Advertisement

ನೆರವಾಗಲು ಹೋದಾಕೆಯನ್ನೇ ವಂಚಿಸಿದ ನಯವಂಚಕ

06:37 AM Jan 20, 2019 | |

ಬೆಂಗಳೂರು: ಪರಿಚಿತನ ಮಾತು ನಂಬಿ 40 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪಂಜಾಬ್‌ಗ ಹೋಗಿ, ವಂಚನೆಗೊಳಗಾಗಿ ಕಂಗಾಲಾಗಿದ್ದ ನಗರದ ಮಹಿಳೆಯನ್ನು ಪತ್ತೆಹಚ್ಚಿ ಕರೆತರುವಲ್ಲಿ ಹೆಣ್ಣೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಜ.6ರಂದು ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪೋಷಕರು ದೂರು ನೀಡಿದ ಕೂಡಲೇ ಚ್ಚೆತ್ತ ಪೊಲೀಸರು ಆಕೆಯನ್ನು ಪಂಜಾಬ್‌ಗ ಯುವಕನೊಬ್ಬ ಕರೆದೊಯ್ದಿರುವುದನ್ನು ಪತ್ತೆಹಚ್ಚಿದ್ದರು. ಈ ಮಾಹಿತಿ ಅನ್ವಯ ಪಂಜಾಬ್‌ನ ಖನ್ನಾ ಗ್ರಾಮಕ್ಕೆ ತೆರಳಿದ ವಿಶೇಷ ತಂಡ, ಹಣ ಹಾಗೂ ಚಿನ್ನಾಭರಣವನ್ನು ಪರಿಚಿತ ವ್ಯಕ್ತಿಗಳಿಗೆ ನೀಡಿ ವಂಚನೆಗೊಳಗಾಗಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.

ಸದ್ಯ ಮಹಿಳೆಯನ್ನು ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಜತೆಗೆ, ಆಕೆನ್ನು ವಂಚಿಸಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಕಮಲ್‌ದೀಪ್‌ ಹಾಗೂ ಧರ್ಮವೀರ್‌ ಎಂಬುವವರ ಬಂಧನಕ್ಕೆ  ಹೆಣ್ಣೂರು ಪೊಲೀಸ್‌ ಠಾಣಾಧಿಕಾರಿ ಎಚ್‌.ಡಿ.ಕುಲಕರ್ಣಿ, ಪಿಎಸ್‌ಐ ಅಬ್ಟಾಸ್‌ ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಕುಟುಂಬದ ಜತೆ ಕುಲುಮನಾಲಿಗೆ ಪ್ರವಾಸ ತೆರಳಿದ್ದರು. ಈ ವೇಳೆ ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತಿದ್ದ ಪಂಜಾಬ್‌ ಮೂಲದ ಕಾರು ಚಾಲಕ ಕಮಲ್‌ದೀಪ್‌ ಪರಿಚಯವಾಗಿದ್ದ. ಪ್ರವಾಸದ ವೇಳೆ ಕುಟುಂಬದವರಿಗೆ ಪರಿಚಯವಾಗಿದ್ದ ಕಮಲ್‌ದೀಪ್‌, ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ. ಪ್ರವಾಸ ಮುಗಿಸಿಕೊಂಡು ಬಂದ ಬಳಿಕವೂ ಆಗಾಗ ಕರೆ ಮಾಡುತ್ತಿದ್ದ ಆತ, ವಂಚನೆಗೆ ಸಂಚುರೂಪಿಸಿದ್ದ.

ತಾಯಿಗೆ ಮಾರಣಾಂತಿಕ ಕಾಯಿಲೆ ಎಂದ: ಮಾರಣಾಂತಿಕ ಕಾಯಿಲೆಯಿಂದ ತನ್ನ ತಾಯಿ ಬಳಲುತ್ತಿದ್ದು ಆಕೆಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಹೀಗಾಗಿ ಹಣಕಾಸಿನ ನೆರವು ನೀಡಿ. ನಂತರ ಹಣ ವಾಪಾಸ್‌ ಕೊಡುತ್ತೇನೆ ಎಂದು ಹೇಳಿ ಆರೋಪಿಯು ಮಹಿಳೆಯನ್ನು ನಂಬಿಸಿದ್ದ. ಈತನ ಮಾತು ನಂಬಿದ ಮಹಿಳೆ, ಜ.6ರಂದು 40 ಲಕ್ಷ ರೂ. ನಗದು 300 ಗ್ರಾಂ. ತೂಕದ ಚಿನ್ನಾಭರಣ ತೆಗೆದುಕೊಂಡು ಹೋಗಿ ಕಮಲ್‌ದೀಪ್‌ಗೆ ನೀಡಿದ್ದರು.

Advertisement

ಹಣ ಹಾಗೂ ಚಿನ್ನಾಭರಣ ಪಡೆದ ಆರೋಪಿ, ಮಹಿಳೆ ಇಲ್ಲಿಯೇ ಇದ್ದರೆ ಪೋಷಕರಿಗೆ ಮಾಹಿತಿ ನೀಡುತ್ತಾಳೆ. ಆಗ ತನಗೆ ಕಷ್ಟವಾಗುತ್ತದೆ ಎಂದು ತಿಳಿದು ಆಕೆಯನ್ನು ಪುಸಲಾಯಿಸಿ ಪಂಜಾಬ್‌ಗ ಕರೆದೊಯ್ದಿದ್ದ. ಈ ತನ ಎಲ್ಲ ಕೃತ್ಯಗಳಿಗೆ ಮತ್ತೂಬ್ಬ ಆರೋಪಿ ಧರ್ಮವೀರ್‌ ಸಹಕಾರ ನೀಡಿದ್ದ.

ಮಹಿಳೆಯನ್ನು ರೈಲು ಮೂಲಕ ಪಂಜಾಬ್‌ನ ಖನ್ನಾ ಗ್ರಾಮಕ್ಕೆ ಕರೆದೊಯ್ದ ಆರೋಪಿ, ಬೇರೊಬ್ಬರ ಮನೆಗೆ ಕರೆದೊಯ್ದು, “ನಾನು ಹಣ, ಚಿನ್ನವನ್ನು ಮನೆಯಲ್ಲಿಟ್ಟು ಬರುತ್ತೇನೆ. ದುವರೆಗೂ ಇಲ್ಲೇ ಇರು,’ ಎಂದು ತಿಳಿಸಿ ಹಣ ಹಾಗೂ ಚಿನ್ನಾಭರಣದೊಂದಿಗೆ ಹೋದವನು ಮತ್ತೆ ಬಂದಿಲ್ಲ. ಮೊಬೈಲ್‌ ಕೂಡ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ಮೂರು ದಿನ ಕಳೆದರೂ ಆತ ವಾಪಾಸ್‌ ಬರದಿದ್ದರಿಂದ ಸಂತ್ರಸ್ತೆಗೆ ದಿಕ್ಕುತೋಚದಂತಾಗಿದೆ.

ಅಷ್ಟರಲ್ಲಿ ವಿಶೇಷ ತಂಡ ಖನ್ನಾ ಗ್ರಾಮಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿ ನಗರಕ್ಕೆ ಕರೆತಂದಿದೆ. ಬಳಿಕ ಮಹಿಳೆ ನೀಡಿರುವ ದೂರಿನ ಅನ್ವಯ ಕಮಲ್‌ದೀಪ್‌ ಹಾಗೂ ಧರ್ಮವೀರ್‌ ವಿರುದ್ಧ ವಂಚನೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು, ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಹಿಳೆಯನ್ನು ನಂಬಿಸಿ ಪಂಜಾಬ್‌ಗ ಕರೆದೊಯ್ದ ಆರೋಪಿಗಳಿಬ್ಬರು ಯಾವುದೇ ಮೊಬೈಲ್‌ ಕೂಡ ಬಳಕೆ ಮಾಡುತ್ತಿರಲಿಲ್ಲ. ಆತ ಬಳಸುತ್ತಿದ್ದ ಹಳೆಯ ಮೊಬೈಲ್‌ನಂಬರ್‌ನ ಜಾಡುಹಿಡಿದು ಶಂಕೆಯ ಮೇರೆಗೆ ತನಿಖೆ ಆರಂಭಿಸಿದಾಗ ಖಚಿತತೆ ಸಿಕ್ಕಿತ್ತು.  ಮಹಿಳೆಯನ್ನು ಪತ್ತೆಹಚ್ಚಲಾಯಿತು ಎಂದು ತನಿಖಾಧಿಕಾರಿ ತಿಳಿಸಿದರು. 

ವಂಚನೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ಮಹಿಳೆಯನ್ನು ಕರೆದೊಯ್ದು ಚಿನ್ನಾಭರಣ ಹಾಗೂ ಹಣ ಪಡೆದುಕೊಂಡು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ವಿಶೇಷತಂಡ ಕಾರ್ಯನಿರ್ವಹಿಸುತ್ತಿದೆ.
-ರಾಹುಲ್‌ ಕುಮಾರ್‌ ಶಹಾಪುರ್‌ವಾಡ್‌, ಪೂರ್ವ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next