Advertisement
ಪಟ್ಟಣದ ಪುರಸಭೆ ವ್ಯಾಪ್ತಿಯ ಶ್ರೀನಿವಾಸಗುಡಿ ವೃತ್ತದಿಂದ ರೆಸ್ಟ್‌ಕ್ಯಾಂಪ್ ತಾಂಡಾ ವರೆಗಿನ ಮುಖ್ಯರಸ್ತೆ ಬದಿಯ ದೊಡ್ಡ ಚರಂಡಿ ಅಭಿವೃದ್ಧಿಗೆ ಅಂದಿನ ಚಿತ್ತಾಪುರ ಶಾಸಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಉಪ ಚುನಾವಣೆಯಲ್ಲಿ ಗೆದ್ದು 2010ರಲ್ಲಿ ಶಾಸಕರಾಗಿದ್ದ ಬಿಜೆಪಿಯ ವಾಲ್ಮೀಕಿ ನಾಯಕ ಅವಧಿಯಲ್ಲಿ ಆರು ಅಡಿ ಆಳದ, ನಾಲ್ಕು ಅಡಿ ಅಗಲದ ಸುಮಾರು ಐದು ನೂರು ಮೀಟರ್ ಉದ್ದದ ದೊಡ್ಡ ಚರಂಡಿ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಮೆಥೋಡಿಸ್ಟ್ ಚರ್ಚ್ ಮಾರ್ಗದಲ್ಲಿ ಅರವತ್ತು ಅಡಿ ಉದ್ದಷ್ಟು ಚರಂಡಿ ನಿರ್ಮಿಸಿದ ವರ್ಷದಲ್ಲೇ ಮುಗುಚಿ ಬಿದ್ದಿತ್ತು. ಜನರು ಎಷ್ಟೇ ಮನವಿ ಸಲ್ಲಿಸಿದರೂ ಪುರಸಭೆ ಅಧಿ ಕಾರಿಗಳು ಮೌನಕ್ಕೆ ಶರಣಾಗಿದ್ದರು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸ್ಥಳೀಯ ನಾಗರಿಕರ ಸಹನೆಗೆ ಇದು ನಿಚ್ಚಳ ಕನ್ನಡಿಯಾಗಿತ್ತು.
ಎಂದು ಹಿಂದಿನ ಕರವೇ ಅಧ್ಯಕ್ಷ ಸಿದ್ದು ಪಂಚಾಳ ಅವರು ಹತ್ತು ವರ್ಷಗಳ ಹಿಂದೆಯೇ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಅಭಿಯಂತರರು ಬಂದು ಚರಂಡಿ ಪರಿಶೀಲನೆ ನಡೆಸಿ ಹೋದರೇ ವಿನಃ ಯಾರ ವಿರುದ್ಧವೂ ಕ್ರಮಕೈಗೊಳ್ಳಲಿಲ್ಲ. ಎಸ್‌ಯುಸಿಐ ಪಕ್ಷದ ಮುಖಂಡರು ಸಲ್ಲಿಸಿದ ಮನವಿಗೆ ಮತ್ತು ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜಿರೊಳ್ಳಿ ಅವರು ನೀಡಿದ ರಸ್ತೆತಡೆ ಹೋರಾಟದ ಎಚ್ಚರಿಕೆಗೆ ಮಣಿದ ಪುರಸಭೆ ಆಡಳಿತವು 2010ರಲ್ಲಿ ಬಿದ್ದ ಚರಂಡಿಯನ್ನು 2021ರಲ್ಲಿ ದುರಸ್ತಿಗೆ ಮುಂದಾಗಿದೆ.