Advertisement

ಅಪ್ಪಟ ದೇಶ ಭಕ್ತ ಧ್ಯಾನಚಂದ್‌

11:05 AM Aug 31, 2017 | |

ಶಹಾಬಾದ: ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ರ ಜನ್ಮದಿನವಾದ ಆ. 29ನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ
ಆಚರಿಸುತ್ತಿದ್ದೆವೆ ಎಂದು ದೈಹಿಕ ಶಿಕ್ಷಕ ಈರಣ್ಣ ಕೆಂಭಾವಿ ಹೇಳಿದರು. ಭಂಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ಹೊಂದಿದ್ದ ಧ್ಯಾನಚಂದ್‌ ಭಾರತೀಯ ಸೈನ್ಯದಲ್ಲಿ ಉತ್ತಮವಾಗಿ ಹಾಕಿ ಆಡುವ ಶೈಲಿ ಗಮನಿಸಿ ಅವರನ್ನು ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ನೆದರ್‌ಲ್ಯಾಂಡ್‌, ಅಮೆರಿಕಾ ಹಾಗೂ ಜರ್ಮನಿಯಲ್ಲಿ ನಡೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಹ್ಯಾಟ್ರಿಕ್‌ ಗೋಲ್ಡ್‌ ಮೆಡಲ್‌ ಗಳನ್ನು ತಂದು ಕೊಡುವುದರಲ್ಲಿ ಅವರು ಮುಖ್ಯ ಪಾತ್ರವಹಿಸಿದ್ದರು. ಅದರಲ್ಲೂ ಜರ್ಮನಿಯ ಬರ್ಲಿನ್‌ ನಲ್ಲಿ ಭಾರತ ಹಾಗೂ ಜರ್ಮನಿಯ ನಡುವೆ ನಡೆದ ಹಣಾಹಣಿಯಲ್ಲಿ ಭಾರತ 8-1 ಅಂತರದಿಂದ ಗೆದ್ದು, ಚಿನ್ನದ ಪದಕ ಗೆದ್ದಿದ್ದರು. ಅದರಲ್ಲಿ
ಆರು ಗೋಲುಗಳು ಧ್ಯಾನಚಂದ್‌ ಅವರದಾಗಿತ್ತು. ಇವರ ಆಟದ ವೈಖರಿ, ಶೈಲಿ ಕಂಡ ಹಿಟ್ಲರ್‌ ಅವರನ್ನು ಕರೆಯಿಸಿ
ನೀವು ಜರ್ಮನಿಗೆ ಬಂದು ಬಿಡಿ. ನಿಮ್ಮನ್ನು ನಮ್ಮ ಸೇನೆಯ ಸರ್ವೋಚ್ಚ ನಾಯಕನನ್ನಾಗಿ ಮಾಡುತ್ತೇನೆ ಎಂದು
ಹೇಳಿದಾಗ ಭಾರತ ನನ್ನ ದೇಶ, ಅಲ್ಲಿ ನಾನು ಚೆನ್ನಾಗಿದ್ದೆನೆ ಎಂದು ಅಪ್ಪಟ ದೇಶಪ್ರೇಮಿಯಾಗಿ ಉತ್ತರಿಸಿದ್ದರು
ಮೇಜರ್‌ ಧ್ಯಾನಚಂದ್‌ ಎಂದು ಶ್ಲಾಘಿಸಿದರು. ಶಿಕ್ಷಕ ಎಂ.ಡಿ. ಜಕಾತೆ ದತ್ತಪ್ಪ ಕೊಟನೂರ್‌, ವಿಷ್ಣುತೀರ್ಥ ಆಲೂರ,
ಸೀತಮ್ಮ.ಎನ್‌, ಶಾಂತಮಲ್ಲ ಶಿವಭೋ, ಕಾಶಿಬಾಯಿ ನಾಯಕ, ಮರಲಿಂಗ ಯಾದಗಿರಿ ಹಾಗೂ ವಿದ್ಯಾರ್ಥಿಗಳು
ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next