Advertisement
ಮರವಂತೆ, ಗಂಗೊಳ್ಳಿ, ಮಂಗಳೂರು, ಮಲ್ಪೆ, ಭಟ್ಕಳ, ಹೊನ್ನಾವರ, ತದಡಿ, ಕಾರವಾರ ಸಹಿತ ಎಲ್ಲೆಡೆಯ ಕಡಲ ತೀರದ ಪ್ರದೇಶಗಳಲ್ಲಿ ಅಲೆಗಳ ಎತ್ತರ ಗರಿಷ್ಠ 1 ಅಡಿಯಿಂದ 2 ಅಡಿಯವರೆಗೆ ಇದ್ದುದು ಕಂಡು ಬಂದಿದೆ. ಗಾಳಿಯೂ ಹಗಲಿನಲ್ಲಿ ಗಂಟೆಗೆ ಗರಿಷ್ಠ 14ರಿಂದ 21 ಕಿ.ಮೀ. ವೇಗದಲ್ಲಿ ಬೀಸುತ್ತಿತ್ತು.
ಪ್ರವಾಸಿಗರನ್ನು ವಾಪಸು ಕಳುಹಿಸಿದ ಪೊಲೀಸರು
ಕಾಸರಗೋಡು: ಕೋಟಿಕುಳಂ ಗ್ರಾಮ ವ್ಯಾಪ್ತಿಯ ತ್ರಿಕ್ಕನ್ನಾಡು ಮತ್ತು ಬೇಕಲ ಪ್ರದೇಶದಲ್ಲಿ ಸಮುದ್ರದ ತೆರೆಗಳು ಒಂದೂವರೆ ಮೀಟರಿಗೂ ಹೆಚ್ಚು ಎತ್ತರಕ್ಕೆ ಅಪ್ಪಳಿಸಿದ್ದು, ಆತಂಕಕ್ಕೂ ಕಾರಣವಾಯಿತು. ಅಬ್ಬರದ ಅಲೆಯ ಹಿನ್ನೆಲೆಯಲ್ಲಿ ಕೇರಳ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸ ಲಾಗಿದ್ದು, ಜನರು ಜಾಗ್ರತೆ ಪಾಲಿಸಬೇಕೆಂದು ರಾಷ್ಟ್ರೀಯ ಸಮುದ್ರ ಸ್ಥಿತಿಗತಿ ಸಂಶೋಧನೆ ಅಧ್ಯಯನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಸಮುದ್ರ ಕಿನಾರೆಗೆ ಬರುತ್ತಿರುವ ಪ್ರವಾಸಿಗರನ್ನು ಅಬ್ಬರದ ಅಲೆಗೆ ಸಾಧ್ಯತೆಯಿದೆಯೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿ ವಾಪಸು ಕಳುಹಿಸುತ್ತಿದ್ದಾರೆ.