Advertisement

ಆಫೀಸ್‌ನಲ್ಲಿ ಗಬ್ಬುವಾಸನೆ…‌

04:52 AM Jun 09, 2020 | Lakshmi GovindaRaj |

ಭಣಗುಡುವ ಆಫೀಸಲ್ಲಿ,  ಯಾವುದೋ ಫೈಲ್‌ ಗಳನ್ನು ತೆರೆದು ಕೂರುವ ಶಿಕ್ಷೆ ಇದೆಯಲ್ಲ, ಅದು ಯಾರಿಗೂ ಬೇಡ. ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಕಾಫಿ, ಟೀ ಸರಬರಾಜು ಇಲ್ಲ. ನೀರು ಕುಡಿಯಲು ಕೈ ಇಟ್ಟರೆ, ಕೋವಿಡ್‌ 19 ಭಯ!

Advertisement

ಆಫೀಸಿಗೆ ಹೋಗುವುದಕ್ಕೆ ಭಯವಾಗುತ್ತದೆ. ಮೊದಲೇ ನಮ್ಮ ಬಾಸ್‌ ಶಾರ್ಟ್‌ ಟೆಂಪರ್‌. ಅವರು ಕಂಪನಿಯ ಪಾರ್ಟನರ್‌ ಕೂಡಾ. ಕೋವಿಡ್‌ 19ದಿಂದ ಯಾವುದೇ ವ್ಯವಹಾರ ನಡೆಯದೆ, ಆದಾಯ ಖೋತಾ ಆಗಿದೆ. ಆದರೂ ಅವರು ನೌಕರರಿಗೆ ಸಂಬಳ ಕೊಡಬೇಕು. ಈ ಕಾರಣಕ್ಕೇ ಅವರಿಗೆ ಟೆನ್ಶನ್‌. ಪರಿಣಾಮ, ಎದುರಿಗೆ ಯಾರು ಸಿಕ್ಕರೂ ಅವರ ಮೇಲೆ ಎಗರಾಡಿ, ಕೂಗಾಡುವುದು ಅವರ ರೂಢಿ.  ನಮ್ಮಲ್ಲಿ ಸುಮಾರು ಎರಡು ಸಾವಿರ ಜನ ಕೆಲಸಗಾರರಿದ್ದಾರೆ.

ನಮ್ಮದು ಪೊ›ಡಕ್ಷನ್‌ ಕಂಪೆನಿ, ಮಾರ್ಕೆಟಿಂಗ್‌ ಔಟ್‌ಸೋರ್ಸ್‌ ಕೊಟ್ಟಿಲ್ಲ. ನಮ್ಮ ಕಂಪೆನಿಯೇ ಅದನ್ನು ಮಾಡುತ್ತದೆ. ನಮ್ಮ ಪ್ರಾಡಕr… ವಿದೇಶಕ್ಕೆಲ್ಲಾ ಹೋಗುತ್ತದೆ. ಕಾರ್ಖಾನೆಯ ಕೆಲಸಗಾರರ ಯೋಗಕ್ಷೇಮ ನೋಡಿಕೊಳ್ಳುವ ಉಸಾಬರಿ ನನ್ನ ಹೆಗಲ ಮೇಲೆ. ಲಾಕ್‌ಡೌನ್‌ ಅಲ್ವಾ? ಇವನಿಗೇನೂ ಕೆಲಸ ಇಲ್ಲ ಅಂತ ಯೋಚಿಸಿದ ನಮ್ಮ ಬಾಸ್‌, ಪೊ›ಡಕ್ಷನ್‌ ಲೆಕ್ಕಗಳನ್ನೆಲ್ಲಾ ನನ್ನ ತಲೆಗೆ ಕಟ್ಟಿಬಿಟ್ಟಿದ್ದಾರೆ.

ಇದೇನಾಗಿದೆ ಅಂದರೆ, ಕಳೆದ ಜನವರಿ- ಫೆಬ್ರವರಿಯಲ್ಲಿ  ತೆಗೆದುಕೊಂಡ ಆರ್ಡರ್‌ಗಳನ್ನು ಏಪ್ರಿಲ್‌ನಲ್ಲಿ ಡಿಲಿವರಿ ಕೊಡಬೇಕಿತ್ತು. ಲಾಕ್‌ಡೌನ್‌ನಿಂದ ಪೊ›ಡಕ್ಷನ್‌ ಪೂರ್ತಿ ಆಗಿಲ್ಲ. ಆದರೆ ಮುಂಗಡ ಹಣ ಕೊಟ್ಟವರು ಕೈ ಕೊಟ್ಟಿ ಕುಳಿತಿಲ್ಲ. ವಿದೇಶಿಗರಂತೂ ಅಡ್ವಾನ್ಸ್‌ ಹಣವನ್ನು ವಾಪಸ್‌  ಕೊಡಿ ಎಂದೇ ಕೇಳುತ್ತಿದ್ದಾರೆ. ಅದರ ಫೈಲನ್ನು ನಾನೇ ಕ್ಲಿಯರ್‌ ಮಾಡಬೇಕು. ಹೀಗಾಗಿ, ಲಾಕ್‌ ಡೌನ್‌ ಆದರೂ, ಮನೆಯಲ್ಲಿ ಕೆಲಸ.

ಇವರು ಕೆಲಸ ಮಾಡುವುದಿಲ್ಲ ಅಂತ ಬಾಸ್‌ಗೆ ಅನಿಸಿದ ದಿನ, ನಾನು ಆಫೀಸಿಗೆ ಬರಬೇಕು. ಹೀಗಾಗಿ,  ವಾರಕ್ಕೆ ಮೂರು ದಿನವಾದರೂ, ನಾನು ನನ್ನ ಕೆಲಸ ಸಾಬೀತು ಮಾಡಲಾದರೂ ಆಫೀಸಿಗೆ ಹೋಗಲೇಬೇಕಾಗಿದೆ.ಭಣಗುಡುವ ಆಫೀಸಲ್ಲಿ, ಯಾವುದೋ ಫೈಲ್‌ಗ‌ಳನ್ನು ತೆರೆದು ಕೂರುವ ಶಿಕ್ಷೆ ಇದೆಯಲ್ಲ, ಅದು ಯಾರಿಗೂ ಬೇಡ.  ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಕಾಫಿ, ಟೀ ಇಲ್ಲ. ನೀರು ಕುಡಿಯಲು ಕೈ ಇಟ್ಟರೆ ಕೋವಿಡ್‌ 19 ಭಯ.  ಎಲ್ಲಕ್ಕಿಂತ ಮುಖ್ಯವಾಗಿ, ಆಫೀಸನ್ನು ಶುಚಿ  ಗೊಳಿಸುವ ಮಂದಿ ಬಂದು ಅದ್ಯಾವ ಕಾಲ ಆಯ್ತೋ.

Advertisement

ಕಂಪ್ಯೂಟರ್‌ ಮೇಲೆ ಒಂದು  ಮಣ ಧೂಳು. ಎಸಿ ಇಲ್ಲದ್ದರಿಂದ ವಿಚಿತ್ರವಾದ ಗಬ್ಬುವಾಸನೆ… ಇಂಥ ಪರಿಸ್ಥಿತಿ ಯಲ್ಲಿ, ಆಗಾಗ ಬಂದು ರೇಗಾ ಡುವ ಬಾಸ್‌ ಅನ್ನು ಸಹಿಸಿಕೊಂಡು ಕೆಲಸ ಮಾಡುವ ಸ್ಥಿತಿ ಬಂದಿದೆ. ಕೋವಿಡ್‌ 19 ಅಟ್ಟಹಾಸ ಹೀಗೇ ಮುಂದುವರಿ ದರೆ, ನಮ್ಮ ಕೆಲಸಗಳಿಗೆ ಕುತ್ತು ಬರುವ ಆತಂಕ ಬೇರೆ. ಒಟ್ಟಾರೆ, ಈ ಕೋವಿಡ್‌ 19 ಯಾವಾಗ ತೊಲಗುತ್ತದೆಯೋ. ನಮ್ಮಗಳ ಪರಿಸ್ಥಿತಿ ಯಾವಾಗ ಸರಿಯಾಗು ತ್ತದೆಯೋ ಅನಿಸತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next