ದೊಡ್ಡಬಳ್ಳಾಪುರ: ಮುಚ್ಚಲಾಗಿದ್ದ ನಗರಸಭೆಗೆ ಸೇರಿದ ನಗರದ ಕೊಂಗಾಡಿಯಪ್ಪ ಬಸ್‌ನಿಲ್ದಾಣದಲ್ಲಿದ ಶೌಚಾಲಯಗಳು ತೆರೆದಿವೆ.ಗುತ್ತಿಗೆ ವಿಚಾರವಾಗಿ ಗೊಂದಲದಿಂದಶೌಚಾಲಯಗಳ ಬಾಗಿಲು ಮುಚ್ಚಲಾಗಿತ್ತು.ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕರುಶೌಚಾಲಯವಿಲ್ಲದೇ ತೊಂದರೆ ಅನುಭವಿಸಿದ್ದರು.
ಈ ಶೌಚಾಲಯಗಳು ಬಂದ್ ಮಾಡಿದ್ದವರದಿ ಉದಯವಾಣಿ ದಿನ ಪತ್ರಿಕೆಯಲ್ಲಿಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಬೇಗಇತ್ಯರ್ಥಪಡಿಸುವಂತೆ ಸಾರ್ವಜನಿಕರು ದೂರಿದ್ದಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಶೌಚಾಲಯಗಳಬಳಿಗೆ ಶಾಸಕ ಟಿ.ವೆಂಕಟರಮಣಯ್ಯ ಭೇಟಿನೀಡಿ, ಗುತ್ತಿಗೆದಾರರು ಹಾಗೂ ನಗರಸಭೆಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಆದೇಶ ನೀಡಿದರೆ ತೆಗೆಯಲು ಅಡ್ಡಿಯಿಲ್ಲ: ಕೊರೊನಾಲಾಕ್‌ಡೌನ್‌ನಿಂದ ಶೌಚಾಲಯಕ್ಕೆ ಜನರು ಬರದೇ ಶೌಚಾಲಯದ ನಿರ್ವಹಣೆ ನಮಗೂ ಕಷ್ಟವಾಗಿದೆ. ಈ ಸಮಯದಲ್ಲಿನಗರಸಭೆಯಿಂದ ನಮಗೆ ಕಾರ್ಯಾದೇಶವನ್ನು ನೀಡದೆ ಹಾಗೂ 4ತಿಂಗಳ ಶುಲ್ಕ ಕಡಿತ ಮಾಡುವ ಬಗ್ಗೆ ನಮಗೆ ಸ್ಪಷ್ಟವಾಗಿ ಹೇಳದೆ,ಶುಲ್ಕ ವಸೂಲಿ ಮಾಡಬೇಡಿ ಎಂದರೆ ಶೌಚಾಲಯ ನಿರ್ವಹಿಸುವುದು ಹೇಗೆ. ಇದರಿಂದ ನಾವು ಅನಿವಾರ್ಯ ವಾಗಿ ಶೌಚಾಲಯದ ಬಾಗಿಲು ಮುಚ್ಚಿದ್ದೇವೆ.
ನಮಗೆ ಕಾರ್ಯಾದೇಶ ನೀಡಿದರೆತೆಗೆಯಲು ಅಡ್ಡಿಯಿಲ್ಲ ಎಂದು ಗುತ್ತಿಗೆದಾರರಾದ ಮಂಜುನಾಥ್, ನಾಗರಾಜ್ ಹೇಳಿದರು.ಕೊರೊನಾ ದಿಂದ ಶೌಚಾಲಯಗುತ್ತಿಗೆದಾರ ರಿಗೆ ಕಾರ್ಯಾದೇಶನೀಡುವ ಕುರಿತು ವಿಳಂಬ ವಾಗಿದೆ.ಇದನ್ನು ಜಿಲ್ಲಾಧಿಕಾ ರಿಗಳ ಗಮನಕ್ಕೆತರಲಾಗಿದೆ ಎಂದು ನಗರ ಸಭೆಯಕಂದಾಯಾಧಿಕಾರಿ ರವೀಂದ್ರ ಜಾಯಗೊಡೆ ಮತ್ತು ಕಂದಾಯ ನಿರೀಕ್ಷಕನಾರಾ ಯಣ್ ತಿಳಿಸಿದರು.ಸಾರ್ವಜನಿಕರಿಗೆ ತೊಂದರೆ ಸರಿಯಲ್ಲ: ಶಾಸಕಟಿ.ವೆಂಕಟರಮಣಯ್ಯ ಮಾತನಾಡಿ, ಬಸ್‌ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆಶೌಚಾಲಯಗಳ ಅಗತ್ಯ ಹೆಚ್ಚಿದೆ.
ಗುತ್ತಿಗೆವಿಚಾರ ಏನೇ ಇದ್ದರೂ, ಸಾರ್ವಜನಿಕರಿಗೆತೊಂದರೆಕೊಡುವುದು ಸರಿಯಲ್ಲ. ನಿಗದಿತಶುಲ್ಕ ವಸೂಲಿ ಮಾಡದೇ ಗುತ್ತಿಗೆದಾರರುಶೌಚಾಲಯಗಳನ್ನು ನಡೆಸುವುದು ಕಷ್ಟ. ಕೊರೊನಾದಿಂದಅವರಿಗೂ ನಷ್ಟವಾಗಿದೆ. ಇವೆಲ್ಲವನ್ನೂ ಪರಿಗಣಿಸಿಗುತ್ತಿಗೆದಾರರಿಗೆ 3 ತಿಂಗಳು ಹೆಚ್ಚುವರಿ ಅವಧಿ ನೀಡಿ, ನಂತರಮುಂದಿನ ವರ್ಷದ ಗುತ್ತಿಗೆ ಟೆಂಡರ್ ಕರೆಯುವಂತೆಸೂಚಿಸಿದರು. ಚರ್ಚೆ ನಂತರ ಮುಚ್ಚಿದ್ದ ಶೌಚಾಲಯಗಳನ್ನುತೆರೆಯಲಾಯಿತು. ನಗರಸಭೆ ಕಿರಿಯ ಅಭಿಯಂತರಚಂದ್ರಶೇಖರ್, ಅಧಿಕಾರಿ ಸುಲ್ತಾನ್ ಖಾನ್, ಮುಖಂಡ ರವಿಹಸನ್‌ಘಟ್ಟ ಹಾಜರಿದ್ದರು.