Advertisement

“ವಿದ್ಯಾರ್ಥಿಗಳು ಸಮಾಜಮುಖೀಯಾಗಬೇಕು’

12:05 PM Jan 18, 2017 | Team Udayavani |

ಕೆ.ಆರ್‌.ಪುರ: ವಿದ್ಯಾರ್ಥಿ ದೆಸೆಯಿಂದಲ್ಲೆ ಮಕ್ಕಳು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಆಮೂಲಕ ದೇಶ ಸೇವೆಗೆ ಸನ್ನದ್ಧರಾಗಬೇಕೆಂದು ಮೊಹರೆ ಶಾಲೆಯ ಅಧ್ಯಕ್ಷ ಲಕ್ಷ್ಮೀಶ್‌ರಾವ್‌ ಮೊಹರೆ ತಿಳಿಸಿದರು. ಕೆ.ಆರ್‌.ಪುರ ಕ್ಷೇತ್ರದ ಬಾಬುಸಾಪಾಳ್ಯ ಮೊಹರೆ ಪಬ್ಲಿಕ್‌ ಶಾಲೆಯ ವಾರ್ಷಿ ಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

Advertisement

ಯುವಕರು ತಮ್ಮ ಮುಂದಿನ ಜೀವನವನ್ನು ವೇಗವಾಗಿ ಬದಲಾಗುತ್ತಿರುವ ತಂತ್ರಜಾnನಗಳ ಜೊತೆ ಹೊಂದಿಕೊಳ್ಳುವ ವೇಗದಲ್ಲಿ ಸಮಾಜಮುಖೀ ಕಾರ್ಯಗಳಲ್ಲಿ ಭಾಗವಹಿಸಲು ಮುಂದಾಗುತ್ತಿಲ್ಲ ಇದು ಬೇಸರದ ಸಂಗತಿ ಎಂದು ನುಡಿದರು. ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಮಹತ್ವದ್ದು ಗುರಿ ಸಾಧಿಸಲು ವಿದ್ಯಾರ್ಥಿಗಳು ಉತ್ತಮ ಮಾರ್ಗವನ್ನು ಬಳಸಿಕೊಂಡು ಗುರಿ ತಲುಪುವ ಮೂಲಕ ಸಾಧನೆಮಾಡಬೇಕೆಂದು ಕಿವಿಮಾತು ಹೇಳಿದರು.

ಸ್ವಾಮಿ ವಿವೇಕಾನಂದರಂತಹ ಮಹನೀಯರ ಆದರ್ಶಗಳ ಪಾಲನೆಯಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಿ ಹೊರಹೊಮ್ಮುತ್ತಾರೆ ಮಹನೀ ಯರ ಜೀವನಚರಿತ್ರೆಗಳನ್ನು ವಿದ್ಯಾರ್ಥಿ ಗಳ ಮನ ತಲುಪುವ ನಿಟ್ಟಿನಲ್ಲಿ ಪೋಷಕರು ಕಾರ್ಯಮಾಡಬೇಕೆಂದರು. ಪರೀಕ್ಷೆಗೆ ಭಯ ಬೀಳದೆ ಧೈರ್ಯದಿಂದ ಎದುರಿಸುವಂತೆ ಸಲಹೆ ನೀಡಿದರು. 

ಪರೀûಾ ಸಮಯದಲ್ಲಿ ವಿದ್ಯಾರ್ಥಿ ಗಳಿಗೆ ಒತ್ತಡ ನಿವಾರಿಸುವ ಕಾರ್ಯವನ್ನು ಪೊಷಕರು ಮಾಡಬೆಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮಗಳು ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಹಾಸ್ಯ ನಟ ದಯಾನಂದ್‌,ಶಾಲೆಯ ಕಾರ್ಯದರ್ಶಿ ಯಶೋಧರ ರಾವ್‌ ಮೊಹರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next