Advertisement
ಏನಿದು ಜೈವಿಕ ಇಂಧನ?ಸಸ್ಯಗಳು, ಧಾನ್ಯಗಳು, ಕೃಷಿ ತ್ಯಾಜ್ಯ, ಪಾಚಿ, ಪ್ರಾಣಿಗಳು ಮತ್ತು ಆಹಾರದ ತ್ಯಾಜ್ಯಗಳಿಂದ ಪಡೆಯಲಾಗುವ ದಹನಶೀಲ ದ್ರವ ಅಥವಾ ಅನಿಲವನ್ನು ಜೈವಿಕ ಇಂಧನಗಳು ಎನ್ನುತ್ತಾರೆ.
ಕಚ್ಚಾ ಸಾಮಗ್ರಿಗೆ ಅನುಗುಣವಾಗಿ ವಿಶೇಷ ಸಂಸ್ಕರಣಾಗಾರ ಗಳನ್ನು ಈ ರೀತಿ ವಿಂಗಡಿಸಲಾಗಿದೆ: ಮೊದಲ ತಲೆಮಾರಿನ (1ಜಿ) ಘಟಕಗಳು ಕಬ್ಬು ಬೆಳೆ ಮತ್ತು ಧಾನ್ಯಗಳ ಪಿಷ್ಟವನ್ನು ಸಂಸ್ಕರಿಸುತ್ತವೆ. ಖಾದ್ಯೆàತರ ಸಸ್ಯಗಳು, ಕೃಷಿ ತ್ಯಾಜ್ಯಗಳನ್ನು 2ನೇ ತಲೆಮಾರಿನ ಘಟಕಗಳು(2ಜಿ) ಸಂಸ್ಕರಿಸುತ್ತವೆ. ಮೂರನೇ ತಲೆಮಾರಿನ ಘಟಕಗಳು(3ಜಿ) ಪಾಚಿ ಮತ್ತು ಸೂಕ್ಷ್ಮಜೀವಿಗಳಿಂದ ಜೈವಿಕ ಇಂಧನವನ್ನು ತಯಾರಿಸುತ್ತವೆ.
Related Articles
ಇಂಧನದ ಸುಸ್ಥಿರ ಮೂಲಗಳು ಜಗತ್ತಿನ ಎಲ್ಲ ಪ್ರದೇಶಗಳಲ್ಲೂ ಲಭ್ಯವಿರುತ್ತವೆ. ಅಲ್ಲದೇ ಜೈವಿಕ ಇಂಧನಗಳು ವಾಹನಗಳ ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುತ್ತವೆ, ರೈತರ ಆದಾಯ ಹೆಚ್ಚಿಸುತ್ತವೆ ಮತ್ತು ಭಾರತದಂಥ ದೇಶಗಳು ಆಮದು ಮಾಡಿದ ತೈಲವನ್ನೇ ನೆಚ್ಚಿಕೊಳ್ಳುವ ಆವಶ್ಯಕತೆ ಇರುವುದಿಲ್ಲ.
Advertisement
ಭಾರತದಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಆರಂಭ ಯಾವಾಗ?ರಾಷ್ಟ್ರೀಯ ಜೈವಿಕ ಇಂಧನ ನೀತಿ ಮೊದಲು ಜಾರಿಯಾಗಿದ್ದು 2009ರಲ್ಲಿ. ಇದನ್ನು 2022ರಲ್ಲಿ ಪರಿಷ್ಕರಿಸಲಾಯಿತು. ಪೆಟ್ರೋಲ್ ಜತೆ ಶೇ.20 ಎಥೆನಾಲ್ ಮಿಶ್ರಣ ಗೊಳಿಸುವ ಗುರಿಯನ್ನು 2025ರವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ನಡೆಯಿತು. 2023-24ರ ವೇಳೆಗೆ ವರ್ಷಕ್ಕೆ 15 ದಶಲಕ್ಷ ಟನ್ ಅನಿಲ ಉತ್ಪಾದನೆಗಾಗಿ 5 ಸಾವಿರ ಸಿಬಿಜಿ(ಸಂಕ್ಷೇಪಿತ ಜೈವಿಕ ಅನಿಲ) ಸ್ಥಾವರ ನಿರ್ಮಿಸುವ ಯೋಜನೆಯನ್ನು 2018ರಲ್ಲಿ ಅನಾವರಣಗೊಳಿಸಲಾ ಯಿತು. ಭಾರತದ ಉತ್ಪಾದನೆ
2022ರಲ್ಲಿ ಭಾರತವು ಸುಮಾರು 3 ಶತಕೋಟಿ ಲೀ. ಎಥೆನಾಲ್ ಉತ್ಪಾದಿಸಿದೆ. ಅಮೆ ರಿಕ, ಯುರೋಪ್, ಬ್ರೆಜಿಲ್ ಅನ್ನು ಹೊರತು ಪಡಿಸಿದರೆ ಜಗತ್ತಿನ ಒಟ್ಟಾರೆ ಉತ್ಪಾದನೆಯ ಶೇ.16ರಷ್ಟು. ಜಗತ್ತಿನ ಪ್ರಮುಖ ಜೈವಿಕ ಇಂಧನ ಉತ್ಪಾದಕರು
2022ರ ಟಾಪ್ ಎಥೆನಾಲ್ ಉತ್ಪಾದಕರು: ಅಮೆರಿಕ (57.5 ಶತಕೋಟಿ ಲೀ.) ಮತ್ತು ಬ್ರೆಜಿಲ್ (35.6 ಶತಕೋಟಿ ಲೀ.)
ಟಾಪ್ ಬಯೋಡೀಸೆಲ್ ಉತ್ಪಾದಕರು: ಯುರೋಪ್(17.7 ಶತಕೋಟಿ ಲೀ.), ಅಮೆರಿಕ (14.5 ಶತಕೋಟಿ ಲೀ.), ಇಂಡೋನೇಷ್ಯಾ (9.3 ಶತಕೋಟಿ ಲೀ.)