Advertisement

ಜೈವಿಕ ಇಂಧನ ವಿಮಾನ ಹಾರಾಟ ಯಶಸ್ವಿ

06:00 AM Aug 28, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಜೈವಿಕ ಇಂಧನ ಬಳಸಿ ವಿಮಾನ ಹಾರಾಟ ನಡೆಸಲಾಗಿದೆ. ಸೋಮವಾರ ಡೆಹ್ರಾಡೂನ್‌ನಿಂದ ಹೊರಟ ಸ್ಪೈಸ್‌ ಜೆಟ್‌ ವಿಮಾನ ಯಶಸ್ವಿಯಾಗಿ ದಿಲ್ಲಿಗೆ ಬಂದಿಳಿದಿದೆ. ಈ ವಿಮಾನದಲ್ಲಿ ಶೇ. 75 ಜೆಟ್‌ ಇಂಧನ ಹಾಗೂ ಶೇ. 25 ಜೈವಿಕ ಇಂಧನ ಬಳಸಲಾಗಿದೆ. ಜತ್ರೋಪಾ ಸಸ್ಯದಿಂದ ತಯಾರಿಸಿದ ಇಂಧನವನ್ನು ಬಳಸುವ ಬಗ್ಗೆ ಡೆಹ್ರಾಡೂನ್‌ನ ಸಿಎಸ್‌ಐಆರ್‌ ಅಭಿವೃದ್ಧಿಪಡಿಸಿದೆ.

Advertisement

ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ ಮತ್ತು ವಿಮಾನಯಾನ ಸಂಸ್ಥೆ ಸ್ಪೈಸ್‌ ಜೆಟ್‌ನ 20ಕ್ಕೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಡೆಹ್ರಾಡೂನ್‌ನಿಂದ 25 ನಿಮಿಷ ಹಾರಾಟ ನಡೆಸಿ ದಿಲ್ಲಿಗೆ ಆಗಮಿಸಿದೆ. ಸ್ಪೈಸ್‌ ಜೆಟ್‌ನ ಬೊಂಬಾರ್ಡಿಯರ್‌ ಕ್ಯೂ400 ವಿಮಾನವನ್ನು ಈ ಪ್ರಯೋಗಕ್ಕೆ ಬಳಸಲಾಗಿತ್ತು. ಜಾಗತಿಕ ವಿಮಾನಯಾನ ಕಂಪೆನಿಗಳ ಸಂಸ್ಥೆ ಐಎಟಿಎ, 2025ರ ವೇಳೆಗೆ ಜೈವಿಕ ಹಾಗೂ ಜೆಟ್‌ ಇಂಧನ ಮಿಶ್ರಣವನ್ನು ಬಳಸಿ ಹಾರಾಡುವ ವಿಮಾನಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next