ಮೆಲ್ಬರ್ನ್: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಇದೀಗ ಫೈನಲ್ ಹಂತಕ್ಕೆ ಬಂದಿದೆ. ಪಾಕಿಸ್ಥಾನ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶ ಮಾಡಿದ್ದು, ರವಿವಾರ ಮೆಲ್ಬರ್ನ್ ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಇದೇ ವೇಳೆ ಈ ಬಾರಿಯ ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಯ್ಕೆಗೆ ಮತ ಹಾಕುವ ಅವಕಾಶವನ್ನು ನೀಡಲಾಗಿದೆ. ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ.
ಇದನ್ನೂ ನೋಡಿ:ಕೇರಳ ನರ್ಸಿಂಗ್ ವಿದ್ಯಾರ್ಥಿನಿಗೆ ನೆರವಾದ ಅಲ್ಲು ಅರ್ಜುನ್; ಡಿಸಿಯಿಂದ ಧನ್ಯವಾದ
ಭಾರತ ತಂಡವು ಗುರುವಾರ ಅಡಿಲೇಡ್ ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದೆ. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವು ನ್ಯೂಜಿಲ್ಯಾಂಡ್ ವಿರುದ್ಧ ಸುಲಭ ಜಯ ಸಾಧಿಸಿತ್ತು.
Related Articles
ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ (ಭಾರತ)
ಸೂರ್ಯ ಕುಮಾರ್ ಯಾದವ್ (ಭಾರತ)
ಶದಾಬ್ ಖಾನ್ (ಪಾಕಿಸ್ಥಾನ)
ಶಹೀನ್ ಖಾನ್ ಅಫ್ರಿದಿ (ಪಾಕಿಸ್ಥಾನ)
ಸ್ಯಾಮ್ ಕರ್ರನ್ (ಇಂಗ್ಲೆಂಡ್)
ಜೋಸ್ ಬಟ್ಲರ್ (ಇಂಗ್ಲೆಂಡ್)
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)
ಸಿಕಂದರ್ ರಜಾ (ಜಿಂಬಾಬ್ವೆ)
ವಾನಿಂದು ಹಸರಂಗ (ಶ್ರೀಲಂಕಾ)