ಕುಂದಾಪುರ: ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಅಪಾರವಾದದು. ಈ ನಿಟ್ಟಿನಲ್ಲಿ ಕುಂದಾಪುರ ಸಿಟಿ ಜೇಸಿಐ ಈ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳು ಉತ್ತಮ. ಪ್ರೇಕ್ಷಕರಲ್ಲಿ ಹೊಸ ಅಭಿರುಚಿಗೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ ಎಮದು ಕಲಾಕ್ಷೇತ್ರ ಕುಂದಾಪುರ ಇದರ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಅವರು ಶನಿವಾರ ಸಂಜೆ ಜೇಸಿಐ ಕುಂದಾಪುರ ಸಿಟಿ ಇವರ ಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಈ ಸಾಲಿನ ಜೇಸಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಸಿಟಿ ಜೇಸಿಐ ಅಧ್ಯಕ್ಷ ಶ್ರೀಧರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಉದ್ಯಮಿ ವಿನಯ ಕುಮಾರ್ ಕಬ್ಯಾಡಿ, ಜೇಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಾಧ್ಯಕ್ಷ ಕೆ.ಕಾರ್ತಿಕೇಯ ಮಧ್ಯಸ್ಥ, ಸಪ್ತಾಹದ ಸಭಾಪತಿ ಗಣೇಶ್ ನಾಯಕ್, ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಕಾಮತ್ , ಸಪ್ತಾಹದ ಕಾರ್ಯದರ್ಶಿ ನಾಗೇಶ ನಾವಡ, ಖಜಾಂಚಿ ಸಾಯಿನಾಥ ಶೇಟ್, ಅಭಿಲಾಷ್ ಬಿ.ಎ., ಜೇಸಿರೇಟ್ ಅಧ್ಯಕ್ಷೆ ಗೀತಾ ಜೆ.ಸುವರ್ಣ, ಗಿರೀಶ್ ಹೆಬ್ಟಾರ್, ಚಂದ್ರಕಾಂತ್ ಉಪಸ್ಥಿತರಿದ್ದರು.ಈ ಸಂದರ್ಭ ಖ್ಯಾತ ಸಾಕೊÕàಪೋನ್ ವಾದಕ ಮಂಜುನಾಥ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು.ರಾಘವೇಂದ್ರ ಚರಣ್ ನಾವಡ ಪರಿಚಯಿ, ಜೇಸಿಐ ಕಾರ್ಯದರ್ಶಿ ಪ್ರಶಾಂತ್ ಹವಾಲ್ದಾರ್ ವಂದಿಸಿದರು.