ಕಲಬುರಗಿ: ಈ ಭಾಗದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಪಿಯು (ಎಸ್‌ಬಿಆರ್) ಕಾಲೇಜಿಗೆ ಪ್ರತಿವರ್ಷದಂತೆ ಪ್ರಸಕ್ತ ಪಿಯುಸಿ ಫಲಿತಾಂಶದಲ್ಲಿ ಮತ್ತೆ ದಾಖಲೆ ಫಲಿತಾಂಶ ಬಂದಿದೆ. ಇಡೀ ಹೈದ್ರಾಬಾದ ಕರ್ನಾಟಕವೇ ಹುಬ್ಬೇರಿಸುವಂತೆ 298 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿ ನಾಗರಾಜ ಬಗಲಕರ್ 588 ಅಂಕ ಪಡೆದು ಜಿಲ್ಲೆಗೆ ಟಾಪರ್ ಹಾಗೂ ರಾಜ್ಯಕ್ಕೆ 10 ಸ್ಥಾನ ಪಡೆದಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದಾನೆ.
ನಾಗರಾಜ ಕನ್ನಡದಲ್ಲಿ 94, ಇಂಗ್ಲಿಷದಲ್ಲಿ 97, ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತ್ರದಲ್ಲಿ 100, ಗಣಿತದಲ್ಲಿ 99 ಹಾಗೂ ಜೀವಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದಾನೆ. ಕಾಲೇಜಿನಲ್ಲಿ ಅತ್ಯುತ್ತಮ ಬೋಧನೆ ಹಾಗೂ ಕಾಲಾನುಕಾಲ ಅವಶ್ಯಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾ ಸೂಕ್ತ ಮಾರ್ಗದರ್ಶನ ನೀಡಿದ್ದೇ ಟಾಪರ್ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವಿದ್ಯಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
298 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ದಲ್ಲಿ ಪಾಸಾಗಿದ್ದರೆ 378 ವಿದ್ಯಾರ್ಥಿಗಳು ಪ್ರಥಮ ದರ್ಜೆ, 39 ದ್ವಿತೀಯ ದರ್ಜೆ ಹಾಗೂ ಕೇವಲ 08 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಒಟ್ಟಾರೆ ಕಾಲೇಜಿಗೆ ಶೇ. 96ರಷ್ಟು ಫಲಿತಾಂಶ ಬಂದಿದೆ.
ಕಾಲೇಜಿನ ಭುವನೇಶ್ವರಿ ಗುಂಡದ್, ಅನುಷಾ ಆರ್. ಪಾಟೀಲ 586 ಅಂಕ, ಲುಬಾ ಹಾಗೂ ಭಾಗ್ಯಶ್ರೀ ಎಸ್. ಬಿರಾದಾರ 585 ಅಂಕ ಪಡೆದಿದ್ದರೆ, ಸಹನಾ ಎಚ್. 585 ಅಂಕಗಳನ್ನು ಪಡೆದು ತದನಂತರದ ಟಾಪರ್ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಭೌತಶಾಸ್ತ್ರದಲ್ಲಿ 15, ರಸಾಯನಶಾಸ್ತ್ರದಲ್ಲಿ 24, ಗಣಿತದಲ್ಲಿ 27 ಹಾಗೂ ಜೀವಶಾಸ್ತ್ರದಲ್ಲಿ 04 ಹಾಗೂ ಎಲೆಕ್ಟ್ರಾನಿಕ್ಸ್ 04, ಗಣಕಶಾಸ್ತ್ರ 02 ಹಾಗೂ ಹಿಂದಿ ವಿಷಯದಲ್ಲಿ 03 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
ಸೌಮ್ಯ ಎ. ಹಿರೇಮಠ 583, ಸ್ಫೂರ್ತಿ ಎಸ್ 581, ಸೀಮಾ ಫಾತೀಮಾ 580, ಕಾವ್ಯ ಎ. ಪಠಾಣ 579, ಪ್ರೇರಣಾ ಭರತ 579, ಸಂಗಮೇಶ ಬಬಲೇಶ್ವರ 579, ಸುಷ್ಮಾ ಎಸ್. ಜೆ 579, ಭಾಗ್ಯಶ್ರೀ ಧೂಳಪ್ಪ 578, ಹರ್ಷಾ ಗುಡೇದ್ 578, ವಿದ್ಯಾಸಾಗರ ಪಾಟೀಲ 578, ಅಬುಲಖೈರ್ 577, ಅಂಜಲಿ ಆಕಾಶಕೋರೆ 577, ಅಹ್ಮದಿ ಶಕೀಲ್ ಖಾನ್ 574, ಅರ್ಪಿತಾ ಅರುಣಕುಮಾರ 574, ನಿರಂಜನ್ ಬೀರನಳ್ಳಿ 574, ಪ್ರಶಾಂತ ಎನ್. ಸೂರೆ 573, ಶ್ರೀಪ್ರಿಯಾ ಕುಲಕರ್ಣಿ 573, ಧೂಳಪ್ಪ ನಾಗಣ್ಣ 572, ನಿಷ್ಠಾ ಸೌಶೆಟ್ಟಿ 572, ರೋಹನ ಪ್ರಭುಜರಾಜ 572, ಸೌಜನ್ಯ ಆರ್. ಬಿರಾದಾರ 572, ಸೌಮ್ಯ ಆರ್. ಬಿರಾದಾರ 572, ಸುಷ್ಮಾ ವೈಜನಾಥ 572, ಸುರೇಖಾ ಬಿ. ಪಾಟೀಲ 571, ಅಪೂರ್ವ ಎಸ್. ಜಿಂದೆ 570, ಮಂಜುನಾಥ ಎಸ್. ನಾಗಶೆಟ್ಟಿ 570, ನಿರಜಾ ಸಿ. ಕಲಬುರಗಿ 570, ರಹೀಲ್ಲಾ ತಾಷ್ಕಿನ್ 570, ಸ್ಮಿತಾ ಮೈನಾಳೆ 570, ಶ್ರೀರಾಮ ಕಡಗಿ 570 ಅಂಕಗಳನ್ನು ಪಡೆದಿದ್ದಾರೆ.