Advertisement
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಂದಾಣಿಕೆ ರಾಜಕಾರಣದಿಂದಲೇ ನೈತಿಕತೆ ಕಳೆದುಕೊಂಡಿರುವ ರಾಜಕೀಯ ಪಕ್ಷಗಳು ಯಾವುದಾದರೂ ಪ್ರಕರಣ ನಡೆದರೆ ಟೊಳ್ಳು ಹೇಳಿಕೆ, ವಿರೋಧ ತೋರುತ್ತಿವೆಯೇ ವಿನಃ ಪ್ರಾಮಾಣಿಕತೆ ಇಲ್ಲವಾಗಿದೆ. ಭ್ರಷ್ಟ ವ್ಯವಸ್ಥೆ ತೊಲಗಬೇಕು, ಹೊಂದಾಣಿಕೆ ನಿಲ್ಲಬೇಕು, ಜನತೆಗೆ ಮೂಲಭೂತ ಸೌಲಭ್ಯಗಳು ಪ್ರಾಮಾಣಿಕವಾಗಿ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಇರುವ ಕೆಟ್ಟ ವ್ಯವಸ್ಥೆ ಬದಲಾಯಿಸಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಆಮ್ ಆದ್ಮಿ ಪಕ್ಷ ಹಲವು ಯೋಜನೆ ಹೊಂದಿದೆ ಎಂದರು.
Related Articles
Advertisement
ಆದರೆ ಈ ಪ್ರಕರಣ ಇಡೀ ವ್ಯವಸ್ಥೆಗೆ ಕಪ್ಪುಚುಕ್ಕೆಯಂತಾಗಿದೆ. ನಾನು ಪೊಲೀಸ್ ಇಲಾಖೆಯಲ್ಲಿಯೇ ಇದ್ದೆ. ಹಿಂದೆ ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಸಂದರ್ಶನದಲ್ಲಿ 10 ಅಂಕಗಳು ಇರುತ್ತಿದ್ದವು. ಅಂಕ ಹಾಕಲು ಒತ್ತಡಗಳು ಬರುತ್ತಿದ್ದವಾದರೂ ನೇಮಕಾತಿ ಪಾರದರ್ಶಕತೆ ಮೀರಿರಲಿಲ್ಲ. ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿದೆ. ಅನ್ಯಾಯಕ್ಕೊಳಗಾದವರು ಹೈಕೋರ್ಟ್ ಮೊರೆ ಹೋಗುವಂತೆ ಹೇಳಿದ್ದೇನೆ. ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತೂಮ್ಮೆ ಪರೀಕ್ಷೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ರಾಜ್ಯ ಸರಕಾರ ಉತ್ತಮ ಆಡಳಿತ ದಿನವಾಗಿ ಆಚರಿಸಿತ್ತು. ದುರಹಂಕಾರ, ಹಣದ ದರ್ಪದಲ್ಲಿರುವ ಬಿಜೆಪಿ ಸರಕಾರ ಯಾವ ನೈತಿಕತೆಯಿಂದ ದಿನಾಚರಣೆ ಕೈಗೊಂಡಿದೆ ಎಂದು ತಿಳಿಯುತ್ತಿಲ್ಲ ಎಂದರು.
ಎಎಪಿ ಮುಖಂಡರಾದ ರೇವಣ ಸಿದ್ದಪ್ಪ, ಎಂ. ಅರವಿಂದ, ರಾಜು ಟೋಪಣ್ಣವರ, ಅನಂತಕುಮಾರ ಬುಗಡಿ, ವಿಕಾಸ ಸೊಪ್ಪಿನ ಇನ್ನಿತರರಿದ್ದರು. ಆಮ್‌ಆದ್ಮಿ ಪಕ್ಷದ ಹು.ಧಾ.ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಿರೇಮಠ ಅವರು ಕೋಮು ಸೌಹಾರ್ದತೆಗಾಗಿ ಬೆಂಗಳೂರುವರೆಗೆ ಕೈಗೊಂಡ ಸೈಕಲ್ ಯಾತ್ರೆಗೆ ಭಾಸ್ಕರರಾವ್ ಚಾಲನೆ ನೀಡಿದರು.
ಪೊಲೀಸರ ಕೈ ಕಟ್ಟಿ ಹಾಕಿದ್ದರಿಂದ ಗಲಭೆಗಳು ಹೆಚ್ಚಳ
ಧಾರವಾಡ: ಪ್ರಸ್ತುತ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಆದ್ದರಿಂದ ಕೋಮು ಗಲಭೆಗಳು ಹೆಚ್ಚಾಗುತ್ತಿವೆ. ಪೊಲೀಸರಿಗೆ ಅವರ ಅಧಿಕಾರ ನೀಡಿದ್ದರೆ ಹುಬ್ಬಳ್ಳಿ ಘಟನೆ ತಡೆಯಲು ಆಗುತ್ತಿರಲಿಲ್ಲವೇ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್‌ರಾವ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಯಿಂದ ಲಂಚ ಪಡೆಯುವ ಶಾಸಕರು, ಸಚಿವರು ಅವರನ್ನು ತಮಗೆ ಬೇಕಾದ ಸ್ಥಳಕ್ಕೆ ನಿಯೋಜಿಸುತ್ತಾರೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಆದರೆ ಲಕ್ಷಾಂತರ ರೂ. ನೀಡಿ ಅಧಿಕಾರಕ್ಕೇರುವವರ ನಿಷ್ಠೆ ಯಾರಿಗೆ ಇರುತ್ತದೆ? ಲಂಚ ಕೊಟ್ಟು ಮೇಲೆ ಬಂದ ಪೊಲೀಸರು ಭ್ರಷ್ಟ ರಾಜಕಾರಣಿಗಳಿಗೆ ಸೆಲ್ಯೂಟ್ ಹೊಡಿಯುತ್ತಾ, ಶಾಸಕ, ಸಚಿವರ ಮನೆ ಕಾಯುತ್ತಲೇ ಇರುತ್ತಾರೆ ಎಂದರು.