Advertisement

ಧ್ಯಾನ್‌ಚಂದ್‌ಗೆ ಭಾರತ ರತ್ನ ನೀಡಿ,ಪ್ರಧಾನಿಗೆ ಪತ್ರ

03:04 PM Jun 08, 2017 | Team Udayavani |

ಹೊಸದಿಲ್ಲಿ: ಹಾಕಿ ದಂತಕತೆ ಧ್ಯಾನ್‌ಚಂದ್‌ ಅವರಿಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ ನೀಡುವಂತೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ.

Advertisement

ಹಾಕಿಗೆ ಧ್ಯಾನ್‌ಚಂದ್‌ ಸಲ್ಲಿಸಿದ ಸೇವೆ ಅಮೋಘವಾದದ್ದು. ಅವರಿಗೆ ನಾಗರಿಕ ಅತ್ಯುನ್ನತ ಪುರಸ್ಕಾರ “ಭಾರತ ರತ್ನ’ ಗೌರವ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಧ್ಯಾನ್‌ಚಂದ್‌ ಕೇವಲ ಹಾಕಿಗೆ ಮಾತ್ರವಲ್ಲ. ಇತರೆ ಕ್ರೀಡೆಗೂ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ತಿಳಿಸಿದ್ದಾರೆ.

ಈ ವಿಷಯದಲ್ಲಿ ಪ್ರಧಾನಿಯವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತ ಶಕ್ತಿಯಾಗಿ ಹೊರಹೊಮ್ಮಬೇಕು ಅನ್ನುವುದನ್ನು ಪ್ರಧಾನಿಯವರು ಬಯಸುತ್ತಿದ್ದಾರೆ. ಹೀಗಾಗಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ಗೋಯಲ್‌ ತಿಳಿಸಿದರು.

ಧ್ಯಾನ್‌ಚಂದ್‌ ಪ್ರತಿನಿಧಿಸಿದ್ದ 1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಅನೇಕ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಪದಕ ಗೆದ್ದಿದೆ. ಹೀಗಾಗಿ ಹಲವು ವರ್ಷ ಗಳಿಂದ ಧ್ಯಾನ್‌ಚಂದ್‌ಗೆ ಭಾರತ ರತ್ನ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next