Advertisement
ಪ್ರತೀ ಸಾರಿ ಭ್ರಷ್ಟಾಚಾರದ ಬಗ್ಗೆ ಸದನಗಳಲ್ಲಿ ಚರ್ಚೆಯಾದರು ಭ್ರಷ್ಟಾಚಾರಕ್ಕೆ ಮಾತ್ರ ಶಾಶ್ವತ ತಡೆಗೊಡೆ ಕಟ್ಟಿದ ಸರದಾರರು ಎಲ್ಲೂ ಕಾಣುವುದೇ ಇಲ್ಲ. ಇದು ವಿಪರ್ಯಾಸವಾಗಿದೆ.
ನಮ್ಮ ಅಜ್ಜ ಅಪ್ಪಂದಿರ ಕಾಲದಿಂದಲೂ ಭಾರತ ಒಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೇ ಆಗಿದೆ. ಭಾರತ ಇಂದಿಗೆ ಪೂರ್ಣವಾಗಿ ಅಭಿವೃದ್ಧಿ ಹೊಂದಿದ್ದರೆ ಭಾರತ ಇಂದು ಅಮೆರಿಕ, ಚೀನದಂತಹ ರಾಷ್ಟ್ರಗಳಿಗೆ ಸಮಸ್ಥಾನಿ ಆಡಳಿತ ನಡೆಸುತ್ತಿತ್ತು. ದುರಾದೃಷ್ಟ ಎಂದರೆ ಭಾರತದ ರಾಜಕೀಯ ಆಶ್ವಾಸನೆಗಳು ಮಾತ್ರ ಭಾರತವನ್ನು ಶ್ರೀಮಂತಗೊಳಿಸುತ್ತಿವೆ. ಯಾವುದೇ ಒಬ್ಬ ವ್ಯಕ್ತಿ ಅಥವಾ ಅಧಿಕಾರಿ ತನ್ನ ವೃತ್ತಿಯಲ್ಲಿ ತನ್ನ ಅಧಿಕಾರದ ಮಿತಿಯನ್ನು ಮೀರಿ ಸಾರ್ವಜನಿಕರಿಂದ ಹಣ, ವಸ್ತು, ಕಾಣಿಕೆ, ಮತ್ತು ತನ್ನ ವೈಯಕ್ತಿಕ ಕಾರ್ಯಗಳಿಗಾಗಿ ಅಧಿಕಾರವನ್ನು ಬಳಸಿಕೊಂಡರೆ ಅದು ಭ್ರಷ್ಟಾಚಾರದ ರೂಪವೊಂದು ಪರಿಗಣಿಸಲಾಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ನಮ್ಮ ದೇಶದಲ್ಲಿ ರಾಜಕಾರಣಿ, ಮಂತ್ರಿಮಂಡಲ, ಸಾರ್ವಜನಿಕ ಸೇವಕರು ಉನ್ನತ ಹು¨ªೆಯ ಅಧಿಕಾರಿಗಳಂತಹ ಪ್ರತಿಯೊಬ್ಬರ ಮೇಲೆ ಭ್ರಷ್ಟಾಚಾರದ ಕರಿನೆರಳು ಬೀಳುತ್ತಲೇ ಬರುತ್ತಿರುತ್ತಿದೆ. ಭಾರತ ಇಂದಿಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದೇ ಪರಿಗಣಿಸಲಾಗುತ್ತಿದೆ.
Related Articles
ಏಷ್ಯಾ ಖಂಡದ180 ರಾಷ್ಟ್ರಗಳ ಪೈಕಿ, ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿ ರಾರಾಜೀಸುತ್ತಿದೆ. 2019ರಲ್ಲಿ 80ನೇ ಸ್ಥಾನದಲ್ಲಿದ್ದ ಭಾರತವು, 2020ರಲ್ಲಿ 86ನೇ ಸ್ಥಾನಕ್ಕೆ ಏರಿದೆ ಸಿ.ಪಿ.ಐ. ವರದಿಯ ಪ್ರಕಾರ ಭಾರತದಲ್ಲಿ ಶೇ. 39ರಷ್ಟು ಜನರು ಸರಕಾರಿ ಸೇವೆಗಳನ್ನು ಪಡೆಯಲು ಲಂಚ ನೀಡಿದ್ದಾರೆ ಮತ್ತು ಶೇ. 32ರಷ್ಟು ಜನ ಸರಕಾರಿ ಸೇವೆಗಾಗಿ, ಸರಕಾರದ ನೀತಿಗಳ ಉಲ್ಲಂಘನೆ ಮಾಡಿ ತಮ್ಮ ವೈಯಕ್ತಿಕ ಸಂಪರ್ಕವನ್ನು ಬಳಸಿಕೊಂಡಿದ್ದಾರೆ.
Advertisement
ಯಾರಿಗೇನಾದರೂ ನಮಗೇನು, ನಾನು ಹಣ ಮಾಡಿದರೆ ಸಾಕು ಎಂಬ ಮನೋಭಾವ ಇರುವ ವ್ಯಕ್ತಿಗಳು ಇದ್ದಷ್ಟೂ ದೇಶದಲ್ಲಿ ಭ್ರಷ್ಟತೆ ಹೆಚ್ಚುತ್ತಲೇ ಹೋಗುತ್ತದೆ. ಭಾರತದಲ್ಲಿ ಭ್ರಷ್ಟಾಚಾರದಿಂದ ಹಣ ಗಳಿಸಿ ಅನ್ಯ ರಾಷ್ಟ್ರದಲ್ಲಿ ಹೊಟೇಲ್ ನಿರ್ಮಿಸುವುದು, ಕಪ್ಪು ಹಣವನ್ನು ಆ ದೇಶದ ಬ್ಯಾಂಕುಗಳಲ್ಲಿ ಇರಿಸಿ, ನಾಟಕ ಆಡುವವರೆದುರು ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ತುಂಬಾ ಉದಾಹರಣೆಗಳಿವೆ.
ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಮೂಲ ಸೌಕರ್ಯಗಳೆಲ್ಲ ಹಣವಿದ್ದವರ ಪಾಲಾದಾಗ, ಸಾರ್ವಜನಿಕರು ಅವಶ್ಯವಾಗಿ ಸರಕಾದ ಸೌಲಭ್ಯ ಗಳಿಂದ ವಂಚಿತರಾಗುವರು. ದುಡ್ಡಿದ್ದವರು ತಮ್ಮ ಸ್ವಾರ್ಥಕ್ಕಾಗಿ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡಾಗ ದೇಶದಲ್ಲಿ ಶಿಕ್ಷಣದ ಕೊರತೆ, ಸಂಪನ್ಮೂಲಗಳ ಕೊರತೆ, ಹಣದ ತೀವ್ರ ಅಗತ್ಯತೆ ಸೃಷ್ಟಿಯಾಗುತ್ತವೆ. ಹೀಗೆ ಮೊದಲಾದ ಕಾರಣಗಳಿಂದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಸಿಗುತ್ತಿದೆ. ಮುಖ್ಯವಾಗಿ ದೇಶ ಸ್ಥಿರತೆಯಲ್ಲಿ ವ್ಯತ್ಯಾಸ ಕಂಡುಬರುವುದು. ನಮ್ಮ ದೇಶದ ಹಣವನ್ನು ಈ ರೀತಿಯಲ್ಲಿ ಕೊಳ್ಳೆ ಹೊಡೆದು ಬೇರೆ ದೇಶದ ಮಾಲ್, ಹೊಟೇಲ್‌ಗಳನ್ನು ನಿರ್ಮಿಸಿ ಸ್ವದೇಶಕ್ಕೆ ಉದ್ಯೋಗಗಳ ಬರ ಸೃಷ್ಟಿಸುತ್ತಾರೆ. ಹೀಗಾಗಿ ಆರ್ಥಿಕತೆಯಲ್ಲಿ ಏರು ಪೇರಿನ ಸಮಸ್ಯೆಗಳನ್ನು ಸಾರ್ವಜನಿಕರೇ ಅನುಭವಿಸುಂತ್ತಾಗಿದೆ.
ನನ್ನದೊಂದು ಸಲಹೆರಾಜ್ಯದಲ್ಲಿನ ಅನ್ಯಾಯ, ಅಕ್ರಮ ,ಅವ್ಯವಹಾರಗಳ ವಿರುದ್ದವಾಗಿ ನಿಲ್ಲಲು, ಕೆ.ಅರ್.ಎಸ್. (ಕರ್ನಾಟಕ ರಾಷ್ಟ ಸಮಿತಿ) ಅಡಿಯಲ್ಲಿ ಭ್ರಷ್ಟಾಚಾರ ತಡೆ ಸಮಿತಿಯನ್ನು, ಪ್ರತೀ ತಾಲೂಕಿನಲ್ಲೂ ರಚಿಸಿಬೇಕು. ವರ್ಷಕ್ಕೆ, ತಿಂಗಳಿಗೆ ಇಂತಿಷ್ಟು ಮಿತಿಯ ಭ್ರಷ್ಟರ ಪಟ್ಟಿಯನ್ನು ಸರಕಾರಕ್ಕೆ ನೀಡಬೇಕು ಎಂಬ ನೀತಿ ಮಾಡಬೇಕು. ಒಂದು ವೇಳೆ ಆ ಸಮಿತಿಗಳ ನಡುವೆ ಭ್ರಷ್ಟತೆ ನಡೆದಿದ್ದರೂ ಸಮಿತಿಯ ವರದಿಯನ್ನು ಸ್ವೀಕರಿಸಿ, ಪ್ರತೀ ಮೂರು ತಿಂಗಳಿಗೊಮ್ಮೆ, ಒಂದು ತಿಂಗಳ ಕಾಲಾವಧಿಯಲ್ಲಿ ತಾಲೂಕಿನ ಪ್ರತೀ ಹಳ್ಳಿಯ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮಸ್ಥರನ್ನು ವಾಸ್ತವಿಕ ವಿಷಯದ ಬಗ್ಗೆ ಮಾಹಿತಿ ನೀಡುವುದು ಮತ್ತು ಅವರ ದೂರುಗಳನ್ನು ತೆಗೆದುಕೊಳ್ಳಬೇಕು. ಇದಾಗ್ಯೂ ಯವುದೇ ಸಾರ್ವಜನಿಕರಿಂದ ಸಂಬಂಧಪಟ್ಟ ಇಲಾಖೆ, ಕಚೇರಿಗಳಿಗೆ ದೂರು ಬಂದು ಅದು ದೃಢಪಟ್ಟರೆ ಆ ದೂರಿನ ಅಡಿಯಲ್ಲಿ ಬರುವ ಸಮಿಗೆ ಮತ್ತು ಪ್ರತಿಯೊಬ್ಬ ಸದಸ್ಯನಿಗೆ ಪರಿಣಾಮಕಾರಿ ಶಿಕ್ಷೆಯನ್ನು ನೀಡಬೇಕು. ಹೀಗೆ ಆದಲ್ಲಿ ಮಾತ್ರ ಮುಂಬರುವ ದಿನಗಳಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಭ್ರಷ್ಟಾಚಾರ ಎಂಬ ಪಿಡುಗನ್ನು ಸಂಪೂರ್ಣವಾಗಿ ನಾಶ ಮಾಡಬಹುದಾಗಿದೆ. ಶಿವರಾಜ ಎಂ.ಕೆ., ಮಾಚೇನಹಳ್ಳಿ