Advertisement
ಹೊಸ ವರ್ಷಕ್ಕೆ ಮಾರ್ಗಸೂಚಿ
Related Articles
Advertisement
-ಆಯೋಜಕರು ಲೈಸೆನ್ಸ್ ಮತ್ತು ಅನುಮತಿ ಪ್ರಕಾರ ನಿರ್ಧರಿತ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
– COVID-19 ಅಥವಾ ಇತರ ಆರೋಗ್ಯ ಸಂಬಂಧಿ ಸರಕಾರದ ಸೂಚನೆಗಳು ಜಾರಿಯಾದಲ್ಲಿ, ಆಯೋಜಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
-ಮದ್ಯದ ಮಾರಾಟ ಮತ್ತು ವಿತರಣೆಗೆ ಆಬಕಾರಿ ಇಲಾಖೆಯಿಂದ ಪೂರ್ವ ಲಿಖಿತ ಅನುಮತಿ ಅಗತ್ಯವಿದೆ.
-ಸಾರ್ವಜನಿಕ ಸ್ಥಳಗಳಲ್ಲಿ (ಬಸ್ ನಿಲ್ದಾಣ, ಉದ್ಯಾನ, ಕ್ರೀಡಾಂಗಣ, ರೈಲು ನಿಲ್ದಾಣ) ಧೂಮಪಾನ ಮತ್ತು ಮದ್ಯಪಾನ ನಿಷೇಧವಾಗಿದೆ.
-ವಿದ್ಯಾರ್ಥಿಗಳು ಅಥವಾ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ಅಥವಾ ಗಲಾಟೆ ವರ್ತನೆ ಮಾಡಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ.
-ಧ್ವನಿಮುದ್ರಣ ವ್ಯವಸ್ಥೆಗಳಿಗೆ ಪೂರ್ವ ಅನುಮತಿ ಅಗತ್ಯವಿದೆ.ಶಬ್ದ ಮಟ್ಟವು Noise Pollution Rules, 2000 ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕು. ಡಿಜಿಗಳು ನಿಷೇಧಿಸಲಾಗಿದೆ.
-ಆಯೋಜಕರು ಅನಾಹುತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
-18 ವರ್ಷದ ಕೆಳಗಿನವರಿಗೆ ಮದ್ಯ ವಿತರಿಸಕೂಡದು. ಪೋಷಕರಿಲ್ಲದ ಅಪ್ರಾಪ್ತರಿಗೆ ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂಧಿತ.
-ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನಗಳು, ಜೂಜು ಮತ್ತು ಇತರ ಅಸಭ್ಯ ಚಟುವಟಿಕೆಗಳು ನಿಷೇಧಿಸಲಾಗಿದೆ.
-ಮಹಿಳೆಯರ ಮೇಲೆ ಕಿರುಕುಳ ನೀಡುವ ಅಥವಾ ಅಸಭ್ಯ ವರ್ತನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗುತ್ತದೆ.
-ಹೊಸ ವರ್ಷದ ಹೆಸರಿನಲ್ಲಿ ಮನೆಗಳಿಗೆ ಅಥವಾ ಹಾಸ್ಟೆಲ್‌ಗಳಿಗೆ ಹೋಗಿ ಶಾಂತಿ ಭಂಗ ಮಾಡುವುದು ನಿಷೇಧ.
-ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಶಬ್ದ ಮಾಡುವುದು ಅಥವಾ ಬಾಟಲಿಗಳನ್ನು ಬೀಸುವುದು ನಿಷೇಧ.
-ಈ Drunk & Drive ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬದಲು sober driver ಅನ್ನು ನಿಯೋಜಿಸಬೇಕು.
-ವಾಹನಗಳ ಜೊತೆ ಚಟುವಟಿಕೆಗಳು (wheeling, drag racing, loud noises)) ನಿಷೇಧ. ವಿಶೇಷ ತಂಡಗಳು ಪಹರೆಯಲ್ಲಿರುತ್ತವೆ.
-ಸಮುದ್ರ ತೀರಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಅಥವಾ ಮದ್ಯಪಾನ ನಿಷೇಧ.
-ಪಟಾಕಿ ಸಿಡಿಸುವುದು ಅಥವಾ ಸಾರ್ವಜನಿಕ ಶಾಂತಿಗೆ ಭಂಗ ಮಾಡುವ ಚಟುವಟಿಕೆ ನಿಷೇಧ.
-ಆಯೋಜಕರು ಅಗತ್ಯ ಅಗ್ನಿಶಾಮಕ ಸಾಧನಗಳು, ತುರ್ತು ವೈದ್ಯಕೀಯ ವಾಹನಗಳು, ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
-ಈ ಮಾರ್ಗಸೂಚಿಗಳು ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಹೊರಡಿಸಲಾಗಿವೆ. ನಾಗರಿಕರು ಮತ್ತು ಆಯೋಜಕರ ಸಹಕಾರ ಶಾಂತ ಮತ್ತು ಸಂತೋಷಕರ ಹೊಸ ವರ್ಷದ ಹಬ್ಬಕ್ಕಾಗಿ ಕೋರಲಾಗುತ್ತದೆ.