Advertisement

ಮಂಗಳನ ಕಡೆಗೆ ಕೈ ಚಾಚಿದ ಯು.ಎ.ಇ.

03:38 AM Jul 21, 2020 | Hari Prasad |

ಮಂಗಳಗ್ರಹದ ಅಧ್ಯಯನಕ್ಕೆ ಮುಂದಾಗಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ಸೋಮವಾರ ‘ಹೋಪ್‌’ ಎಂಬ ಉಪಗ್ರಹವನ್ನು ಮಂಗಳನಲ್ಲಿಗೆ ರವಾನಿಸಿದೆ. ಈ ಅಧ್ಯಯನಕ್ಕೆ ‘ಅಲ್‌-ಅಮಿಲ್‌’ ಎಂಬ ಹೆಸರು ಇಡಲಾಗಿದೆ. ಯುಎಇ ಸಂಸ್ಥಾನ ರಚನೆಯಾಗಿ 50ನೇ ವರ್ಷದ ಸಂಭ್ರಮದ ಸ್ಮರಣಾರ್ಥವಾಗಿ ಈ ಸಾಹಸಕ್ಕೆ ಕೈ ಹಾಕಲಾಗಿದೆ.

Advertisement

ಉಡಾವಣೆಯಾಗಿದ್ದು ಯಾವಾಗ?
ಭಾರತೀಯ ಕಾಲಮಾನದ (ಐಎಸ್‌ಟಿ) ಪ್ರಕಾರ, ಸೋಮವಾರ ಮುಂಜಾನೆ 3:28ರ ಸುಮಾರಿಗೆ ಹೋಪ್‌ ಅನ್ನು ಹೊತ್ತ ರಾಕೆಟ್‌, ದಕ್ಷಿಣ ಜಪಾನ್‌ನ ಟ್ಯಾನೆಗೆಶಿಮಾ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಿದೆ. ಜಪಾನ್‌ನ ಮಿಟ್ಸುಬಿಷಿ ಕಂಪನಿ ಈ ರಾಕೆಟನ್ನು ತಯಾರಿಸಿದೆ.

ಯಾವಾಗ ತಲುಪುತ್ತೆ?
ಸುಮಾರು 6,02,070 ಕಿ.ಮೀ.ಗಳವರೆಗೆ ಪ್ರಯಾಣಿಸಲಿರುವ ರಾಕೆಟ್‌, 2021ರ ಫೆಬ್ರವರಿಯಲ್ಲಿ ಮಂಗಳನ ವಾತಾವರಣ ಪ್ರವೇಶಿಸಲಿದೆ. ಆದರೆ, ಅದು ಮಂಗಳನ ಮೇಲೆ ಇಳಿಯುವುದಿಲ್ಲ. ಗ್ರಹವನ್ನು ಗಿರಕಿ ಹೊಡೆಯುತ್ತಲೇ ಮಂಗಳನ ಒಂದು ವರ್ಷದವರೆಗೆ ಅಂದರೆ 687 ದಿನದವರೆಗೆ ಅಧ್ಯಯನ ನಡೆಸಲಿದೆ.

ಮಹತ್ವದ ಪ್ರಯತ್ನ
ಇದೇ ಅಕ್ಟೋಬರ್‌ನಲ್ಲಿ ಮಂಗಳ ಗ್ರಹ, ಭೂಮಿಯ ಸಮೀಪಕ್ಕೆ ಬರುತ್ತಿದ್ದು ಆ ಸುಸಂದರ್ಭವನ್ನು ಬಳಸಿಕೊಂಡು ಮಂಗಳನನ್ನು ಮತ್ತಷ್ಟು ದೀರ್ಘ‌ವಾಗಿ ಅಧ್ಯಯನ ಮಾಡಲು ಅಮೆರಿಕ, ಚೀನ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಚೀನ ಈಗಾಗಲೇ ಟಿಯಾನ್ವೆನ್‌-1 ಎಂಬ ಉಪಕರಣವನ್ನು ಮಂಗಳನತ್ತ ರವಾನಿಸಿದೆ. ಈಗ ಯುಎಇ ಕೂಡ ಈ ಪರಿವೀಕ್ಷಣೆಗೆ ಕೈ ಹಾಕಿದೆ. ಮುಂದಿನ 100 ವರ್ಷಗಳಲ್ಲಿ ಮಂಗಳನಲ್ಲಿ ಮಾನವನ ವಸಾಹತು ನಿರ್ಮಿಸುವ ಉದ್ದೇಶ ಇದರ ಹಿಂದಿದೆ.

ಮಂಗಳನನ್ನು ತಲುಪಲು ಹೋಪ್‌ ಸಾಗಲಿರುವ ದೂರ : 6,02.070 ಕಿ.ಮೀ.

ಕೋಟಿ ರೂ. ಅಧ್ಯಯನಕ್ಕೆ ಯು.ಎ.ಇ ಮಾಡಿರುವ ಖರ್ಚು: 1,010


ಅಧ್ಯಯನ ನಡೆಸುವ ಒಟ್ಟು ದಿನಗಳು: 687


Advertisement
Advertisement

Udayavani is now on Telegram. Click here to join our channel and stay updated with the latest news.

Next