Advertisement

ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

08:29 PM Mar 21, 2023 | Team Udayavani |

ಕಾಸರಗೋಡು: ಬಂದಡ್ಕ ಮಲಾಂಕುಂಡು ಇಲ್ಲತ್ತಿಂಗಾಲ್‌ ನಿವಾಸಿ, ಹೊಟೇಲ್‌ ಕಾರ್ಮಿಕ ಬಾಬು ಅವರ ಪುತ್ರಿ, ಬಂದಡ್ಕ ಹೈಯರ್‌ ಸೆಕೆಂಡರಿ ಶಾಲೆಯ ಪ್ಲಸ್‌ ಟು ವಿದ್ಯಾರ್ಥಿನಿ ಪಿ.ಸರಣ್ಯ(17) ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಮೃತ ದೇಹ ಮತ್ತೆಯಾಗಿದೆ.

Advertisement

ಮನೆಯ ಕೊಠಡಿಯೊಳಗೆ ಬಟ್ಟೆ ಹಾಕಲು ಕಟ್ಟಿದ ಹಗ್ಗಕ್ಕೆ ಚೂಡಿದಾರ ಶಾಲು ಕಟ್ಟಿ ಅದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಹಾಸಿಗೆ ಮೇಲೆ ನೇಣು ಬಿಗಿದು ಕುಳಿತ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಮನೆಯವರನ್ನು ಸಾವಿನ ಬಗ್ಗೆ ಶಂಕೆ ಮೂಡಿಸುವಂತೆ ಮಾಡಿದೆ. ಹಗ್ಗಕ್ಕೆ ಚೂಡಿದಾರದ ಶಾಲು ಕಟ್ಟಿ ನೇಣು ಬಿಗಿದುದರಿಂದ ಭಾರದಿಂದಾಗಿ ಹಾಸಿಗೆಯಲ್ಲಿ ಕುಳಿತ ಸ್ಥಿತಿಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿದು ಕೊಳ್ಳಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ಆಕೆ ಬರೆದಿಟ್ಟದ್ದೆನ್ನಲಾದ ಡೆತ್‌ ನೋಟ್‌ ಪತ್ತೆಯಾಗಿದೆ. ಬಸ್‌ ಕಾರ್ಮಿಕನೋರ್ವ ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾನೆಂದೂ, ಆತ ತನಗೆ ಪದೇ ಪದೇ ಬೆದರಿಕೆಯೊಡ್ಡುತ್ತಿದ್ದನೆಂದು ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರ ಆಕೆ ಬರೆದದ್ದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪತ್ರದಲ್ಲಿ ಸೂಚಿಸಲಾದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆತನ ಹಾಗು ವಿದ್ಯಾರ್ಥಿನಿಯ ಮೊಬೈಲ್‌ ಫೋನ್‌ ವಶಪಡಿಸಿದ್ದಾರೆ. ಸೈಬರ್‌ ಸೆಲ್‌ನ ಸಹಾಯದಿಂದ ಪರಿಶೀಲಿಸುತ್ತಿದ್ದಾರೆ.
————————————————————————————————————–
ಕಾಂಗ್ರೆಸ್‌ ನೇತಾರನಿಗೆ ತಂಡದಿಂದ ಹಲ್ಲೆ
ಕುಂಬಳೆ: ಯೂತ್‌ ಕಾಂಗ್ರೆಸ್‌ ಮಂಡಲ ಅಧ್ಯಕ್ಷ, ವ್ಯಾಪಾರಿಯಾಗಿರುವ ಗುರು ಪ್ರಸಾದ್‌ ಕಾಮತ್‌(43) ಅವರಿಗೆ ಮೂರು ಮಂದಿಯ ತಂಡ ಮಾರಕಾಯುಧದಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಗಾಯಾಳುವನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾರಿ ತರ್ಕದ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆಯೆನ್ನಲಾಗಿದೆ. ಕಂಚಿಕಟ್ಟೆಯಲ್ಲಿರುವ ಗುರುಪ್ರಸಾದ್‌ ಕಾಮತ್‌ ಅವರ ಹಿತ್ತಿಲಿನ ಮೂಲಕ ನಡೆದು ಹೋಗುತ್ತಿರುವ ಬಗ್ಗೆ ಪ್ರಶ್ನಿಸಿದ್ದರಿಂದ ಮೂವರ ತಂಡ ಕಬ್ಬಿಣದ ಸರಳು, ಹೆಲ್ಮೆಟ್‌, ಇಟ್ಟಿಗೆ ಮೊದಲಾದವುಗಳಿಂದ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದಾರೆ.
————————————————————————————————————–
ವೃದ್ಧನ ಮೃತ ದೇಹ ಪತ್ತೆ
ಮುಳ್ಳೇರಿಯ: ಕರ್ನಾಟಕದ ಉಜಿರೆಗೆ ತೆರಳುವುದಾಗಿ ಸಂಬಂಧಿಕರೊಂದಿಗೆ ತಿಳಿಸಿದ್ದ ಬೆಳ್ಳೂರು ಕಾಯರ್‌ಪದವು ಸಮೀಪದ ಮರದಮೂಲೆ ನಿವಾಸಿ ಶೀನಪ್ಪ ಪೂಜಾರಿ(74) ಅವರ ಮೃತ ದೇಹ ಮನೆಯೊಳಗೆ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಉಜಿರೆಗೆ ಹೋಗುವುದಾಗಿ ಹೇಳಿದ್ದರು. ಏಕಾಂಗಿಯಾಗಿ ಮನೆಯಲ್ಲಿರುವ ಹಿನ್ನೆಲೆಯಲ್ಲಿ ಯಾರೂ ಗಮನ ಹರಿಸಿರಲಿಲ್ಲ. ಮಾ.20 ರಂದು ಮನೆಯೊಳಗಿಂದ ದುರ್ನಾತ ಬೀರುತ್ತಿದ್ದುದರಿಂದ ನೆರೆಮನೆಯ ಮಹಿಳೆ ಅಲ್ಲಿಗೆ ಹೋಗಿ ನೋಡಿದಾಗ ಶೀನಪ್ಪ ಪೂಜಾರಿ ಅವರ ಮೃತದೇಹ ಪತ್ತೆಯಾಯಿತು. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
————————————————————————————————————–
ಗಾಂಜಾ ಸಾಗಾಟ : ಯುವಕನ ಬಂಧನ
ಕಾಸರಗೋಡು: ಪನೆಯಾಲ್‌ ಮೈಲಾಟಿಯಿಂದ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 300 ಗ್ರಾಂ ಗಾಂಜಾವನ್ನು ಕಾಸರಗೋಡು ಅಬಕಾರಿ ಎನ್‌ಫೋರ್ಸ್‌ಮೆಂಟ್‌ ಆ್ಯಂಡ್‌ ಆ್ಯಂಟಿ ನಾರ್ಕೋಟಿಕ್ಸ್‌ ಸ್ಪೆಷಲ್‌ ಸ್ಕಾಡ್‌ ವಶಪಡಿಸಿಕೊಂಡಿದ್ದು, ಈ ಸಂಬಂಧ ತೆಕ್ಕಿಲ್‌ ಗ್ರಾಮದ ಕುಂಡಡ್ಕದ ಮೊಹಮ್ಮದ್‌ ಶರೀಫ್‌(35)ನನ್ನು ಬಂಧಿಸಿದೆ.

————————————————————————————————————–
ಆಟೋ ರಿಕ್ಷಾ ಕಳವು : ಇಬ್ಬರಿಗೆ ರಿಮಾಂಡ್‌
ಉಪ್ಪಳ: ಉಪ್ಪಳದ ಸಿ.ಎಂ.ಅಬ್ದುಲ್ಲ ಅವರ ಆಟೋ ರಿಕ್ಷಾ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಉಪ್ಪಳ ಪತ್ವಾಡಿ ನಿವಾಸಿಗಳಾದ ಅಬ್ದುಲ್‌ ಸಮದ್‌(35) ಮತ್ತು ಸವಾದ್‌(21)ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
————————————————————————————————————–
ಕಟ್ಟಡದಿಂದ ಬಿದ್ದು ಕಾರ್ಮಿಕನ ಸಾವು
ಕಾಸರಗೋಡು: ನಗರದ ಪ್ರಸ್‌ಕ್ಲಬ್‌ ಜಂಕ್ಷನ್‌ ಪರಿಸರದ ಕಟ್ಟಡವೊಂದರಲ್ಲಿ ಪೈಂಟಿಂಗ್‌ ಮಾಡುತ್ತಿದ್ದಾಗ ಕಟ್ಟಡದಿಂದ ಬಿದ್ದು ಬಿಹಾರ ತೋರಾ ಲಕ್ಷಿ$¾àಪುರದ ಸುನಿಲ್‌ದಾಸ್‌ ಅವರ ಪುತ್ರ ಸೋನು ಕುಮಾರ್‌(25) ಸಾವಿಗೀಡಾದರು.
————————————————————————————————————–
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಉಪ್ಪಳ: ಮಂಜೇಶ್ವರ ಕುಂಡುಕೊಳಕೆ ನಿವಾಸಿ ಜಯಂತ ಕೋಟ್ಯಾನ್‌(46) ಅವರು ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
————————————————————————————————————–
ನೇಣು ಬಿಗಿದು ಯುವಕ ಆತ್ಮಹತ್ಯೆ
ಮುಳ್ಳೇರಿಯ: ಗಾಡಿಗುಡ್ಡೆ ನಿವಾಸಿ ಮಾಲಿಂಗ ಅವರ ಪುತ್ರ ಸೋಂಪ(45) ಅವರು ಮನೆ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
————————————————————————————————————–

Advertisement

Udayavani is now on Telegram. Click here to join our channel and stay updated with the latest news.

Next