Advertisement

Paris Olympics; ನಿರ್ಭೀತಿಯಿಂದ ಆಡಿ: ಹಾಕಿ ತಂಡಕ್ಕೆ ಅಶೋಕ್‌ ಧ್ಯಾನ್‌ಚಂದ್‌ ಸಲಹೆ

11:27 PM Jul 19, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಿರ್ಭೀತಿಯಿಂದ ಹಾಗೂ ಸ್ವತ್ಛ ಮನಸ್ಥಿತಿಯಿಂದ ಆಡಿ ಎಂಬುದಾಗಿ ಲೆಜೆಂಡ್ರಿ ಹಾಕಿಪಟು ಮೇಜರ್‌ ಧ್ಯಾನ್‌ಚಂದ್‌ ಅವರ ಪುತ್ರ, ಅಶೋಕ್‌ ಕುಮಾರ್‌ ಧ್ಯಾನ್‌ಚಂದ್‌ ಸಲಹೆ ನೀಡಿ ಶುಭ ಹಾರೈಸಿದ್ದಾರೆ.

Advertisement

“ಭಾರತದ ಗುಂಪಿನಲ್ಲಿ ಬಲಿಷ್ಠ ಆಸ್ಟ್ರೇಲಿಯ, ಬೆಲ್ಜಿಯಂ, ಆರ್ಜೆಂಟೀನ ಜತೆಗೆ ಐರ್ಲೆಂಡ್‌ ಮತ್ತು ನ್ಯೂಜಿ ಲ್ಯಾಂಡ್‌ ತಂಡಗಳಿವೆ. ಇವು ಯಾವತ್ತೂ ಭಾರತಕ್ಕೆ ಬಲಿಷ್ಠ ಸವಾಲು ನೀಡುತ್ತವೆ. ಇದೊಂದು ಕಠಿನ ಗುಂಪು. ಹೀಗಾಗಿ ಭಾರತ ನಿರ್ಭಯವಾಗಿ ಆಡಬೇಕಾದ ಅಗತ್ಯವಿದೆ’ ಎಂಬುದಾಗಿ ಅಶೋಕ್‌ ಕುಮಾರ್‌ ಹೇಳಿದರು.

ಇತ್ತೀಚಿನ 5 ಪಂದ್ಯಗಳ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ ಶರಣಾಗಿತ್ತು. ಯುರೋಪಿಯನ್‌ ಲೆಗ್‌ ಪ್ರೊ ಲೀಗ್‌ನಲ್ಲೂ ಭರವಸೆ ಮೂಡಿಸಿಲ್ಲ. ಇದು ಒಲಿಂಪಿಕ್ಸ್‌ ಅಭ್ಯಾಸದ ಹಿನ್ನೆಲೆ ಯಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಇಲ್ಲಿ ಯಾವುದೂ ಭಾರತದ ಯೋಜನೆ ಯಂತೆ ಸಾಗಲಿಲ್ಲ. ಹೀಗಾಗಿ 9 ತಂಡ ಗಳ ಸ್ಪರ್ಧೆಯಲ್ಲಿ 7ನೇ ಸ್ಥಾನಕ್ಕೆ ಕುಸಿಯ ಬೇಕಾಯಿತು. ಇದನ್ನೆಲ್ಲ ಮರೆತು, ಸ್ವತ್ಛ ಮನಸ್ಥಿತಿಯಿಂದ ಆಡಿದರೆ ಯಶಸ್ಸು ಸಾಧ್ಯ ಎಂದು ಸಲಹೆಯಿತ್ತರು.

ಒಂದು ಕಾಲದಲ್ಲಿ ಒಲಿಂಪಿಕ್ಸ್‌ ಹಾಕಿ ಸಮ್ರಾಟನಾಗಿ ಮೆರೆದಿದ್ದ ಭಾರತ, ಸತತ 6 ಚಿನ್ನದ ಪದಕಗಳನ್ನು ಗೆದ್ದ ಅಸಾಮಾನ್ಯ ಸಾಧನೆಗೈದಿತ್ತು. ಮೊದಲು 3 ಚಿನ್ನದ ಗೆಲುವಿನ ವೇಳೆ ಮೇಜರ್‌ ಧ್ಯಾನ್‌ಚಂದ್‌ ಭಾರತದ ಹೀರೋ ಆಗಿದ್ದರು. ಭಾರತ 10 ಒಲಿಂಪಿಕ್ಸ್‌ ಚಿನ್ನಗಳಲ್ಲಿ 8 ಹಾಕಿಯಲ್ಲೇ ಒಲಿದಿತ್ತು ಎಂಬುದನ್ನು ಮರೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next