Advertisement

ವಾಯು ಮಾಲಿನ್ಯ ತಡೆಗೆ ಜೈವಿಕ ಇಂಧನ ಬಳಸಿ

06:28 PM Aug 17, 2022 | Team Udayavani |

ಹಾವೇರಿ: ಕರಿದ ಅಡುಗೆ ಎಣ್ಣೆಯನ್ನು ಮರು ಬಳಸುವುದು ಆರೋಗ್ಯಕ್ಕೆ ಹಾನಿಕರ. ಈ ಎಣ್ಣೆಯನ್ನು ಜೈವಿಕ ಇಂಧನವಾಗಿ ಮಾರ್ಪಡಿಸಬಹುದು. ಇದರಿಂದ ಪರಸರ ಹಾನಿ ಹಾಗೂ ಮಾನವನ ಆರೋಗ್ಯದ ಹಾನಿಯನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್‌ ಹೇಳಿದರು.

Advertisement

ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜಿಲ್ಲಾ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ, ಕರ್ನಾಟಕ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ ಹಾಗೂ ನೀಡ್ಸ್‌ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ 1893ರಲ್ಲಿ ಸರ್‌ ರುಡಾಲ್‌  ಅವರು ಶೇಂಗಾ (ನೆಲಗಡಲೆ) ಎಣ್ಣೆಯಿಂದ ಜೈವಿಕ ಇಂಧನ ತಯಾರಿಸಿದರು. ಬಳಸಿದ ನೆಲಗಡಲೆ ಎಣ್ಣೆಯನ್ನು ವಾಹನಗಳಿಗೆ ಬಳಸಬಹುದು ಎನ್ನುವುದನ್ನು ಕಂಡು ಹಿಡಿದರು. ಇಂದು ಜೈವಿಕ ಇಂಧನದ ಪ್ರಾಮುಖ್ಯತೆ ಹೆಚ್ಚಾಗಿದೆ. ಪರಿಸರ ನಾಶ, ವಾಯು ಮಾಲಿನ್ಯ ತಡೆಯಲು ಜೈವಿಕ ಇಂಧನ ಬಳಕೆ ಹೆಚ್ಚಾಗಬೇಕು ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾ ಧಿಕಾರಿ ಬಾಲಕೃಷ್ಣ ಎಸ್‌. ಮಾತನಾಡಿ, ನಮ್ಮ ಸುತ್ತ-ಮುತ್ತ ಬೇವು, ಹೊಂಗೆ ಇತ್ಯಾದಿ ಮರಗಳನ್ನು ಹೆಚ್ಚು ಹೆಚ್ಚು ನೆಡಬೇಕು. ಇದರಿಂದ ಪರಿಸರದ ಸಂರಕ್ಷಣೆಯಾಗುವುದಲ್ಲದೇ, ಮರಗಳ ಬೀಜಗಳಿಂದ ಜೈವಿಕ ಇಂಧನ ತಯಾರಿಸಬೇಕು. ಆದ್ದರಿಂದ, ಸ್ವ ಸಹಾಯ ಗುಂಪಿನ ಸದಸ್ಯರು ಇಂತಹ ಗಿಡಗಳ ಬೀಜಗಳನ್ನು ಸಂಗ್ರಹಿಸಿ, ಹತ್ತಿರದಲ್ಲಿರುವ ಜೈವಿಕ ಇಂಧನ ಘಟಕಕ್ಕೆ ನೀಡಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಡೀನ್‌ ಹಾಗೂ ಮುಖ್ಯಸ್ಥ ಡಾ|ಎಂ.ವಿ. ಮಂಜುನಾಥ ಮಾತನಾಡಿ, ಪೆಟ್ರೋಲ್‌, ಡೀಸೆಲ್‌ ಬಳಕೆಗೆ ಪರ್ಯಾಯವಾಗಿ ಮೊಟ್ಟ ಮೊದಲಿಗೆ 1893ರಲ್ಲಿ ಸರ್‌ ರುಡಾಲ್‌  ಅವರು ಆ. 10ರಂದು ನೆಲಗಡಲೆ-ಶೇಂಗಾ ಎಣ್ಣೆಯಿಂದ ಜೈವಿಕ ಇಂಧನ ತಯಾರಿಸಬಹುದೆಂಬುದನ್ನು ಕಂಡುಹಿಡಿದರು.ಆದ್ದರಿಂದ, ಪ್ರತಿ ವರ್ಷ ಆ.10 ರಂದು ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

Advertisement

ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಸೌರಶಕ್ತಿಯಿಂದ-ವಿದ್ಯುತ್‌ ಬಳಕೆ ಹಾಗೂ ಕೃಷಿ ಶಕ್ತಿಯಿಂದ-ಹೊಂಗೆ, ಬೇವಿನ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಿ ಜೈವಿಕ ಇಂಧನ ತಯಾರಿಸುವ ಕುರಿತು ಮನದಟ್ಟು ಮಾಡಿದರು. 2030ರ ವೇಳೆಗೆ ಹೆಚ್ಚು ಹೆಚ್ಚು ಜೈವಿಕ ಇಂಧನ ಸ್ಥಾವರಗಳನ್ನು ಸ್ಥಾಪಿಸೋಣ ಎಂದರು.

ಹನುಮನಮಟ್ಟಿ ಮಹಾವಿದ್ಯಾಲಯದ ಜೈವಿಕ ಇಂಧನ ಘಟಕದ ಸಂಯೋಜಕಿ ಡಾ|ಪ್ರಿಯಾ ಪಿ. ಹಾಗೂ ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್‌., ನೀಡ್ಸ್‌ ಸಂಸ್ಥೆಯ ಎಚ್‌.ಎಫ್‌. ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ|ರಾಜಾನಂದ ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next