Advertisement
ಇದೊಂದು ಹಳೆಯ ಕಾಲದ ಕಥೆ. ಓದಿ, ಧ್ಯಾನಿಸಿ.
ವೃದ್ಧ ಮನೆಗೆ ಬಂದು ಮೂವರು ಮಕ್ಕಳನ್ನು ಕರೆದ. ಅವರ ಕೈಗೆ ತಲಾ ಒಂದು ಸಾವಿರ ಬೆಳ್ಳಿಯ ನಾಣ್ಯಗಳನ್ನು ಕೊಟ್ಟು ಮಾರುಕಟ್ಟೆಯಿಂದ ಭತ್ತ ತರಲು ಹೇಳಿದ. ಸಂಜೆಯ ಹೊತ್ತಿಗೆ ಹಲವು ಎತ್ತಿನ ಗಾಡಿಗಳಲ್ಲಿ ಮೂಟೆಗಟ್ಟಲೆ ಭತ್ತ ಬಂದು ಅಂಗಳದಲ್ಲಿ ಇಳಿದವು.
Related Articles
Advertisement
ಮಕ್ಕಳಲ್ಲಿ ಮೊದಲನೆಯವನು ತಾನು ಖರೀದಿಸಿ ತಂದಿದ್ದ ಮೂಟೆ ಗಟ್ಟಲೆ ಭತ್ತವನ್ನು ಎದುರಿಗೆ ಇರಿಸಿಕೊಂಡು ಆಲೋಚಿಸಿದ, “ಅಪ್ಪ ಬರುವವರೆಗೆ ಇದನ್ನು ಹೀಗೆಯೇ ಇರಿಸಿಕೊಂಡರೆ ಹಾಳಾ ದೀತು. ಹಾಗಾಗಿ ಸಂತೆಯಲ್ಲಿ ಮಾರಾಟ ಮಾಡಿ ಹಣ ಸಂಗ್ರಹಿಸಿ ಇಡುವುದು ಮೇಲು. ಅಪ್ಪ ಬಂದಾಗ ಹೊಸ ಭತ್ತ ಖರೀದಿಸಿ ದರಾಯಿತು…’ ಆತ ಹಾಗೆಯೇ ಮಾಡಿದ.
ಎರಡನೆಯವನು, “ಮಾರಾಟ ಮಾಡಿ ಹಣ ಇರಿಸಿಕೊಳ್ಳುವುದು ಸರಿಯಲ್ಲ. ಅದರ ಬದಲು ಭತ್ತವನ್ನು ದಾಸ್ತಾನು ಮಾಡಿ ಡುವುದು ಒಳ್ಳೆ ಯದು…’ ಎಂದುಕೊಂಡ. ಮನೆಯ ತಳ ಅಂತಸ್ತಿನಲ್ಲಿ ಒಂದು ಕಣಜ ನಿರ್ಮಿಸಿ ಅದರಲ್ಲಿ ಭತ್ತದ ಮೂಟೆಗಳನ್ನು ಇರಿಸಿ ಬೀಗ ಜಡಿದ.
ಮೂರನೆಯವನಿಗೆ ಇವೆರಡೂ ಸರಿ ಕಾಣಲಿಲ್ಲ. “ಅಪ್ಪ ಭತ್ತ ಖರೀದಿಸಿ ತರಲು ಹೇಳಿದ್ದರೇನೋ ನಿಜ. ಕಾಪಾಡಿಕೊಳ್ಳಲು ಹೇಳಿದ್ದರು ಎಂಬುದೂ ನಿಜ. ಆದರೆ ಕಾಯ್ದಿಟ್ಟರೆ ಹಾಳಾಗುತ್ತದೆ, ಹಣ ಸಂಗ್ರಹಿ ಸುವುದಾಗಿದ್ದರೆ ಅಪ್ಪ ಭತ್ತ ತರುವುದಕ್ಕೆ ಹೇಳುತ್ತಿರಲಿಲ್ಲ’ ಎಂದುಕೊಂಡ. ಹಾಗಾಗಿ ಕೆಲಸದವರನ್ನು ಕರೆಯಿಸಿ ಗದ್ದೆಗಳನ್ನು ಉತ್ತು ಹದ ಮಾಡಿಸಿದ. ಮಳೆ ಬರುತ್ತಲೇ ಭತ್ತ ಬಿತ್ತಿಸಿದ. ಒಳ್ಳೆಯ ಬೆಳೆ ಬಂತು. ಬಿತ್ತಿದ ಭತ್ತಕ್ಕಿಂತ ಎರಡು ಪಾಲು ಹೆಚ್ಚು ಸಿಕ್ಕಿತು. ಮರುವರ್ಷವೂ ಹಾಗೆಯೇ ಮಾಡಿದ. ಮೂರನೆಯ ವರ್ಷ ಕಳೆದು ಅಪ್ಪ ಬರುವಷ್ಟರಲ್ಲಿ ಮನೆಯ ಊಟಕ್ಕೆ ಬಳಕೆಯಾಗಿ, ಬಿತ್ತನೆಯಾಗಿ ಸಂತೆಯಲ್ಲಿ ಮಾರಲು ಬೇಕಾದಷ್ಟು ಭತ್ತ ಬೆಳೆದಿತ್ತು.
ವೃದ್ಧನ ಉತ್ತರಾಧಿಕಾರಿ ಸ್ಥಾನ ಮೂರನೆಯ ಮಗನಿಗೆ ಸಿಕ್ಕಿತು ಎಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ!ಜ್ಞಾನ ಕೂಡ ಬೀಜದಂತೆ. ಅದನ್ನು ಬಿತ್ತಿ ಬೆಳೆಸಿದರೆ ಸಂತತಿ ಸಾವಿರ ವಾಗುತ್ತದೆ. ವೇದ, ಉಪನಿಷತ್ತುಗಳೇ ಆದಿಯಾಗಿ ನಮ್ಮ ಪೂರ್ವಸೂರಿಗಳು ಅರ್ಜಿಸಿದ ಜ್ಞಾನರಾಶಿ ಹೀಗೆ ನಾವು ಬಿತ್ತಿ ಬೆಳೆಯುವುದಕ್ಕೆ ಇರುವಂಥದ್ದು.
(ಸಾರ ಸಂಗ್ರಹ)