Advertisement

The Railyway Men: ಆ ದುರಂತವನ್ನು ಮತ್ತೆ ನೆನಪಿಸುವ ದಿ ರೈಲ್ವೇ ಮೆನ್‌

01:20 PM Dec 13, 2023 | Team Udayavani |

ಅದೊಂದು ನಗರ, ಅದರ ಮಧ್ಯದಲ್ಲೇ ಒಂದು ದೊಡ್ಡ ಕಾರ್ಖಾನೆ. ಅದರ ಉದರದೊಳಗೆ ಟನ್‌ಗಟ್ಟಲೇ ಮಿತೈಲ್‌ ಐಸೋಸಯನೈಡ್‌ MIC ಎಂಬ ಕಾರ್ಕೊಟಕ ರಾಸಾಯನಿಕ ಇದೆ. ಅದಕ್ಕೆ ಒಂದು ಹನಿ ನೀರು ಬಿದ್ದರೂ ಆ ಕಾರ್ಕೊಟಕ ರಾಸಾಯನಿಕ ಗಾಳಿಯಲ್ಲಿ ಪಸರಿಸಿ ಕಾರ್ಖಾನೆಯಲ್ಲಿ ಕೆಲಸ ಮಾಡುವವರು ಯಾರೂ ಬದುಕುಳಿಯುವುದಿಲ್ಲ. ಆದರೆ ಆ ಕಾರ್ಖಾನೆ ಪಾಶ್ಚಾತ್ಯರದ್ದು. ಅದರಿಂದ ನೂರಾರು ಕೋಟಿ ಲಾಭ ಮಾಡುವ ಅವರು ಆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಂದಿಯ ಬಗ್ಗೆ ತಲೆ ಕೆಡೆಸಿಕೊಳ್ಳಲೂ ತಯಾರಿಲ್ಲ,

Advertisement

ಅಲ್ಲಿನ ಎಷ್ಟೋ ಸುರಕ್ಷಾ ಉಪಕರಣಗಳು ಹಾಳಾಗಿ ವರ್ಷಗಳೇ ಕಳೆದಿವೆ. ಅದರ ಬಗ್ಗೆ ಮೇಲಿನವರೂ ಕ್ಯಾರೆ ಎನ್ನುವುದಿಲ್ಲ. ಕೇಳಿದರೆ “ನಷ್ಟದಲ್ಲಿರುವ ಕಾರ್ಖಾನೆಗೆ ಯಾಕೆ ಬಂಡವಾಳ ಹಾಕಬೇಕು, ಆಕಸ್ಮಾತ್‌ ಯಾರಾದರೂ ಸತ್ತರೂ ಅವರ ಕುಟುಂಬಕ್ಕೆ ಒಂದಿಷ್ಟು ಪುಡಿಗಾಸು ಕೊಟ್ಟು ಅದನ್ನು ಮುಚ್ಚಿಹಾಕಿದರೆ ಮುಗಿಯಿತು, ಹೇಗಿದ್ದರೂ ಸತ್ತವರು ಭಾರತೀಯರಲ್ಲವೇ’ ಎನ್ನುವ ದೋರಣೆ ಆ ಕಾರ್ಖಾನೆಯ ಆಡಳಿತ ಮಂದಿಯದ್ದು. ಆದರೆ ಆ ರಾತ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವನ ಅಚಾತುರ್ಯದಿಂದ ಟನ್‌ಗಟ್ಟಲೇ ಇದ್ದ ಆ ಕಾರ್ಕೊಟಕ ವಿಷಕ್ಕೆ ನೀರು ಬಿದ್ದು ಅಲ್ಲೊಂದು ಮಹಾ ದುರಂತವೇ ಸಂಭವಿಸುತ್ತದೆ. ಅಲ್ಲಿ ಸತ್ತದ್ದು ಸುಮಾರು ಹದಿನೈದು ಸಾವಿರ ಜನ, ಸರಕಾರದ ದಾಖಲೆಗಳ ಪ್ರಕಾರ !!

ಹೌದು, ನಿಮ್ಮ ಊಹೆ ಸರಿಯಾಗಿದ್ದರೆ ಅದೇ ಘಟನೆ. ಭೂಪಾಲ್‌ ಅನಿಲ ದುರಂತ. 1984ರಲ್ಲಿ ನಡೆದ ಈ ದುರಂತ ಭಾರತದಲ್ಲಿ ನಡೆದ ಅತ್ಯಂತ ಭೀಕರ ಅನಿಲ ದುರಂತಗಳಲ್ಲೊಂದು. ಈ ಘಟನೆ ಬಗ್ಗೆ ಸಾಮಾನ್ಯವಾಗಿ ಬಹುತೇಕರಿಗೆ ಒಂದಿಷ್ಟು ಮಾಹಿತಿಯಾದರೂ ಇರುತ್ತದೆ. ಆದರೆ ದಿ ರೈಲ್ವೆ ಮೆನ್‌ ಆ ಭಯಾನಕ ಘಟನೆಯ ಅನಂತರ ನಡೆದ ಅತ್ಯದ್ಭುತ ಸಾಹಸ ಕತೆಯನ್ನು ತೆರೆದಿಡುತ್ತದೆ. ಎಷ್ಟೋ ಜನರ ಜೀವವನ್ನು ಉಳಿಸಿದ ಆನ್‌ ಟೊಲ್ಡ್ ಸ್ಟೋರಿಯನ್ನು ಈ ಸರಣಿ ಕಟ್ಟಿಕೊಡುತ್ತದೆ. ನಾಲ್ಕು ಎಪಿಸೋಡನಲ್ಲಿ ಆ ಅನಿಲ ದುರಂತದ ಒಟ್ಟಾರೆ ಚಿತ್ರಣವನ್ನು ತೆರೆದಿಡಲು ಈ ಸರಣಿ ಪ್ರಯತ್ನಿಸುತ್ತದೆ. ಮಾಧವನ್‌, ಕ್ಯಾ ಕ್ಯಾ ಮೆನನ್‌, ಬಬಿಲ್‌ ಖಾನ್‌ ಅವರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದಿಷ್ಟು ಕಡೆಗಳಲ್ಲಿ ಫ್ಯಾಂಟಸಿ ಎನ್ನುವಂತೆ ಕಂಡರೂ, ನಿಜವಾದ ಕತೆಯನ್ನು ನೋಡುಗನಿಗೆ ತಲುಪಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ.

ಆದರೆ ಅದಕ್ಕೂ ದುರಂತವೆಂದರೆ, ಆ ಘಟನೆಯ ಅನಂತರ ಸತ್ತವರಿಗೆ ನ್ಯಾಯ ಸಿಗುವುದು ಸಾಯಲಿ, ಸಾವಿರಾರು ಭಾರತೀಯರ ಸಾವಿಗೆ ಮತ್ತು ಲಕ್ಷಾಂತರ ಕುಟುಂಬಗಳನ್ನು ಬೀದಿಗೆ ದಬ್ಬಿದ ಆ ಭೀಕರ ಘಟನೆಗೆ ಕಾರಣವಾದ ಯೂನಿಯನ್‌ ಕಾರ್ಬೈಡ್‌ ಕಂಪನಿ ಇನ್ನೂ ಭಾರತದಲ್ಲಿ ಜೀವಂತವಾಗಿದೆ. ಇನ್ನೂ ಸಾವಿರಾರು ಜನರು ಶಪಿಸುತ್ತಲೇ ಇರುವ ಆ ಕಂಪನಿಯ ಉತ್ಪನ್ನಗಳು ಯುನಿಲಿವರ್‌. ನಮ್ಮ ರೈತರು ಬಳಸುವ ಬಹಳಷ್ಟು ಕ್ರಿಮಿನಾಶಕಗಳು, ಎವರಿ ಡೇಭಿ ಹೆಸರಿನ ಬ್ಯಾಟರಿ ಸೆಲ್‌ಗ‌ಳು, ಪ್ರಸಿದ್ಧ ಸಾಬೂನು ಲೈಫ್ಬಾಯ್‌, ಡವ್‌, ಕಂಫ‌ರ್ಟ್‌ ಈ ಕಂಪನಿಯ ಪ್ರಮುಖ ಉತ್ಪನ್ನಗಳು ಹೆಸರಿನಲ್ಲಿ ನಮ್ಮ ಮನೆಯೊಳಗೇ ಇನ್ನೂ ರಾಜಾರೊಷವಾಗಿ ಆ ದುರಂತಕ್ಕೆ ಸಾಕ್ಷಿ ಹೇಳುತ್ತಿವೆ.

-ಸಂಜಯ್‌

Advertisement

ಚಿತ್ರದುರ್ಗ

 

 

Advertisement

Udayavani is now on Telegram. Click here to join our channel and stay updated with the latest news.

Next