Advertisement

ತುಂತುರು ಮಳೆಯಲ್ಲೇ ಕೊಡೆ ಹಿಡಿದು ರೋಡ್‌ ಶೋ

02:31 PM May 11, 2018 | Team Udayavani |

ನಂಜನಗೂಡು: ಚುನಾವಣೆಯ ಬಹಿರಂಗ ಮತಯಾಚನೆಯ ಅಂತಿಮ ದಿನಾವಾದ ಗುರುವಾರ ನಂಜನಗೂಡು ಪಟ್ಟಣದಲ್ಲಿ  ತುಂತುರು ಮಳೆಯಲ್ಲೂ ಕೊಡೆ ಹಿಡಿದು ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಭರ್ಜರಿ ರೋಡ್‌ ಶೋ ನಡೆಸಿದ ಮತಯಾಚನೆ ಮಾಡಿದರು. 

Advertisement

ಇಲ್ಲಿನ ಎಂಜಿಎಸ್‌  ರಸ್ತೆಯಲ್ಲಿರುವ ಪ್ರಚಾರ ಕಾರ್ಯಲಯದಿಂದ ತೆರೆದ ವಾಹನದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಭಾರೀ ಮೆರವಣಿಗೆಯೊಂದಿಗೆ ತೆರಳಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಹಿರಂಗ ಮತಯಾಚನೆಗೆ ತೆರೆ ಎಳೆದರು. ತುಂತುರು ಮಳೆಯಲ್ಲೇ ಮೆರವಣಿಗೆ ಪೂರ್ಣಗೊಳಿಸಿದ ಸಂಸದರು ಹಾಗೂ ಶಾಸಕರು ಬಳಿಕ ಪ್ರಚಾರ ಕಾರ್ಯಾಲಯದಲ್ಲಿ ಸಭೆ ನಡೆಸಿದರು.

ಅಭಿವೃದ್ಧಿಗೆ ಮತ ಹಾಕಿ: ಸಂಸದ ಧ್ರುವನಾರಾಯಣ ಮಾತನಾಡಿ, ಕ್ಷೇತ್ರದಲ್ಲಿ ಸಹಸ್ರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ಶಾಸಕರಿಗೆ ಫ‌ಲಾನುಭವಿಗಳೇ ಈ ಬಾರಿ ಸ್ವಯಂಪ್ರೇರಿತರಾಗಿ ಮತ ನೀಡಿ ಮತ್ತೂಮ್ಮೆ ಶಾಸಕರಾಗುವ ಅವಕಾಶ ಕಲ್ಪಿಸಬೇಕು. ಕಳೆಲೆ 11 ತಿಂಗಳಲ್ಲಿ ಮೂರು ಬಾರಿ ಪ್ರತಿ ಮತದಾರರ ಮನೆಗಳಿಗೂ ಭೇಟಿ ನೀಡಿ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ಮತ್ತೂಮ್ಮೆ ಅವರಿಗೆ ಪೂರ್ಣಾವಧಿ ಶಾಸಕರಾಗಿ ಅವಕಾಶ ಕಲ್ಪಿಸಿದರೆ, ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯ ಜನತೆಗೆ ಅನುಕೂಲಗಳನ್ನು ಕಲ್ಪಿಸಿದ್ದು ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. 

ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, 11 ತಿಂಗಳ ಅಲ್ಪಾವಧಿಯ ಅಧಿಕಾರದಲ್ಲಿ ಕ್ಷೇತ್ರದ ಜನತೆಯ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಜನಸೇವೆ ಮಾಡಿದ್ದೇನೆ. ಮತ್ತೂಮ್ಮೆ ಪೂರ್ಣಾವಧಿ ಅಧಿಕಾರ ಕಲ್ಪಿಸಿದರೆ ನಂಜನಗೂಡು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ. ಜನತೆ ಈ ಅಲ್ಪ ದಿನಗಳಲ್ಲಿಯೇ ತಾನು ಮಾಡಿರುವ ಅಭಿವೃದ್ಧಿಯನ್ನು ಮನಗಂಡು ಮತ್ತೂಮ್ಮೆ ತನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

Advertisement

ಈ ವೇಳೆ ಕ್ಷೇತ್ರ ಉಸ್ತುವಾರಿಗಳಾದ ಶ್ರೀಕಂಠ, ಕಾವೇರಪ್ಪ, ನಗರಸಭಾಧ್ಯಕ್ಷೆ ಪುಷ್ಪಲತಾ, ಉರ್ಪಾಧ್ಯಕ್ಷ ಪ್ರದೀಪ, ಸದಸ್ಯರಾದ ಮಂಜುನಾಥ, ದೊಡ್ಡಮಾದಯ್ಯ, ರಾಮಕೃಷ್ಣ, ರಾಜೇಶ್‌, ಚೆಲುವರಾಜು ,ರಾಜು, ಚಂದ್ರು ಮೀನಾಕ್ಷಿ ಇತರರು ಉಪಸ್ಥತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next