Advertisement

ಮನಸ್ಸಿನ ಭಾವನೆಗೂ ಸ್ಪಂದಿಸಲಿದೆ ರೊಬೋಟ್‌

11:15 PM Nov 23, 2023 | Team Udayavani |

ಬೆಂಗಳೂರು: ರೊಬೋಟ್‌, ಚಾಟ್‌ಬಾಕ್ಸ್‌ಗಳು ನಮ್ಮ ಮನಸ್ಸಿನ ಭಾವನೆಗಳನ್ನು ಅರಿತು ಸ್ಪಂದಿಸುವ ದಿನ ದೂರವಿಲ್ಲ!

Advertisement

ಯಂತ್ರಗಳಿಗೆ ಮಾನವ ಪ್ರಜ್ಞೆಯನ್ನು ತುಂಬುವ ಮೊದಲ ಹೆಜ್ಜೆಯಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ವಿಜ್ಞಾನಿಗಳು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರೊಬೋಟ್‌ಗಳು ಮನುಷ್ಯನಿಗೆ ಸಹಾಯಕನಾಗಿ ಕೆಲಸ ಮಾಡುವುದರ ಜತೆಗೆ ಸ್ನೇಹಿತನಾಗಿಯೂ ಸ್ಪಂದಿಸುವ ಸಾಧ್ಯತೆ ಇದೆ.

ರೊಬೋಟ್‌, ಮೆಷಿನ್‌ ಲರ್ನಿಂಗ್‌(ಎಂಎಲ್‌)ನಲ್ಲಿ ತರಬೇತಿ ನೀಡಿರುವ ಹಾಗೂ ಸಿದ್ಧಪಡಿಸಲಾಗಿರುವ ದತ್ತಾಂಶಗಳನ್ನು ಆಧರಿಸಿ ಯಂತ್ರ ಕಾರ್ಯನಿರ್ವಹಿಸುತ್ತದೆ. ನಾವು ಕೇಳಿದ ಪ್ರಶ್ನೆ, ಮಾಹಿತಿಗೆ ಅನುಗುಣವಾಗಿ ಅದು ತನ್ನ ಸಂಗ್ರಹದ ಅಥವಾ ಸಂಪರ್ಕದ ಜಾಲದಿಂದ ಮಾಹಿತಿಯನ್ನು ಹೆಕ್ಕಿ ನೀಡುವುದು, ಸ್ಪಂದಿಸುವುದು ಮುಂತಾದವನ್ನು ಮಾಡುತ್ತದೆ. ಈ ಸಂದರ್ಭದಲ್ಲಿ ಮಾಹಿತಿ ಕೇಳಿದಾತನ ಮನಸ್ಥಿತಿ, ಪರಿಸ್ಥಿತಿ, ವಯಸ್ಸು ಮುಂತಾದವನ್ನು ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ರೊಬೋಟ್‌, ಕೃತಕ ಬುದ್ಧಿಮತ್ತೆ (ಎಐ), ಎಂಎಲ್‌ ತಂತ್ರಾಂಶಗಳ ಪೂರ್ವಗ್ರಹಿಕೆ, ಸೀಮಿತತೆ ಬಗ್ಗೆ ವೈಜ್ಞಾನಿಕ ಮತ್ತು ಉದ್ದಿಮೆ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದೆ.

ಈ ಹಿನ್ನೆಲೆಯಲ್ಲಿ ಐಐಐಟಿ ಪ್ರೊಫೆಸರ್‌ ಶ್ರೀಶ ರಾವ್‌ ನೇತೃತ್ವದಲ್ಲಿ ಪದವಿ ವಿದ್ಯಾರ್ಥಿಗಳಾದ ಅರ್ಪಿತಾ ಮಳವಳ್ಳಿ ಮತ್ತು ಸೋನಂ ಜೋಷಿ ಅವರು ಮನುಷ್ಯನ ಸಂತೋಷ, ದುಃಖ, ಬೇಸರ, ನಿರ್ಲಿಪ್ತತೆ ಮುಂತಾದ ಭಾವನೆಗಳನ್ನು ಆತನ ಕಣ್ಣು, ಮುಖ ಮತ್ತು ಅಂಗಿಕ ಭಾಷೆಗಳಿಂದ ಅರಿತು ಸ್ಪಂದಿಸುವ ಪ್ರಣಾಳಿ(ಒಂದು ಮಾದರಿಯ ತಂತ್ರಾಂಶ)ಯನ್ನು ಅಭಿವೃದ್ಧಿಪಡಿಸಿದ್ದಾರೆ.

ನಿಖರ ಮಾದರಿ
ತಲೆಯ ಚಲನೆ, ಕೈಸನ್ನೆ, ಕಣ್ಣಿನ ಚಲನೆ, ಶಾರೀರಿಕ ಲಕ್ಷಣಗಳನ್ನು ಗುರುತಿಸಿ ವ್ಯಕ್ತಿತ್ವವನ್ನು ಅಳೆಯುವ ಪ್ರಮುಖ ಐದು ವ್ಯಕ್ತಿತ್ವದ ಗುಣ ಲಕ್ಷಣಗಳನ್ನು ಪ್ರಯೋಗ ಹಂತದಲ್ಲಿ ಪರಿಗಣಿಸಿದ್ದೇವೆ. ಬಹಿರ್ಮುಖತೆ, ಸಮ್ಮತಿ, ಮುಕ್ತತೆ, ಪ್ರಜ್ಞಾವಂತಿಕೆ ಮತ್ತು ನರ ಸಮಸ್ಯೆ ಈ ಐದು ಅಂಶಗಳ ನೆಲೆಯಲ್ಲಿ ವ್ಯಕ್ತಿತ್ವ ಅಳೆಯುವ ಹೆಚ್ಚು ನಿಖರವಾದ ಮಾದರಿಯನ್ನು ಅನುಸರಿಸಿದ್ದೇವೆ. 45 ನಿಮಿಷಗಳ 18 ಸೆಷನ್‌ಗಳ ಪ್ರತಿ ಫ್ರೆàಮ್‌ನ ಮಾಹಿತಿ ಸಂಗ್ರಹಿಸಿ ನಾವು ಈ ಮಾದರಿ ರೂಪಿಸಿದ್ದೇವೆ ಎಂದು ಅರ್ಪಿತಾ ಮಳವಳ್ಳಿ ಹೇಳುತ್ತಾರೆ.

Advertisement

ತನ್ನ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬನ ವ್ಯಕ್ತಿತ್ವವನ್ನು ಆತನ ಕಣ್ಣು ಮತ್ತು ಮನಶಾಸ್ತ್ರೀಯ ಮಾದರಿಗಳ ಮೂಲಕ ಅಳೆದು ಅದಕ್ಕೆ ತಕ್ಕಂತೆ ಸ್ಪಂದಿಸುವ ಸಾಮರ್ಥ್ಯವನ್ನು ನಾವು ಅಭಿವೃದ್ಧಿಪಡಿಸಿರುವ “ಪ್ರಣಾಳಿ’ ಹೊಂದಿದೆ. ಮೊದಲ ಬಾರಿಗೆ ಇಂತಹ ಪ್ರಯತ್ನ ಯಶಸ್ವಿಯಾಗಿದೆ.
– ಶ್ರೀಶ ರಾವ್‌, ಐಐಐಟಿ ಪ್ರೊಫೆಸರ್‌, ಸಂಶೋಧನ ಮಾರ್ಗದರ್ಶಕ

ಉಪಯೋಗವೇನು?
 ವಿಶೇಷ ಚೇತನರ ಉಪಕರಣಗಳಲ್ಲಿ ಬಳಕೆಗೆ ಹೆಚ್ಚು ಸೂಕ್ತ
 ಮಕ್ಕಳ ಕಲಿಕಾ ಸಲಕರಣೆಗಳಲ್ಲಿ ಅಳವಡಿಸಿದರೆ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲು
 ಆನ್‌ಲೈನ್‌ ವೇದಿಕೆಗಳಲ್ಲಿ ಶಾಪಿಂಗ್‌ನ ಸಂದರ್ಭದಲ್ಲಿ ಮಾಹಿತಿ ವಿನಿಮಯಕ್ಕೆ
 ಎಟಿಎಂ, ಸೇಫ್ಟಿ ಐ ಲ್ಯಾಂಡ್‌ ಮುಂತಾದ ಮಾನವ – ತಂತ್ರಜ್ಞಾನದ ಸಂಪರ್ಕದ ಸ್ಥಳಗಳಲ್ಲಿ
 ಮಾನವ ಮತ್ತು ರೊಬೋಟ್‌ ಒಟ್ಟಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಮಾನವನ ಸುರಕ್ಷೆಗೆ ಬಳಕೆ

ತೊಂದರೆಗಳೇನು?
ಖಾಸಗಿ ಮಾಹಿತಿ ಸಂಗ್ರಹಿಸುವ ಸಾಧ್ಯತೆ
 ಸುರಕ್ಷೆಯ ಸಮಸ್ಯೆ
 ನಿರುದ್ಯೋಗ ಹೆಚ್ಚಳ
 ಮಾನವನ ವ್ಯಕ್ತಿತ್ವ ಸಂಕೀರ್ಣವಾಗಿರುವ ಹಿನ್ನೆಲೆಯಲ್ಲಿ ಫ‌ಲಿತಾಂಶದ ನಿಖರತೆ ಯನ್ನು ಅರಿಯುವುದು ಕಷ್ಟ

 ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next