Advertisement

ನಗರದ 72 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ಸ್ವಚ್ಛತಾ ಕಾರ್ಯ

11:57 AM Oct 03, 2017 | Team Udayavani |

ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಯುನೈಟೆಡ್‌ ಬೆಂಗಳೂರು ಸಂಘಟನೆ ಸೋಮವಾರ ನಗರದ 72 ವಾರ್ಡ್‌ಗಳಲ್ಲಿ ಏಕಕಾಲಕ್ಕೆ “ಮೆಗಾ ಕ್ಲೀನ್‌ಥಾನ್‌’ ಸ್ವಚ್ಛತಾ ಅಭಿಯಾನ ನಡೆಸಿತು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರ ನಿವಾಸದಿಂದ ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ನೇತೃತ್ವದಲ್ಲಿ ಆರಂಭಗೊಂಡ ಸ್ವಚ್ಛತಾ ಅಭಿಯಾನ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕೊನೆಗೊಂಡಿತು.

Advertisement

ಇಡೀ ಅಭಿಯಾನದಲ್ಲಿ ನಗರದ 72 ವಾರ್ಡ್‌ಗಳಲ್ಲಿ ಹಾಗೂ 9 ಕೆರೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಹಲಗೆವಡೇರಹಳ್ಳಿ ಕೆರೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪಾಲ್ಗೊಂಡು ಸ್ವಚ್ಛತೆ ಕೈಗೊಂಡರು. ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ವಕ್ತಾರರಾದ ಮಾಳವಿಕಾ ಅವಿನಾಶ್‌, ಶಾಸಕ ವಿಜಯಕುಮಾರ್‌, ನಟ ಗಣೇಶ್‌, ಶಿಲ್ಪಾ ಗಣೇಶ್‌, ನಟಿಯರಾದ ಮಯೂರಿ, ಸಂಯುಕ್ತ ಬೆಳವಾಡಿ, ಪಾಲಿಕೆ ಸದಸ್ಯರು, ಪೌರಕಾರ್ಮಿಕರು, ಸ್ವಯಂ ಸೇವಕರು ಸೇರಿದಂತೆ ನೂರಾರು ಗಣ್ಯರು ಸಾಥ್‌ ನೀಡಿದರು. ಎಲ್ಲರೂ ವಯಸ್ಸಿನ ಹಂಗಿಲ್ಲದೆ ಕಸ ವಿಲೇವಾರಿ ಮತ್ತು ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಗಮನಸೆಳೆದರು. 

ಇದಲ್ಲದೆ, ಪಟ್ಟಾಭಿರಾಮನಗರದಲ್ಲಿ ಕಲತ್ವ ಎಂಬ ರಾಕ್‌ ಮ್ಯೂಸಿಕ್‌ ತಂಡವು “ಭೂಮಿಯು ಸ್ವರ್ಗವಾಗುತ್ತಿದೆ ನೋಡು….’ ಗೀತೆಯ ಮೂಲಕ ಜಾಗೃತಿ ಮೂಡಿಸಿದರು. ಹಲಗೆವಡೇರಹಳ್ಳಿಯಲ್ಲಿ ಗ್ರೀನ್‌ಸ್ಟೆàಜ್‌ ಎಂಬ ಬೀದಿ ನಾಟಕ ತಂಡವು ಸ್ವಚ್ಛತೆ ಕಾಪಾಡುವುದು ಮತ್ತು ಕಸ ವಿಲೇವಾರಿ, ಬೀದಿ ಬದಿ ಕಸ ಎಸೆಯುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ಮನಮುಟ್ಟುವಂತೆ ಪ್ರದರ್ಶಿಸಿದರು. ಜ್ಞಾನಭಾರತಿ ಕ್ಯಾಂಪಸ್‌ನಲ್ಲಿಯೂ ಖಾಸಗಿ ವಾಹಿನಿ ವತಿಯಿಂದ ದೊಡ್ಡಮಟ್ಟದ ರಾಕ್‌ ಮ್ಯೂಸಿಕ್‌ ಮೂಲಕ ಜಾಗೃತಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next