ಉಡುಪಿ/ಹೆಬ್ರಿ: ವೃತ್ತಿ ಪರರು ಸಾಮಾನ್ಯವಾಗಿ ಅವರದೇ ವೃತ್ತಿ/ಉದ್ಯೋಗಕ್ಕೆ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಾರೆ. ಇದಕ್ಕೆ ಮುಖ್ಯವಾಗಿ ಲೋಕದಲ್ಲಿ ಕಾಣುವ ಕಾರಣ “ನನ್ನ ಉದ್ಯೋಗದ ತೊಂದರೆ ನಮ್ಮ ಮಕ್ಕಳಿಗೆ ಬೇಡ’ ಎಂಬುದು. ಆದರೆ ಆಗುಂಬೆ ಗುಡ್ಡೆಕೇರಿ-ಹೆಬ್ರಿ ಚಾರ ಕೆರೆಬೆಟ್ಟುವಿನ ದಂಪತಿ ತಮ್ಮ ಮುದ್ದಿನ ಮಗಳು ಸೈನ್ಯಕ್ಕೆ ಸೇರಿಸಬೇಕೆಂಬ ಇರಾದೆಯನ್ನು ನಾಮ ಕರಣದೊಂದಿಗೇ ಶ್ರುತಪಡಿಸಿದ್ದಾರೆ.
ಗುಡ್ಡೆಕೇರಿಯ ಪ್ರಶಾಂತ ಮತ್ತು ಚಾರ ಕೆರೆಬೆಟ್ಟುವಿನ ಆಶಾ ದಂಪತಿ ಪುತ್ರಿಯೇ ಈ “ಸೈನ್ಯ’. ಸೇನೆಗೆ ಸಂಬಂಧಪಟ್ಟ ಕಾರಣ ಮಾತ್ರವಲ್ಲದೆ ಮಗಳನ್ನು ಸೇನೆಗೆ ಸೇರಿಸುವ ಗುರಿಯೊಂದಿಗೆ ಸೈನ್ಯ ಎಂಬ ಹೆಸರನ್ನು ಇಡಲಾಗಿದೆ.
ಮೇಲಾಗಿ ಈಕೆ ಹುಟ್ಟಿದ್ದೂ ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ. ಪಂಜಾಬ್, ಜಮ್ಮು ಕಾಶ್ಮೀರ, ದಿಲ್ಲಿ, ಉತ್ತರಾ ಖಂಡ ಹೀಗೆ ಉತ್ತರ ಭಾರತದ ವಿವಿಧೆಡೆ ಸೇವೆ ಸಲ್ಲಿಸಿರುವ ಪ್ರಶಾಂತ್ ಪ್ರಸ್ತುತ ಮತ್ತೆ ಎರಡನೇ ಬಾರಿಗೆ ಜಮ್ಮು ಕಾಶ್ಮೀರ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಕಿಸ್ಥಾನಕ್ಕೆ ಕೇವಲ 600 ಮೀ. ಅಂತರದಲ್ಲಿ (ನೌಶಾರ್) ಕರ್ತವ್ಯ ದಲ್ಲಿದ್ದಾರೆ. 2002ರಲ್ಲಿ ಪ್ರಶಾಂತ್ ಸೇನೆಗೆ ಸೇರಿದ್ದು 20 ವರ್ಷ ಆಗು ತ್ತಿದೆ. ಹಿಂದೆ ಸಿಪಾಯಿಯಾಗಿದ್ದ ಅವರು ಈಗ ಹವಾಲ್ದಾರ್ ಆಗಿದ್ದಾರೆ.
ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ
ಪ್ರಶಾಂತ್ ಅವರು ಮದುವೆ ಯಾಗಿ 10 ವರ್ಷ ಕಳೆದರೂ ಮಕ್ಕಳಾ ಗಿರಲಿಲ್ಲ. ಹಲವಾರು ಹರಕೆಗಳ ಫಲವಾಗಿ ಮಗುವಾಗಿದ್ದು, ಇದೀಗ ಒಂದೂವರೆ ವರ್ಷವಾಗಿದೆ. ಮುದ್ದಿನ ಮಗಳಿಗೆ “ಸೈನ್ಯ’ ಎಂದು ಹೆಸರಿಸಿ ಬೆಳೆಯುತ್ತಿರುವಾಗಲೇ ದೇಶಸೇವೆಗೆ ಮಗಳನ್ನು ಸಜ್ಜು ಗೊಳಿಸುತ್ತಿದ್ದಾರೆ.
ಮಗು ಬೆಳೆಯುವಾಗಲೇ ತನಗೆ ಏಕಾಗಿ “ಸೈನ್ಯ’ ಎಂದು ಹೆಸರು ಇಟ್ಟರು ಎಂದು ಅರಿತುಕೊಳ್ಳಬೇಕು. ಆಕೆ ಮುಂದೆ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಹೆಬ್ಬಯಕೆ ಇದೆ.
– ಪ್ರಶಾಂತ್ ಮತ್ತು ಆಶಾ