ಕಲಬುರಗಿ: ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ನೀಡಬೇಕಲ್ಲದೇ ಮಕ್ಕಳ ಸರ್ವಾಂಗೀಣ ಬೆಳವಣಿಗೆ, ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮುಖ್ಯವಾಗಿದೆ ಎಂದು ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಲಿಂ. ಪ್ರಭಾಕರ ಛಪ್ಪರಬಂದಿ ಸ್ಮರಣಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ವಿಕಾಸ ವೈಭವ-2022′ ಎನ್ನುವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಅಬಕಾರಿ ಇಲಾಖೆ ಅಧೀಕ್ಷಕ ಪ್ರಕಾಶ ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.
ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸಿದ್ರಾಮಪ್ಪ ಉಕಲಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಧೂಳಪ್ಪಾ ಹಾದಿಮನಿ, ಪರಮೇಶ್ವರ ಮುನ್ನೊಳ್ಳಿ, ಶ್ರೀಶೈಲ ಹೊದಲೂರ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ ಛಪ್ಪರಬಂದಿ, ಪ್ರಭುಲಿಂಗ ಮೂಲಗೆ, ರಾಜೇಂದ್ರ ಮಾಡಬೂಳ, ಕಲ್ಯಾಣಕುಮಾರ ಶೀಲವಂತ, ಪ್ರಮುಖರಾದ ಸುವರ್ಣಾ ಛಪ್ಪರಬಂದಿ, ಹಣಮಂತರಾಯ ಅಟ್ಟೂರ, ವಿಶ್ವನಾಥ ಪಾಟೀಲ ಗೌನಳ್ಳಿ, ಎಚ್.ಎಸ್.ಬರಗಾಲಿ, ವಿಶ್ವನಾಥ ತೊಟ್ನಳ್ಳಿ, ರವಿಕುಮಾರ ಬಿರಾಜದಾರ, ಶ್ವೇತಾ ಮುತ್ತಾ, ಜ್ಯೋತಿ ಡಿಗ್ಗಿ, ಸುಭದ್ರಾ ಜೇವರ್ಗಿ, ಮೀನಾಕ್ಷಿ ಲಾಲಿ, ಉಮಾದೇವಿ ಹಿರೇಮಠ, ಮೀನಾಕ್ಷಿ ಕುಂಬಾರ, ಪಂಕಜಾ ಬಬಲಾದಕರ್, ಬಬನ್ ರಾಠೊಡ, ಶ್ರೀಕಾಂತ ಬಿರಾದಾರ, ರಾಜೇಶ್ವರಿ ಪಾಟೀಲ, ಜಗದೇವಿ ಮಂಠಾಳೆ, ಲೀಲಾವತಿ ಮಠಪತಿ, ಶಿವಾನಂದ ಮಠಪತಿ, ಲಕ್ಷ್ಮೀದೇವಿ ಕೊಟ್ಟರ್ಕಿ, ರೇಷ್ಮಾ ಪಾಟೀಲ, ಅನುರಾಧಾ ಗಂಗಾಣಿ ಭಾಗವಹಿಸಿದ್ದರು.