Advertisement

ಮಾನಸಿಕ ಕುಸಿತ ಸೃಷ್ಟಿಸುವ ತೊನ್ನು

06:00 AM Jul 22, 2018 | |

ಹಿಂದಿನ ವಾರದಿಂದ- ಪ್ರಾದೇಶಿಕ ಚಿಕಿತ್ಸೆಗಳು
ಇವು ತೊನ್ನು ಚಿಕಿತ್ಸೆಯ ಅವಶ್ಯ ಭಾಗಗಳಾಗಿದ್ದು, ಸ್ಟಿರಾಯ್ಡಗಳು ಅಥವಾ ಇಮ್ಯುನೊಮಾಡ್ಯುಲೇಟರ್‌ಗಳನ್ನು ಹೊಂದಿರುವ ಕ್ರೀಮುಗಳನ್ನು ಪೀಡಿತ ಭಾಗಕ್ಕೆ ಹಚ್ಚುವುದನ್ನು ಒಳಗೊಂಡಿವೆ.

Advertisement

ಚರ್ಮದ ವಿಶೇಷ ಹೊದಿಕೆಗಳು
ತೊನ್ನಿನ ಬಿಳಿಯ ಕಲೆಗಳು ಉಂಟಾ ಗಿರುವ ಭಾಗವನ್ನು ಮುಚ್ಚುವಂತೆ ವಿಶೇಷ ಬಣ್ಣದ ಕ್ರೀಮುಗಳನ್ನು ಹಚ್ಚು ವುದು ಈ ಚಿಕಿತ್ಸೆಯಲ್ಲಿ ಒಳಗೊಂಡಿದೆ. ಈ ಚಿಕಿತ್ಸೆ ಈ ಕಾಯಿಲೆಯನ್ನು ಬದಲಾಯಿಸುವುದಿಲ್ಲ ಅಥವಾ ಗುಣಪಡಿಸುವುದಿಲ್ಲ, ಆದರೆ ಚರ್ಮದ ರೂಪವನ್ನು ಉತ್ತಮಪಡಿಸುತ್ತದೆ. ನಿಮ್ಮ ಚರ್ಮದ ಸಹಜ ಬಣ್ಣವನ್ನು ಹೋಲುವ ಬಣ್ಣವನ್ನು ಒದಗಿಸುವುದು ಈ ಚಿಕಿತ್ಸೆಯ ಗುರಿಯಾಗಿದೆ. 

ಲೇಸರ್‌ ಚಿಕಿತ್ಸೆಗಳು
ತೊನ್ನಿಗೆ ಚಿಕಿತ್ಸೆಯಲ್ಲಿ ಲೇಸರ್‌ ಚಿಕಿತ್ಸೆಯ ಒಂದು ರೂಪ ವಾದ ಎಕ್ಸಿಮರ್‌ ಲೇಸರ್‌ ಪರಿಣಾಮ ಕಾರಿಯಾಗಿರುವುದು ಸಾಬೀತಾಗಿದೆ.

ಶಸ್ತ್ರಕ್ರಿಯೆಯ ಮೂಲಕ ಚರ್ಮ ಕಸಿ
ತೊನ್ನು ಪೀಡಿತ ಚರ್ಮದ ಸಣ್ಣ ಪ್ರದೇಶಗಳಿಗೆ ಸಹಜ ಚರ್ಮವನ್ನು ಕಸಿ ಮಾಡುವ ಚಿಕಿತ್ಸೆಯನ್ನು ಪ್ರಯೋಗಿ ಸಲಾಗಿದೆ. ಕಸಿಯ ವಿವಿಧ ವಿಧಾನಗಳು ಲಭ್ಯವಿವೆ: ಮಿನಿ ಪಂಚ್‌ ಗ್ರಾಫ್ಟಿಂಗ್‌ ವಿಧಾನದಲ್ಲಿ ಆಯಾ ವ್ಯಕ್ತಿಯ ಚರ್ಮದ ಜೀವಕೋಶಗಳಿಂದ ಕಸಿಗಳನ್ನು ತೆಗೆದು ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಬಣ್ಣ ಕಳೆದುಕೊಂಡ ಚರ್ಮಭಾಗದಲ್ಲಿ ಕಿರು ಕುಳಿಗಳನ್ನು ಕೊರೆಯಲಾಗುತ್ತದೆ. ತೊಡೆ ಅಥವಾ ಪೃಷ್ಠಭಾಗದ ಆರೋಗ್ಯಯುತ ಚರ್ಮದಿಂದ ಅಷ್ಟೇ ಗಾತ್ರದ ಚರ್ಮದ ತುಣುಗಳನ್ನು ತೆಗೆಯಲಾಗುತ್ತದೆ. ಇವುಗಳನ್ನು ಚರ್ಮ ಬಣ್ಣ ಕಳೆದುಕೊಂಡ ಭಾಗದಲ್ಲಿ ಮಾಡಲಾದ ಕುಳಿಗಳಲ್ಲಿ ಇರಿಸಿ ಸೂಕ್ತವಾಗಿ ಬ್ಯಾಂಡೇಜ್‌ ಮಾಡಲಾಗುತ್ತದೆ. ಬ್ಯಾಂಡೇಜನ್ನು 7 ದಿನಗಳ ಬಳಿಕ ತೆಗೆಯಲಾಗುತ್ತದೆ. ಕೆಲವು ದಿನಗಳ ಬಳಿಕ ಕಸಿ ಮಾಡಲಾದ ಭಾಗವನ್ನು ಬೆಳಕು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಕಸಿ ಮಾಡಲಾದ ಚರ್ಮದ ಬಣ್ಣವು ಮೇಲ್ಮೆ„ಯಲ್ಲಿ ಪ್ರಸರಣಗೊಂಡು ಬಿಳಿ ಕಲೆಯಲ್ಲಿ ಬಣ್ಣ ಮೂಡುತ್ತದೆ. ಈ ಚಿಕಿತ್ಸೆಯನ್ನು ತೊನ್ನಿನ ಸಣ್ಣ ಕಲೆಗಳಿರುವ ವ್ಯಕ್ತಿಗಳಿಗೆ ಉಪಯೋಗಿಸುತ್ತಾರೆ. ಶಸ್ತ್ರಚಿಕಿತ್ಸೆಯ ಇತರ ವಿಧಾನಗಳಲ್ಲಿ ಅತಿ ತೆಳುವಾದ ಎಪಿಡರ್ಮಲ್‌ ಕಸಿ ಮತ್ತು ಸಕ್ಷನ್‌ ಬ್ಲಿಸ್ಟರ್‌ ಕಸಿ ಸೇರಿವೆ. ಇತ್ತೀಚೆಗೆ ಎಪಿಡರ್ಮಲ್‌ ಸೆಲ್‌ ಮತ್ತು ಮೆಲಾನೊಸೈಟ್‌ ಸೆಲ್‌ ಕಸಿಯನ್ನೂ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. 

ಪಿಗೆ¾ಂಟ್‌ ತೆಗೆಯುವಿಕೆ
ವ್ಯಾಪಕವಾದ ತೊನ್ನು ಇದ್ದು, ಸ್ವಲ್ಪವೇ ಭಾಗದಲ್ಲಿ ಸಹಜ ಚರ್ಮ ಹೊಂದಿರುವವರಿಗೆ ಸಹಜ ಚರ್ಮದ ಪಿಗೆ¾ಂಟನ್ನು ಹೈvxೊÅಕ್ವಿನಾನ್‌ ಎಂಬ ಕ್ರೀಮ್‌ ಉಪಯೋಗಿಸಿ ತೆಗೆದುಹಾಕ ಬಹುದು ಮತ್ತು ಚರ್ಮ ಏಕರೂಪದ ಬಣ್ಣ ಹೊಂದಿರುವಂತೆ ಮಾಡಬಹುದು.

Advertisement

ಪೂರಕ ಚಿಕಿತ್ಸೆ
ತೊನ್ನು ರೋಗಿಗಳು ಅಪಾರ ಒತ್ತಡದಲ್ಲಿ ಇರಬಹುದಾಗಿದ್ದು, ತರಬೇತಿ ಹೊಂದಿದವರಿಂದ ಆಪ್ತ ಸಮಾಲೋಚನೆ ಅವರಿಗೆ ಅಗತ್ಯವಾಗಬಹುದು. ತೊನ್ನು ಪೀಡಿತರ ಸಮೂಹ ಸಮಾಲೋಚನೆ, ಚರ್ಚೆಯು ಇತ್ತೀಚೆಗೆ ತೊನ್ನು ಪೀಡಿತರಾದವರಿಗೆ ಆತ್ಮಸ್ಥೈರ್ಯವನ್ನೂ ಆಶಾವಾದವನ್ನೂ ಒದಗಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next