Advertisement

ಕಸದ ಕೊಂಪೆಯಂತಾದ ವೇಮಗಲ್‌ ಪಟ್ಟಣ

02:01 PM Jan 31, 2021 | Team Udayavani |

ವೇಮಗಲ್‌: ಸ್ವತ್ಛ ಭಾರತ ಇಡೀ ದೇಶದಲ್ಲಿ ಜಾರಿಯಲ್ಲಿದ್ದರೂ ವೇಮಗಲ್‌ ಪಟ್ಟಣದಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ಗ್ರಾಮದ ಮುಖ್ಯ ರಸ್ತೆಗಳಲ್ಲಿ ನೂರಾರು ಮೀಟರ್‌ಗಳ ವರೆಗೆ ಕಸ ರಾಶಿ ರಾಶಿಯಾಗಿ ಬಿದ್ದಿದೆ.

Advertisement

ಸಾಂಕ್ರಾಮಿಕ ರೋಗ ಭೀತಿ: ಇತ್ತೀಚಿಗೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ವೇಮಗಲ್‌ನಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿಯೇ ಕಾಣಿಸುತ್ತದೆ. ಇನ್ನೂ ಕೋಲಾರ ರಸ್ತೆಯ ಕೆರೆಯ ಬಳಿ ಕಸದ ರಾಶಿ ಜೊತೆ ನೀರು ಬೆರೆತು ಕೊಳೆತು ದುರ್ವಾಸನೆ ಬೀರುತ್ತಿದೆ. ಈ ಭಾಗದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯು ಜನರಲ್ಲಿ ಶುರುವಾಗಿದೆ.

ಕಸಾಂಗಣ: ಇನ್ನೂ ಗ್ರಾಮ ಪಂಚಾಯ್ತಿಯ ಎದುರಲ್ಲೇ ಇರುವ ಮಿನಿ ಕ್ರೀಡಾಂಗಣದ ಕಥೆ ಹೇಳುವುದೇ ಬೇಡ, ಇದು ಕ್ರೀಡಾಂಗಣದ ಬದಲು ಕಸಾಂಗಣವಾಗಿ ಮಾರ್ಪಟ್ಟಿದೆ. ಇನ್ನೂ ಸೀತಿ ರಸ್ತೆಯ ಕುಡಿಯುವ ನೀರಿನ ಘಟಕದ ಬಳಿ, ಎ ಬ್ಲಾಕ್‌ನ ಮುಖ್ಯ ರಸ್ತೆಗಳಲ್ಲಿ, ಇದೇ ರೀತಿ ಖಾಲಿ ಜಾಗಗಳಲ್ಲಿ ಕಸ ರಾಶಿ ರಾಶಿಯಾಗಿ ಸಂಗ್ರಹವಾಗಿದೆ.

ಕಸ ಹಾಕಲು ತೊಟ್ಟಿಗಳಿಲ್ಲ: ಇದಕ್ಕೆಲ್ಲ ಕಾರಣ ವೇಮಗಲ್‌ ಯಾವುದೇ ಭಾಗದಲ್ಲಿಯೂ ಒಂದೇ ಒಂದು ಕಸ ಸಂಗ್ರಹಣ ತೊಟ್ಟಿಗಳಿಲ್ಲ, ಇನ್ನೂ ಸುತ್ತಮುತ್ತಲಿನ ಹಳ್ಳಿಯ ಜನ, ಕಚೇರಿ, ವ್ಯಾಪಾರ, ವ್ಯವಹಾರ, ಬಸ್‌ ಸೌಕರ್ಯ ಕ್ಕಾಗಿ ಭೇಟಿ ನೀಡುವ ವೇಮಗಲ್‌ ಬಸ್‌ ನಿಲ್ದಾಣದ ಸರ್ಕಲ್‌ನಲ್ಲಿಯೇ ಯಾವುದೇ ಕಸ ಸಂಗ್ರಹಣ ತೊಟ್ಟಿ ಇಡದಿರುವುದು ಗ್ರಾಪಂ ಸ್ವತ್ಛತೆಗೆ ಎಷ್ಟು ಆದ್ಯತೆ ನೀಡುತ್ತದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ:ತೆರಿಗೆಯನ್ನು ಹೇಗೆ ಉಳಿಸಬಹುದು ?  ಇಲ್ಲಿದೆ ಸಂಪೂರ್ಣ ಮಾಹಿತಿ

Advertisement

ನಿತ್ಯ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಿ

ಗ್ರಾಮ ಪಂಚಾಯತ್‌ನಿಂದ ಪಟ್ಟಣ ಪಂಚಾಯ್ತಿಯಾಗಿ ಪರಿವರ್ತನೆಯಾಗುತ್ತಿರುವ ವೇಮಗಲ್‌ ಸ್ಥಳೀಯ ಆಡಳಿತಕ್ಕೆ ಸಂಬಂಧಪಟ್ಟವರು ಇನ್ನಾದರೂ ವೇಮಗಲ್‌ ಪಟ್ಟಣದ ಪ್ರಮುಖ ವೃತ್ತದ ಬಳಿ ಕನಿಷ್ಠ 6-8 ಕಸದ ಬುಟ್ಟಿಗಳನಿಟ್ಟು, ನಿತ್ಯ ಕಸ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪಟ್ಟಣದಲ್ಲಿ ಸ್ವತ್ಛತೆ ಕಾಪಾಡಬೇಕಾಗಿದೆ. ವೇಮಗಲ್‌ ಪ್ರತಿ ರಸ್ತೆಗೆ ಕನಿಷ್ಠ ಒಂದಾದರೂ ಕಸ ಸಂಗ್ರಹಣ ತೊಟ್ಟಿಗಳನ್ನು ಇಟ್ಟು, ಇದರಲ್ಲಿ ಸಂಗ್ರಹವಾಗುವ ಕಸವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಿ ಇಡೀ ಪಟ್ಟಣವನ್ನು ಸ್ವತ್ಛ ಪಟ್ಟಣವಾಗಿ ಮಾದರಿಯಾಗಿಸಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next