಠದ ಪ್ರಸ್ತಾವನೆ: ಬೆಂಗಳೂರು ಕಂದಾಯ ವಿಭಾಗದಲ್ಲಿ ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಸಂಬಂಧ ಚಿತ್ರದುರ್ಗ ಮುರುಘಾ ಮಠದ ಶರಣರು 66 ಎಕರೆ ಜಾಗದ ದಾಖಲಾತಿಗಳೊಂದಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆಯೊಂದಿಗೆ 2016 ಮಾ.12ರಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಫೆ.2ರಂದು ಸಚಿವರು ಅದನ್ನು ಅನುಮೋದಿಸಿದ್ದಾರೆ.
66 ಎಕರೆ ಭೂಮಿ ನೀಡಲು
ಮುರುಘಾಮಠ ಸಿದ್ಧ
ಮುರುಘಾಮಠದ ಮರುಪಸ್ತಾವನೆಯನ್ನು ಪುನರ್‌ಪರಿಶೀಲಿಸಿದ್ದ ಜೈವಿಕ ಇಂಧನ ಮಂಡಳಿಯು, ಜೈವಿಕ ಇಂಧನ ಉದ್ಯಾನ ನಿರ್ಮಾಣಕ್ಕೆ 66 ಎಕರೆ ಜಾಗ ಕೊಡಲು ಮುರುಘಾಮಠ ಸಿದ್ಧವಿದೆ. ಅಲ್ಲದೇ ಈ ಸಂಸ್ಥೆಗೆ ನೀಡಲಾಗಿರುವ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೈವಿಕ ಇಂಧನ ಮಂಡಳಿ ಹಾಗೂ ಮುರುಘಾಮಠ ಒಡಂಬಡಿಕೆ ಮಾಡಿಕೊಂಡು ಉದ್ಯಾನ ನಿರ್ಮಿಸಬಹುದು. ಇದಕ್ಕಾಗಿ 5 ವರ್ಷಗಳ ಕ್ರಿಯಾ ಯೋಜನೆ ರೂಪಿಸಿ ಪ್ರತಿ ವರ್ಷ 1 ಕೋಟಿ ರೂ. ಅನುದಾನ ಮೀಸಲಿಡಬೇಕು. ಈ ಸಾಲಿನ ಬಜೆಟ್‌ನಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಿದರೆ ಅಗತ್ಯ ಸಿದ್ದತೆ ಮಾಡಿಕೊಳ್ಳಬಹುದು ಎಂದು ಮಂಡಳಿ ತನ್ನ ಟಿಪ್ಪಣಿಯಲ್ಲಿ ಮನವಿ ಮಾಡಿದೆ. ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಫೆ.2ರಂದು ಸಚಿವರು ಅದನ್ನು ಅನುಮೋದಿಸಿದ್ದಾರೆ.