Advertisement

ಬಿಜೆಪಿ ನಾಯಕರ ಗುಲಾಮಗಿರಿಯಿಂದ ರಾಜ್ಯಕ್ಕೆ ಅನ್ಯಾಯ: ಸಿದ್ದರಾಮಯ್ಯ

04:40 PM Oct 14, 2021 | Team Udayavani |

ಕಲಬುರಗಿ: ರಾಜ್ಯಕ್ಕೆ ಬರಬೇಕಿದ್ದ ಕೇಂದ್ರ ಸರ್ಕಾರದ ಜಿಎಸ್‌ಟಿ ಪಾಲು ಮತ್ತು ಅನುದಾನ ಬಿಡುಗಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಅನ್ಯಾಯವಾಗಿದೆ. ಕರ್ನಾಟಕದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ಇದರ ಬಗ್ಗೆ ಅವರು ಧ್ವನಿ ಎತ್ತುತ್ತಿಲ್ಲ. ರಾಜ್ಯ ಬಿಜೆಪಿಯವರು ಗುಲಾಮಗಿರಿಗೆ ಒಳಗಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಜಾರಿ ವೇಳೆ ಮಾಡಿಕೊಂಡ ಒಪ್ಪಂದದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗುವ ನಷ್ಟವನ್ನು 2022ರವರೆಗೂ ಭರ್ತಿ ಮಾಡಿಕೊಡಬೇಕು. ಪ್ರಧಾನಿ ಮೋದಿ ಅವರಿಗೆ ಕರ್ನಾಟಕ ಪಾಲಿನ ಹಣ ಕೊಡುವ ಆಸಕ್ತಿಯೇ ಇಲ್ಲ. 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಗಣನೀಯವಾಗಿ ಕಡಿಮೆ ಮಾಡಿದ್ದಾರೆ ಎಂದರು.

14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ.4.71ರಷ್ಟು ಪರಿಹಾರ ಕೊಡಬೇಕಿತ್ತು. ಆದರೆ, 15ನೇ ಹಣಕಾಸು ಆಯೋಗದಲ್ಲಿ ಶೇ.1.67ರಷ್ಟು ಕಡಿತ ಮಾಡಿ ಶೇ.3.64ರಷ್ಟು ಮಾತ್ರ ನಷ್ಟ ಪರಿಹಾರ ಅನುದಾನ ಕೊಡಲು ಮುಂದಾಗಿದೆ. ಇದರಿಂದ ರಾಜ್ಯಕ್ಕೆ 78 ಸಾವಿರ ಕೋಟಿ ರೂ. ಬದಲು 40 ಸಾವಿರ ಕೋಟಿ ರೂ. ಮಾತ್ರ ಬರಲಿದೆ. ಅಲ್ಲದೇ, ರಾಜ್ಯಕ್ಕೆ ಬರಬೇಕಿದ್ದ 5,495 ಕೋಟಿ ರೂ. ವಿಶೇಷ ಪರಿಹಾರ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸುಮಾರು 40 ಸಾವಿರ ಕೋಟಿ ರೂ. ಅನುದಾನ ಖೋತಾ ಆಗಲಿದೆ. ಈ ಅನ್ಯಾಯಕ್ಕೆ ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರೇ ಕಾರಣ ಎಂದರು.

Advertisement

Udayavani is now on Telegram. Click here to join our channel and stay updated with the latest news.