ಕಥೆಗಾರ ಹನುಮಂತ ಹಾಲಿಗೇರಿಯವರು ರಚಿಸಿರುವ ಹೊಸ ನಾಟಕ “ನಗ್ನ 99′ ಪ್ರದರ್ಶನ ಏರ್ಪಾಡಾಗಿದೆ. ರಂಗತಂಡ “ಹೆಜ್ಜೆ’ ಇದೇ ಮೊದಲ ಬಾರಿಗೆ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ಹೇಮಂತ್ ಕುಮಾರ್‌ಅವರು ನಾಟಕವನ್ನು ನಿರ್ದೇಶಿಸಿದ್ದಾರೆ.
ಅರೆಹುಚ್ಚನೊಬ್ಬನ ಮಾನಸಿಕ ತೊಳಲಾಟಗಳ ಸುತ್ತ ನಡೆಯುವ ನಾಟಕ, ಸಮಾಜದಲ್ಲಿ ತುಂಬಿಕೊಂಡಿರುವ ಹುಚ್ಚುತನಗಳನ್ನು ಬಯಲಿಗೆಳೆಯುತ್ತದೆ. ಬುದ್ಧಿಮಾಂದ್ಯರು ಮತ್ತು ಅಂಗವಿಕಲರಿಗೂ ಲೈಂಗಿಕ ಬದುಕು ದಕ್ಕಬೇಕು ಎಂಬ ಮನೋವೈಜ್ಞಾನಿಕ ನೆಲೆಯ ಆಶಯವನ್ನು ನಾಟಕ ಹೊಂದಿದೆ.
ವಯೋಸಹಜ ಲೈಂಗಿಕತೆಗಾಗಿ ಹಪಹಪಿಸುತ್ತಿರುವ ಅರೆಹುಚ್ಚನ ವೈಯಕ್ತಿಕ ಬದುಕನ್ನು ಜಗಜ್ಜಾಹೀರುಗೊಳಿಸಲು ಸ್ಪರ್ಧೆಗಿಳಿಯುವ ದೃಶ್ಯ ಮಾಧ್ಯಮಗಳ ಕ್ರೌರ್ಯವನ್ನೂ ನಾಟಕ ಅನಾವರಣಗೊಳಿಸುತ್ತದೆ.
ಎಲ್ಲಿ?: ಸೇವಾ ಸದನ, ಮಲ್ಲೇಶ್ವರಂ
ಯಾವಾಗ?: ಜೂನ್ 2, ಸಂಜೆ 7
ಪ್ರವೇಶ: 100 ರು.