Advertisement

ಪರೀಕರ್‌ ಹೇಳಿಕೆ ಖಂಡಿಸಿ ಪ್ರತಿಭಟನೆ

01:12 PM Mar 19, 2017 | Team Udayavani |

ಹುಬ್ಬಳ್ಳಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ ಗೋವಾ ಮುಖ್ಯಮಂತ್ರಿ ಮನೋಹರ ಪರೀಕರ್‌ ಪ್ರತಿಕೃತಿ ದಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. 

Advertisement

ಕಳಸಾ-ಬಂಡೂರಿ ಕುಡಿವ ನೀರಿನ ಯೋಜನೆ ಜಾರಿಗೆ ಆಗ್ರಹಿಸಿ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಗೋವಾ ಚುನಾವಣೆ ನಂತರ ಗೋವಾ ಮುಖ್ಯಮಂತ್ರಿ ಸಹಕಾರ ನೀಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ನೂತನ ಸಿಎಂ ಪರೀಕರ್‌ ಕರ್ನಾಟಕಕ್ಕೆ ನೀರು ನೀಡುವುದಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ. 

ಪ್ರಧಾನ ಮಂತ್ರಿ ಕೂಡಲೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಧ್ಯಸ್ಥಿಕೆ ವಹಿಸಿ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು. ದುರ್ಗದಬಯಲಿನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದು ಗೋವಾ ಮುಖ್ಯಮಂತ್ರಿ ಪರೀಕರ್‌ ಅವರ ಪ್ರತಿಕೃತಿ ದಹನ ಮಾಡಲಾಯಿತು.

ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ   ಸಂಜೀವ ದುಮಕನಾಳ, ಜೈ ಭೀಮ ಅಹಿಂದ ಶಕ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮ ನಾಯ್ಡು, ಕರ್ನಾಟಕ ಜನಸೇನಾ ಅಧ್ಯಕ್ಷ ಉತ್ತರ ವಲಯ ಪ್ರಕಾಶ ನಾಯಕ, ಸಮಗ್ರ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಕುಬೇರ ಪವಾರ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next