Advertisement
ಆದರೆ, ಅದಕ್ಕಿಂತ ಬಹಳ ಮುಂಚೆಯೇ ಬಿಡುಗಡೆಯಾಗಲಿದೆ. ಯಾವ ಚಿತ್ರಮಂದಿರದಲ್ಲಿ ಎಷ್ಟು ಹೊತ್ತಿಗೆ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಲಿಸ್ಟ್ ಒಂದು ಬಿಡುಗಡೆಯಾಗಿದೆಯಾದರೂ, ನಾಳೆ ಬೆಳಿಗ್ಗೆ ಹೊತ್ತಿಗೆ ಇನ್ನಷ್ಟು ಬದಲಾವಣೆ ಮತ್ತು ಬೆಳವಣಿಗೆಗಳಾಗುವ ಸಾಧ್ಯತೆಗಳಿವೆ. ಇನ್ನು ಸುದೀಪ್ ಅಭಿಮಾನಿಗಳೊಂದಿಷ್ಟು ಜನ ಸೇರಿಕೊಂಡು, ಚಿತ್ರದ ಕುರಿತಾದ ಮೊಬೈಲ್ ಗೇಮ್ ಶುರು ಮಾಡಿದ್ದಾರೆ. ಈಗಾಗಲೇ ಈ ಗೇಮ್ ಬಿಡುಗಡೆಯಾಗಿದ್ದಾಗಿದೆ. ಈ ಎರಡೂ ವಿಷಯಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ …
“ಹೆಬ್ಬುಲಿ’ ಚಿತ್ರವು ಬಿಡುಗಡೆಯ ವಿಷಯದಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಬರೆಯಲಿದೆ. ಇದುವರೆಗೂ ಯಾವ ಚಿತ್ರವೂ ಅಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲ. ಆದರೆ, “ಹೆಬ್ಬುಲಿ’ ರಾಜ್ಯಾದ್ಯಂತ ಬರೋಬ್ಬರಿ 425 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ತಮಿಳಿನ ಚಿತ್ರವೊಂದರ ಬಿಡುಗಡೆ ಮುಂದಕ್ಕೆ ಹೋಗಿರುವುದರಿಂದ, ಇನ್ನೂ 10 ಚಿತ್ರಮಂದಿರಗಳು ಹೆಚ್ಚು ಸಿಗುವ ಸಾಧ್ಯತೆ ಇದೆ. ಅಲ್ಲಿಗೆ ಚಿತ್ರವು 435 ಪ್ಲಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಲಿದೆ. ಒಂದು ವಿಶೇಷವೆಂದರೆ, ಸುಮಾರು 60 ಊರುಗಳಲ್ಲಿ ಎರಡೆರೆಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಬಿಡುಗಡೆಯಾಗುತ್ತಿರುವುದು. ಮಂಡ್ಯ, ಮೈಸೂರು, ಕೊಳ್ಳೇಗಾಲ ಮುಂತಾದ ಕಡೆ ಎರಡೆರೆಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆಯಂತೆ.
Related Articles
Advertisement
ಇನ್ನು ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಹಲವು ನಗರಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಚಿತ್ರ ಶುರುವಾಗಲಿದೆ. ಗೌಡನಪಾಳ್ಯ ಶ್ರೀನಿವಾಸ ಎಂಬ ಚಿತ್ರಮಂದಿರದಲ್ಲಿ ಸುದೀಪ್ ಅಭಿಮಾನಿಯೊಬ್ಬರು ಬೆಳಿಗ್ಗೆ ಆರು ಗಂಟೆಯ ಪ್ರದರ್ಶನಕ್ಕೆ 650 ಟಿಕೆಟುಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬುಕ್‌ಮೈಶೋನಲ್ಲಿ ಗುರುವಾರದ ಹಲವು ಪ್ರದರ್ಶನಗಳು ಬುಕ್ ಆಗಿವೆ.