ಬೆಂಗಳೂರು: ಬಡಾವಣೆಗಳಿಗೆ ನಕ್ಷೆ ಅನುಮೋದನೆ ಪಡೆಯದೆ, ಖಾತಾ ವಿಭಜನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಉಪ ಕಂದಾಯ ಅಧಿಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಗುರುವಾರ ಅಮಾನತುಗೊಳಿಸಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಉಪ ಕಂದಾಯ ಅಧಿಕಾರಿ ಗುಲ್ತಾಜ್ ಫಾತಿಮಾ, ಸಹಾಯಕ ಕಂದಾಯ ಅಧಿಕಾರಿ ಸೋಮಶೇಖರ್, ಕಂದಾಯ ಪರಿವೀಕ್ಷಕರಾದ ನಂಜುಂಡಪ್ಪ ಮತ್ತು ಕುಮಾರಸ್ವಾಮಿ ಅಮಾನತುಗೊಂಡವರು. ಬೊಮ್ಮನಹಳ್ಳಿ ವಲಯದ ಬೇಗೂರು ಉಪ ವಲಯದ ವಾರ್ಡ್ ಸಂಖ್ಯೆ 192ರ ನಿಯಮ ಉಲ್ಲಂ ಸಿ ಬಡಾವಣೆಗಳಿಗೆ ನಕ್ಷೆ ಅನುಮೋದನೆ ಪಡೆಯದೆ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ಖಾತಾ ನೋಂದಾಯಿಸಿ
ಹಾಗೂ ಖಾತಾ ವಿಭಜನೆ ಮಾಡಿ ಮತ್ತು ಸುಧಾರಣಾ ವೆಚ್ಚ ಪಾವತಿಸದೆ, ಸ್ವಾಧೀನಾನುಭವ ಪತ್ರವನ್ನೂ ಪಡೆಯದೆ ಖಾತಾ ವಿಭಜನೆ ಮಾಡಿದ್ದಾರೆ. ಇದು 1960ರ ಸರ್ಕಾರಿ ನೌಕರರ (ನಡತೆ) ನಿಯಮಾವಳಿ ನಿಯಮ 3 (3)ರ ಉಲ್ಲಂಘನೆಯಾಗಿದೆ. ಈ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಉಲ್ಲಂ ಸಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಉಪ ಆಯುಕ್ತ (ಬೊಮ್ಮನಹಳ್ಳಿ) ಎಂ.ಎಚ್. ತಿಪ್ಪೇಸ್ವಾಮಿ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿ ಎನ್.ಮುನಿರಾಜು ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಅಲ್ಲದೆ, ಇಂದಿರಾ ಕ್ಯಾಂಟೀನ್‌ಗೆ ಸಂಬಂಧಿಸಿದಂತೆ ಬಂದಿರುವ ಬಿಲ್ಲುಗಳನ್ನು ಕಳೆದುಹಾಕಿ ಹಾಗೂ ವಲಯ ಅಧಿಕಾರಿಗಳಿಂದ ಬರುವ ಬಿಲ್ಲುಗಳನ್ನು ನಿಗದಿತ ಅವಧಿಯಲ್ಲಿ ನಿರ್ವಹಿಸದ ಹಿನ್ನೆಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಪ್ರಭಾಕರ್ ಎಂಬುವರನ್ನು ಅಮಾನತುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.