Advertisement
ಹಾಕಿ ಮಾಂತ್ರಿಕ1936ರ ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದ ಬಳಿಕ ಧ್ಯಾನ್ಚಂದ್ರ ಆಟ ನೋಡಲೆಂದೇ ಪ್ರೇಕ್ಷಕರು ಮುಗಿಬೀಳುತ್ತಿದ್ದರು. “ಹಾಕಿ ಆಟ ಇದೀಗ ಮ್ಯಾಜಿಕ್ ಶೋ ಆಗಿ ಪರಿವರ್ತನೆಯಾಗಿದೆ. ಭಾರತದ ಹಾಕಿ ಮಾಂತ್ರಿಕ ಧ್ಯಾನ್ಚಂದ್ರ ಆಟ ನೋಡಲು ತಪ್ಪದೇ ಕ್ರೀಡಾಂಗಣಕ್ಕೆ ಬನ್ನಿ ‘ ಎಂದು ಜರ್ಮನ್ ಪತ್ರಿಕೆಯೊಂದು ವರದಿ ಮಾಡಿತ್ತು.
ಇವರ ಹಾಕಿ ಆಟಕ್ಕೆ ಮನಸೋತಿದ್ದ ಅಡಾಲ್ಫ್ ಹಿಟ್ಲರ್ ಜರ್ಮನ್ ತಂಡಕ್ಕಾಗಿ ಆಡುವಂತೆ ಹಲವು ಆಮಿಷಗಳನ್ನು ಒಡ್ಡಿದ್ದ. ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ ಮತ್ತು ಕರ್ನಲ್ ಗೌರವ ನೀಡುವುದಾಗಿ ತಿಳಿಸಿದರೂ ಧ್ಯಾನ್ಚಂದ್ ಅವರು ಮಾತ್ರ ಇದಾವುದಕ್ಕೂ ಒಪ್ಪಿರಲಿಲ್ಲ. ಎರಡನೇ ವಿಶ್ವಯುದ್ಧದ ಬಳಿಕ ಸ್ವಲ್ಪ ಕಾಲ ಮಾತ್ರ ಆಡಿದ ಇವರು 1948ರಲ್ಲಿ ನಿವೃತ್ತರಾದರು. ಡಿಸೆಂಬರ್ 3, 1979ರಂದು
ನಿಧನ ಹೊಂದಿದರು.
ಪಂದ್ಯವೊಂದರಲ್ಲಿ ಧ್ಯಾನ್ಚಂದ್ ಅವರಿಗೆ ಒಂದೂ ಗೋಲ್ ಬಾರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ರೆಫರಿಯೊಂದಿಗೇ ವಾಗ್ವಾದಕ್ಕಿಳಿದಿದ್ದ ಅವರು, ಕ್ರೀಡಾಂಗಣದಲ್ಲಿರುವ ಗೋಲ್ ಪೋಸ್ಟ್ ಅಳತೆ ಸರಿ ಇಲ್ಲ. ಅಂತಾರಾಷ್ಟ್ರೀಯ ನಿಯಮಗಳಿಗೆ ಇದು ವಿರುದ್ಧವಾಗಿದೆ ಎಂದು ದೂರಿದ್ದರು. ಇವರ ಮಾತಿನಂತೆಯೇ ಅಳತೆ ಮಾಡಿದಾಗ ಧ್ಯಾನ್
ಚಂದ್ರ ಅಭಿಪ್ರಾಯ ಅಕ್ಷರಶಃ ನಿಜವಾಗಿತ್ತು.
Related Articles
1928ರಲ್ಲಿ ಭಾರತೀಯ ಹಾಕಿ ತಂಡ ಸೇರಿದ್ದ ಇವರಿಗೆ ನೆದರ್ಲ್ಯಾಂಡ್ನ ಆಮ್ಸ್ಟೆರ್ಡ್ಯಾಮ್ನಲ್ಲಿ ಆಯೋಜಿಸಲಾಗಿದ್ದ ಬೇಸಗೆಯ ಒಲಂಪಿಕ್ಸ್ನಲ್ಲಿ ಭಾಗವಹಿಸುವ ಸುವರ್ಣಾವಕಾಶ ದೊರೆಯಿತು. ನೆದರ್ಲ್ಯಾಂಡ್ ವಿರುದ್ಧ 3-0 ಗೋಲ್ಗಳಲ್ಲಿ 2 ಗೋಲು ಬಾರಿಸುವ ಮೂಲಕ ಸಿಕ್ಕ ಮೊದಲ ಅವಕಾಶ ಸದ್ವಿನಿಯೋಗಿಸಿದ್ದ ಧ್ಯಾನ್ಚಂದ್ ಅವರು ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದರು. 1932 ಮತ್ತು 1936ರ ಒಲಿಂಪಿಕ್ಸ್ನಲ್ಲಿ ಬಂಗಾರದ ಪದಕ ಗೆದ್ದಿದ್ದ ಭಾರತ ತಂಡದ ಸದಸ್ಯರೂ ಇವರಾಗಿದ್ದರು. ಆಡಿದ ಮೂರು ಒಲಿಂಪಿಕ್ಸ್ ಪಂದ್ಯಾಟಗಳಲ್ಲಿ ಧ್ಯಾನ್ಚಂದ್ ಭಾರಿಸಿದ್ದ ಗೋಲ್ಗಳ ಸಂಖ್ಯೆ ಬರೋಬ್ಬರಿ 33.
Advertisement
- ರಾಕೇಶ್, ಎಚ್.ಎಸ್. ಸಕ್ಲೇಶಪುರ