Advertisement

2018ರಲ್ಲಿ ಉತ್ತಮ ವೇತನ: ಶೇ.10-15ರಷ್ಟು ಹೆಚ್ಚಾಗಲಿದೆ ಸಂಬಳ

06:15 AM Dec 11, 2017 | Harsha Rao |

ನವದೆಹಲಿ: ಮುಂದಿನ ವರ್ಷ ಉತ್ತಮ ವೇತನ ಸಿಗಲಿ ಎಂದು ಬಯಸುವವರಿಗೆ ಸಂತಸ ತರಬಲ್ಲ ಮಾಹಿತಿ ಇದು. ಇನ್ನೇನು 20 ದಿನಗಳಲ್ಲಿ 2017ನೇ ವರ್ಷ ಮುಕ್ತಾಯ ವಾಗಲಿದೆ. 2018ರಲ್ಲಿ ಉತ್ತಮ ಪ್ರತಿಭೆ ಹೊಂದಿದವರಿಗೆ ಶೇ.10-15 ರಷ್ಟು ವೇತನ ಪರಿಷ್ಕರಣೆ ಯಾಗಲಿದೆ. ನೋಟು ಅಮಾನ್ಯ, ಕೆಲವು ಕಂಪನಿಗಳಲ್ಲಿ ಉದ್ಯೋಗ ಕಡಿತ ಮೊದಲಾದ ಬೆಳವಣಿಗೆಗಳಿಂದ ಕಂಗೆಟ್ಟ ನೇಮಕ ಕ್ಷೇತ್ರಕ್ಕೆ ಇದು ಚೇತೋಹಾರಿಯಾಗಿ ಪರಿಣಮಿಸಲಿದೆ. ಆದರೂ, ಕೆಲವೊಂದು ಹಂತಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಎಂದು ಕಂಡು ಬರುವಲ್ಲಿ ಉದ್ಯೋಗ ಕಡಿತ ನಡೆಯುವ ಸಾಧ್ಯತೆಯೂ ಇದೆ. 

Advertisement

ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯೊಂದು ಈ ಅಭಿಪ್ರಾಯವನ್ನು ಹೊರಹಾಕಿದೆ. ಅದರ ಪ್ರಕಾರ ಹಾಲಿ ವರ್ಷದ ಮೊದಲ ಮೂರು ತ್ತೈಮಾಸಿಕಗಳಲ್ಲಿ ನೇಮಕ ನಡೆಸಲು ಕಂಪನಿಗಳು ಹಿಂದೇಟು ಹಾಕಿದ್ದವು. ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಮತ್ತೆ ನೇಮಕ ನಡೆಸಿಕೊಳ್ಳುವತ್ತ ಆಸಕ್ತಿ ತೋರಿವೆ. ಜನವರಿಯಿಂದ ಮಾರ್ಚ್‌ ಅವಧಿಯಲ್ಲಿ ಶೇ.22, ಏಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.19, ಏಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.16ಕ್ಕೆ ಇಳಿಕೆ ಯಾಗಿದ್ದರೆ,  ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಶೇ.24ಕ್ಕೆ  ನೇಮಕ ಪ್ರಮಾಣ ಏರಿಕೆಯಾಗಿದೆ.  

2018ನೇ ಸಾಲಿನಲ್ಲಿ ನೇಮಕ ಪ್ರಕ್ರಿಯೆ, ಉದ್ಯೋಗ ನೀಡಿಕೆ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಜತೆಗೆ ವ್ಯಾಪಾರ ಮತ್ತು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಚೇತರಿಕೆ ಕಂಡು ಬರಲಿದೆ. ಚಿಲ್ಲರೆ, ಹಣಕಾಸು ಸೇವಾ ಕ್ಷೇತ್ರಗಳಲ್ಲಿಯೂ ಪ್ರೋತ್ಸಾಹದಾಯಕ ವಾತಾವರಣ ಇರಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದರ ಜತೆಗೆ ಹೊಸ ರೀತಿಯಲ್ಲಿ ಕೆಲಸ ಮಾಡುವಂಥ ಹೊಸ ಐಡಿಯಾಗಳು ಕೂಡ ಕಂಡು ಬರಲಿವೆ ಎಂದು ಅದರಲ್ಲಿ ಕಂಡುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next