Advertisement
ಚಿತ್ರ ನೋಡುಗರಿಗೆ “ಹಳ್ಳಿ ಸೊಗಡು’ ಸಾಕ್ಷ್ಯಚಿತ್ರವಾ ಅಥವಾ ವ್ಯಕ್ತಿ ಚಿತ್ರಣವಾ ಎಂಬ ಗೊಂದಲಕ್ಕೀಡು ಮಾಡುತ್ತೆ. ಯಾಕೆಂದರೆ, ಇದು ಸಾಹಿತಿ, ಗೀತರಚನೆಕಾರ ಡಾ.ದೊಡ್ಡ ರಂಗೇಗೌಡರ ಅಭಿಮಾನಿಯೊಬ್ಬನ ಸಿನಿಮಾ. ಹಾಗಾಗಿ, ಇಲ್ಲಿ ದೊಡ್ಡರಂಗೇಗೌಡರ ಬಗೆಗಿನ ಚಿತ್ರಣವೂ ಇದೆ, ಅವರ ಅಭಿಮಾನಿ ಕುರಿತ ಅಭಿಮಾನದ ವ್ಯಕ್ತಿ ಚಿತ್ರಣವೂ ಒಳಗೊಂಡಿದೆ. ಹಾಗಾಗಿ ಸಣ್ಣ ಗೊಂದಲ ಮೂಡಿದರೂ, ಇದನ್ನು ಒಂದು “ಅಭಿಮಾನದ ಡ್ರಾಮ’ ಅಂತ ಕರೆಯಲ್ಲಡ್ಡಿಯಿಲ್ಲ.
Related Articles
Advertisement
ಆ ಸಮಯಕ್ಕೆ ಬರುವ ಹಳೆಯ ಹಾಡಷ್ಟೇ ಚಿತ್ರದ ಸೊಗಡನ್ನು ಎತ್ತಿಹಿಡಿಯುತ್ತದೆ. ಉಳಿದಂತೆ ಹೇಳುವದೇನೂ ಇಲ್ಲ. ಮೊದಲೇ ಹೇಳಿದಂತೆ, ಇದು ದೊಡ್ಡರಂಗೌಡರ ಅಭಿಮಾನಿಯ ಚಿತ್ರಣ. ಹಾಗಾಗಿ, ಇಲ್ಲಿ ಅಭಿಮಾನದ ಸಂಭ್ರಮ ಹೊರತಾಗಿ ಬೇರೇನೂ ಇಲ್ಲ. ಒಂದರ್ಥದಲ್ಲಿ ಇಲ್ಲಿ, ದೊರಂಗೌ ಅವರ ಸಾಕ್ಷ್ಯಚಿತ್ರ ನೋಡಿದಂತೆ ಭಾಸವಾದರೂ, ಅಭಿಮಾನಿಯ ಪ್ರೀತಿಯ ಅಭಿಮಾನ ಎಷ್ಟಿದೆ ಅನ್ನುವುದನ್ನೂ ನಿರ್ದೇಶಕರು ಹೇಳುವ ಮೂಲಕ ಒಂದಷ್ಟು ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಶಿವಣ್ಣ (ಆರವ್ ಸೂರ್ಯ) ಚಿಕ್ಕಂದಿನಿಂದಲೂ ಹಾಡು ಕೇಳುತ್ತ ಬೆಳೆದವನು. ಬೆಳೆಯುತ್ತಲೇ, ದೊರಂಗೌ ಅವರ ಹಾಡುಗಳ ಅಭಿಮಾನಿಯಾದವನು. ಗೆಳೆಯರ ಜೊತೆಗೂಡಿ ಅವರ ಹಾಡುಗಳನ್ನು ರಾಜ್ಯಾದ್ಯಂತ ಹಾಡುವ ಮೂಲಕ ಬದುಕು ಕಟ್ಟಿಕೊಂಡವನು. ಅಡ್ಡದಾರಿ ಹಿಡಿದ ಊರಿನ ಕೆಲವರನ್ನು ಬದಲಾಯಿಸುತ್ತಾನೆ. ಊರಿನ ಜನರಿಗೆ ಆತ್ಮೀಯನಾಗುತ್ತಾನೆ.
ಕೊನೆಗೆ ದೊರಂಗೌ ಅವರನ್ನು ತನ್ನೂರಿಗೆ ಕರೆಸಿ, ಅವರನ್ನು ಸನ್ಮಾನಿಸಿ, ಗೌರವಿಸಬೇಕೆಂಬ ಆಸೆ ತನ್ನೂರಿನ ಜನರದ್ದು. ಅವರ ಆಶಯಕ್ಕೆ ಸಾಥ್ ಕೊಡುವ ಶಿವಣ್ಣ, ಆ ನಿಟ್ಟಿನಲ್ಲಿ ಊರಲ್ಲೊಂದು ಕನ್ನಡ ಜಾತ್ರೆ ನಡೆಸಿ, ದೊರಂಗೌ ಅವರನ್ನು ಸನ್ಮಾನಿಸಲು ತೀರ್ಮಾನಿಸುತ್ತಾನೆ. ಅವರ ಆಶಯ ಈಡೇರುತ್ತೆ. ಒಂದು ಘಟನೆಯಲ್ಲಿ ಶಿವಣ್ಣ ಅಪಘಾತಕ್ಕೀಡಾಗಿ, ಸಾವು ಬದುಕಿನೊಂದಿಗೆ ಹೋರಾಡುತ್ತಾನೆ. ಆಮೇಲೆ ಏನಾಗುತ್ತೆ ಎಂಬುದೇ ಸಸ್ಪೆನ್ಸ್.
ಆರವ್ ಸೂರ್ಯ ನಟನೆಯಲ್ಲಿ ಉತ್ಸಾಹವೇನೋ ಇದೆ. ಆದರೆ, ಇನ್ನಷ್ಟು ಚುರುಕಾಗಬೇಕಿದೆ. ನಟಿ ಅಕ್ಷರ, ಭರತನಾಟ್ಯ ಚೆನ್ನಾಗಿ ಮಾಡುವುದು ಬಿಟ್ಟರೆ, ಅವರ ನಟನೆ ಬಗ್ಗೆ ಹೇಳುವಂಥದ್ದೇನಿಲ್ಲ. ದೊರಂಗೌ ಅವರು ನಿರ್ದೇಶಕರನ್ನು ಹೇಳಿದ್ದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಡಿಂಗ್ರಿನಾಗರಾಜ್, ರಮಾನಂದ್, ಶಂಕರ್‌ಭಟ್, ಅರವಿಂದ್ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ರಾಗರಮಣ ಸಂಗೀತದಲ್ಲಿ ಸ್ವಾದ ಬೇಕಿತ್ತು. ಶ್ರೀನಾಥ್ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ಸೊಬಗು ಕಳೆಗುಂದಿದೆ.
ಚಿತ್ರ: ಹಳ್ಳಿ ಸೊಗಡುನಿರ್ಮಾಣ: ಸತೀಶ್‌ಕುಮಾರ್ ಮೆಹ್ತಾ
ನಿರ್ದೇಶನ: ಕಪಿಲ್
ತಾರಾಗಣ: ಆರವ್ ಸೂರ್ಯ, ಅಕ್ಷರ, ಡಾ.ದೊಡ್ಡರಂಗೇಗೌಡ, ಡಿಂಗ್ರಿನಾಗರಾಜ್, ರಮಾನಂದ್, ಶಂಕರ್‌ಭಟ್, ಅರವಿಂದ್ ಇತರರು. * ವಿಜಯ್ ಭರಮಸಾಗರ