Advertisement
ಪರಿಸರವಾದಿಗಳ ವಿರೋಧದ ನಡುವೆಯೂ ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರ ರಾಜ್ಯದ ಅತಿ ದೊಡ್ಡ ಎನಿಸಿ ಕೊಂಡಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನವನ್ನು (ಝುವಾಲಜಿ ಕಲ್ ಪಾರ್ಕ್)ಹಂಪಿ ಪರಿಸರದ ಕಮಲಾಪುರ ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಿಸಿದ್ದು ಸಾರ್ವಜನಿಕರಿಗೆ ಮುಕ್ತವಾಗಲಿದೆ.
2012ರಲ್ಲಿ ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನರೆಡ್ಡಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ
ಉದ್ಯಾನವನವನ್ನು ಒಟ್ಟು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿ ಕಾರ್ಯ ಆರಂಭಿಸಿದ್ದರು. ಆದರೆ ಇದಕ್ಕೆ ರಾಜ್ಯ ಸರ್ಕಾರದ ಅನುಮತಿ ದೊರೆತಿರಲಿಲ್ಲ. ಆದರೂ ಉದ್ಯಾನಕ್ಕಾಗಿ ಅಂದಿನ ಬಿಜೆಪಿ ಸರ್ಕಾರ 20 ಕೋಟಿ ರೂ. ಹಾಗೂ ಸಂಡೂರಿನ ಎನ್‌ಎಂಡಿಸಿ ಸಂಸ್ಥೆ ಸಿಎಸ್‌ಆರ್ ಅನುದಾನದಲ್ಲಿ 2 ಕೋಟಿ ರೂ. ನೀಡಿತ್ತು. ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು. ಆ ಹಣಕ್ಕೆ ಬಡ್ಡಿ ಸೇರಿ ಒಟ್ಟು 30 ಕೋಟಿಯಾಗಿತ್ತು. ಈ ಮೊತ್ತವನ್ನು ಸಫಾರಿ ಅಭಿವೃದಿಟಛಿಪಡಿಸಲು, ಸಿಬ್ಬಂದಿ ವೇತನ, ನೌಕರರ ಕೂಲಿ, ಫೆನ್ಸಿಂಗ್ ಹಾಕಲು ಮುಂತಾದ ಕಾಮಗಾರಿಗಳಿಗೆ ಈಗಾಗಲೇ ವೆಚ್ಚ ಮಾಡಲಾಗಿದೆ. ಬೆಂಗಳೂರಿನಲ್ಲಿ ಇತೀ¤ಚೆಗೆ ನಡೆದ ಸಂಪುಟ ಸಮಿತಿ ಸಭೆಯಲ್ಲಿ ಉದ್ಯಾನವನಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ. ಅಲ್ಲದೆ ಉದ್ಯಾನವನದ ಪರಿಷ್ಕೃತ ಆರ್ಥಿಕ ಪ್ರಸ್ತಾವನೆ ಅನುಮೋದಿಸಿ ಈ ಮೊತ್ತವನ್ನು 67 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈಗಾಗಲೇ ಬಳ್ಳಾರಿ ಕಿರು ಮೃಗಾಲಯದಿಂದ ತಂದಿರುವ 75 ಚುಕ್ಕೆ ಜಿಂಕೆ, 70 ಕೃಷ್ಣಮೃಗಗಳ ಜೊತೆಗೆ ಮೈಸೂರಿನಿಂದ ತರಲಾದ 5 ನೀಲಗಾಯ್‌ಗಳು “ಜಿಂಕೆ ಸಫಾರಿ ಗೆ ಮೀಸಲಾದ ಪ್ರದೇಶದಲ್ಲಿವೆ.
Related Articles
Advertisement
16ರಂದು ವಿಚಾರಣೆಪರಿಸರವಾದಿ ಸಂತೋಷ್ ಮಾರ್ಟಿನ್, ಅವರ ಸಹವರ್ತಿಯೊಬ್ಬರು ಜೈವಿಕ ಉದ್ಯಾನವನ ಆರಂಭಕ್ಕೆ ತಡೆ ನೀಡಬೇಕೆಂದು ಹೈಕೋರ್ಟ್ ಪೀಠಕ್ಕೆ ಅ.28ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠ ಉದ್ಯಾನವನ ಉದ್ಘಾಟನೆಗೆ ತಡೆ ನೀಡದೆ, ರಾಜ್ಯ ಸರ್ಕಾರ ಸೇರಿ 11 ಜನ ಪ್ರತಿವಾದಿಗಳಿಗೆ ತುರ್ತು ಆದೇಶ ಜಾರಿ ಮಾಡಿದ್ದು ನ.16ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ. – ಎಂ.ಮುರಳಿಕೃಷ್ಣ