Advertisement

ಅಂಗವಿಕಲರಲ್ಲಿ ವಿಶಿಷ್ಟ ಚೈತನ್ಯ ಅಡಕ

12:18 PM Jul 28, 2017 | Team Udayavani |

ಹೊನ್ನಾಳಿ: ಸಮಾಜದಲ್ಲಿ ಮೂಢನಂಬಿಕೆ ಮತ್ತು ಸೂಕ್ತ ಚಿಕಿತ್ಸೆಯ ಕೊರತೆಯಿಂದಾಗಿ ಕಡೆಗಣನೆಗೆ ಒಳಗಾಗಿರುವ ಅಂಗವಿಕಲರು ನಿಜಕ್ಕೂ ಅಸಮರ್ಥರಲ್ಲ, ಶಾಪಗ್ರಸ್ತರು ಅಲ್ಲ. ಅವರೆಲ್ಲರಲ್ಲೂ ವಿಶಿಷ್ಟವಾದ ಚೈತನ್ಯ ಅಡಗಿದ್ದ ಕಾರಣ ಅಂಗವಿಕಲರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಕುಳಗಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ರಾಪಂ ವತಿಯಿಂದ ನಡೆಸಿದ  ಆಶ್ರಯದ ಅರಿವಿನ ಸಿಂಚನ-2017 ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯುಳ್ಳ ಕರಪತ್ರವನ್ನು ಅಂಗವಿಕಲರಿಗೆ ವಿತರಿಸುವ ಮೂಲಕ ಅವರು ಮಾತನಾಡಿದರು. ಅಂಗವಿಕಲರು ತಮಗಿರುವ ಅಂಗಾಂಗದ ನ್ಯೂನ್ಯತೆಯ ಬಗೆಗೆ ಚಿಂತೆಗೊಳಗಾಗದೇ ಆತ್ಮಸ್ಥೈರ್ಯದಿಂದ ಬದುಕುವ ಜೊತೆಗೆ ಸಮಾಜಮುಖೀ ಕಾರ್ಯಗಳಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಳ್ಳುವ ಮೂಲಕ ಸಶಕ್ತರಿಗೆಲ್ಲ ಮಾದರಿದಾಯಕ ಸಾಧನೆ ಮಾಡಿ ತೋರುತ್ತಿರುವುದಕ್ಕೆ ಅಂಗವಿಕಲರೇ ಸಾಕ್ಷಿ ಎಂದು ಹೇಳಿದರು.

ಜಿಪಂ ಸದಸ್ಯ ಜಿ.ವೀರಶೇಖರಪ್ಪ ಮಾತನಾಡಿ, ಕೇಂದ್ರ-ರಾಜ್ಯ ಸರಕಾರಗಳು ದಿವ್ಯಾಂಗರಿಗಾಗಿ ಹಲವಾರು ವಿಶೇಷ ಸೌಲತ್ತುಗಳನ್ನು ಅರ್ಹತೆಯನುಸಾರ ಅನುಷ್ಠಾನಗೊಳಿಸುತ್ತಿದೆ.  ಅಂಗವಿಕಲರೆಲ್ಲರೂ ತಮ್ಮ-ತಮ್ಮ ಗ್ರಾಪಂ ಕಾರ್ಯಾಲಯಗಳಲ್ಲಿ ಕರ್ತವ್ಯ ನಿರತ ಅಂಗವಿಕಲ
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವ ಮೂಲಕ ಸರಕಾರದ ಸೌಲತ್ತುಗಳನ್ನು ಸದ್ಬಬಳಕೆ ಮಾಡಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಎಂ.ಎಸ್‌.ಭಾರತಿ, ತಾಪಂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತೆ ಕೆ.ಎಂ.ಶೈಲಜಾ ಕುಮಾರಿ, ಕಾರ್ಯದರ್ಶಿ ಬಿ.ಆರ್‌.ಹೊನ್ನಪ್ಪ, ನೋಡೆಲ್‌ ಅಧಿ ಕಾರಿ ಸಂತೋಷ್‌, ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಜಿ.ಎಚ್‌. ಸತೀಶ್‌ಕುಮಾರ್‌ ಮಾತನಾಡಿದರು. ಎಪಿಎಂಸಿ ನಿರ್ದೆಶಕ ಜಿ.ವಿ.ಎಂ. ರಾಜು, ಗ್ರಾಪಂ ಉಪಾಧ್ಯಕ್ಷೆ ಎಚ್‌.ಸುಮಾ, ಸದಸ್ಯರಾದ ಎ.ಎಸ್‌.ಹಾಲೇಶಪ್ಪ, ಡಿ.ಬಿ.ರಮೇಶ್‌, ರವಿಪ್ರಕಾಶ್‌, ಮುಖಂಡರಾದ ಸಿ.ರುದ್ರಪ್ಪ, ಸಿ.ಭೈರಪ್ಪ, ಎಸ್‌.ನಾಗರಾಜಪ್ಪ, ಕೆ.ಪಿ.ರಾಜಪ್ಪ, ಡಿ.ಮಂಜಪ್ಪ, ಕೆ.ಎಂ.ಮಲ್ಲಿಕಾರ್ಜುನಪ್ಪ, ಪಿ.ಎಸ್‌. ಈಶ್ವರ್‌, ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ರಾಜಶೇಖರ್‌, ಮುಜಾಹಿದ್‌ ಬಾಷಾ, ಸುರೇಶ್‌, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿಯವರು  ಹಾಗೂ ಕುಳಗಟ್ಟೆ-ಹನುಮನಹಳ್ಳಿ ಗ್ರಾಮಗಳ ಅಂಗವಿಕಲರು,  ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next