Advertisement
ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ ಆಯೋಜಿಸಿದ್ದ 68ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ವಿಶ್ವದಲ್ಲೇ ಅತ್ಯುತ್ತಮ ವಾದ ಪ್ರತ್ಯಕ್ಷ ಕಾರ್ಯ ರೂಪಕ್ಕಿಳಿಯುವ, ಪರಿವರ್ತನಾಶೀಲವಾದ, ಯುದ್ಧ ಕಾಲದಲ್ಲೂ ದೇಶವನ್ನು ಏಕಸೂತ್ರದಲ್ಲಿ ಬಂಧಿಸುವ ಸಾಮರ್ಥ್ಯವುಳ್ಳ ಸಂವಿಧಾನ ನಮ್ಮಲ್ಲಿದ್ದರೂ ಸಾಧನೆಯ ದಿಕ್ಕಿನಲ್ಲಿ ನಿಧಾನವಾದ ಹೆಜ್ಜೆ ಇಡುತ್ತಿರುವುದು ವಿಪರ್ಯಾಸ ಎಂದರು.
Related Articles
Advertisement
ಪಿರಿಯಾಪಟ್ಟಣ ತಹಶೀಲ್ದಾರ್ ಎಚ್.ಆರ್. ರಂಗರಾಜು ಅವರ ಪರವಾಗಿ ಶಿವಕುಮಾರ್, ಕೆ.ಆರ್.ಆಸ್ಪತ್ರೆ ಪ್ರಥಮ ದರ್ಜೆ ಸಹಾಯಕ ಡಿ. ಆನಂದ್, ಎಚ್.ಡಿ. ಕೋಟೆ ತಾಲೂಕು ಸಹಾಯಕ ಕೃಷಿ ಅಧಿಕಾರಿ ರವಿಕುಮಾರ್ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಿಯಾಚಿನ್ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮನಾಗಿದ್ದ ಯೋಧ ಪಿ.ಎನ್.ಮಹೇಶ್ ಅವರ ತಾಯಿ ಸರ್ವಮಂಗಳಾ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಜಿ.ಟಿ. ದೇವೇಗೌಡ, ಮೇಯರ್ ಎಂ.ಜೆ. ರವಿಕುಮಾರ್, ಉಪಮೇಯರ್ ರತ್ನ ಲಕ್ಷ್ಮಣ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ, ವಿವಿಧ ನಿಗಮ- ಮಂಡಳಿ ಅಧ್ಯಕ್ಷರಾದ ಮಲ್ಲಿಗೆ ವೀರೇಶ್, ಬಿ. ಸಿದ್ದರಾಜು, ಎಚ್.ಎ. ವೆಂಕಟೇಶ್, ಡಿ. ಧ್ರುವಕುಮಾರ್, ಜಿಲ್ಲಾಧಿಕಾರಿ ಡಿ. ರಂದೀಪ್, ನಗರ ಪೊಲೀಸ್ ಆಯುಕ್ತ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್, ದಕ್ಷಿಣ ವಲಯ ಐಜಿಪಿ ವಿಫುಲ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ, ಜಿಪಂ ಸಿಇಒ ಪಿ. ಶಿವಶಂಕರ್, ನಗರಪಾಲಿಕೆ ಆಯುಕ್ತ ಜಗದೀಶ್, ಮುಡಾ ಆಯುಕ್ತ ಡಾ. ಮಹೇಶ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು. ಆಕರ್ಷಕ ಪಥಸಂಚಲನ
68ನೇ ಗಣರಾಜ್ಯೋತ್ಸವ ಅಂಗ ವಾಗಿ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಧಾನ ದಳಪತಿ ಶಿವರಾಜು ಅವರೊಂದಿಗೆ ತೆರೆದ ವಾಹನದಲ್ಲಿ ತಂಡಗಳ ಪರಿವೀಕ್ಷಣೆ ಮಾಡಿ, ಗೌರವ ರಕ್ಷೆ ಸ್ವೀಕರಿಸಿದರು. ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ತಂಡ, ನಗರ ನಾಗರಿಕ ಪೊಲೀಸ್ ತಂಡ, ಸತೀಶ್ ನೇತೃತ್ವದ ನಗರ ನಾಗರಿಕ ಪೊಲೀಸ್ ಪಡೆ, ಕೇಶವಮೂರ್ತಿ ನೇತೃತ್ವದ ಸಿಟಿ ಪೊಲೀಸ್ ತಂಡ, ನಗರ ಸಂಚಾರ ಪೊಲೀಸ್, ರೈಲ್ವೆ ರಕ್ಷಣಾ ದಳ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಮಹಿಳಾ ನಾಗರಿಕ ಪೊಲೀಸ್ ಪಡೆ, ಗೃಹರಕ್ಷಕ ದಳ, ಕರ್ನಾಟಕ ಪೊಲೀಸ್ ಅಕಾಡೆಮಿ ತಂಡ, ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಭಾಗ, ಅಬಕಾರಿ ಇಲಾಖೆ, ಎನ್‌ಸಿಸಿ ಭೂ ಸೇನಾ, ಎನ್‌ಸಿಸಿ ನೌಕದಳ, ಎನ್‌ಸಿಸಿ ವಾಯುದಳ, ಪೊಲೀಸ್ ಪಬ್ಲಿಕ್ ಶಾಲೆ, ಎಸ್‌ಎಆರ್‌ಎಸ್ ತಂಡ, ಜವಾಹರ್ ನವೋದಯ ವಿದ್ಯಾಲಯ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ 30 ತಂಡಗಳು ಪಥಸಂಚಲನ ನಡೆಸಿದವು.