Advertisement
ಬಾದಾಮಿ ನಾಕಾದಲ್ಲಿನ ರಸ್ತೆಯ ತಿರುವು ಇರುವುದರಿಂದ ಬಸ್ ನಿಲ್ದಾಣದ ಕಡೆಯಿಂದ ಬರುವ ವಾಹನ ಸವಾರರು ರಸ್ತೆ ಖಾಲಿ ಇದೆ ಎಂದು ವೇಗವಾಗಿ ಬರುತ್ತಾರೆ. ಇಲ್ಲಿ ತಿರುವು ಇರುವುದನ್ನು ದೀಢಿರ್‌ನೆ ನೋಡಿ, ವಾಹನ ವೇಗ ಕಡಿಮೆ ಮಾಡಲು ಹೋಗಿ ಡಿವೈಡರ್‌ಗೆ ಟಚ್ ಆಗಿ ಇಲ್ಲವೇ ಸ್ಕೀಡ್ ಆಗಿ ಬೀಳುತ್ತಾರೆ. ಇನ್ನೂ ಕೆಲವರು ರಸ್ತೆಯ ಮೇಲೆ ಸಂಚರಿಸುವವರಿಗೆ ಹಾಯಿಸಿದ ಘಟನೆಗಳು ಹಲವು ಬಾರಿ ನಡೆದಿವೆ.
Related Articles
Advertisement
ಅತಿ ವೇಗವಾಗಿ ವಾಹನ ಚಲಾಯಿಸುವವರ ಮೇಲೆ ಕಡಿವಾಣ ಹಾಕಬೇಕಿದೆ. ಅಲ್ಲದೇ 18 ವಯಸ್ಸು ಆಗದೇ ಇರುವ ಯುವಕರು ಸಹ ವಾಹನ ಚಲಾಯಿಸುತ್ತಾರೆ. ಅವರಿಗೂ ಎಚ್ಚರಿಸುವ ಕೆಲಸವಾಗಬೇಕಿದೆ.
ರೋಡ್‌ಬ್ರೇಕರ್‌ಗೆ ಆಗ್ರಹ: ಈ ಬಾದಾಮಿ ನಾಕಾ ಹತ್ತಿರದ ರಸ್ತೆ ತಿರುವು ಇರುವುದರಿಂದ ವೇಗ ವಾಗಿ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ರೋಡ್‌ಬ್ರೇಕರ್‌ನ ಅವಶ್ಯಕತೆಯಿದ್ದು, ಲೋಕೋಪ ಯೋಗಿ ಇಲಾಖೆ ಅಧಿ ಕಾರಿಗಳು ಇಲ್ಲಿ ರೋಡ್ ಬ್ರೇಕರ್ ಅಳವಡಿಸಬೇಕು. ಇದರಿಂದ ಮುಂದೆ ಉಂಟಾಗುವ ಅನಾಹುತ ತಪ್ಪಿಸಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಆಗ್ರಹ.
ಪಟ್ಟಣದಲ್ಲಿ ನೂರಾರು ವಾಹನಗಳ ಸಂಚಾರವಿ ದ್ದರೂ ಅವುಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ನಿರ್ಲಕ್ಷ ವಹಿಸಿದೆ. ಅಡ್ಡಾ ದಿಡ್ಡಿ ಓಡಾಟ ಮಾಡುವ ಯುವಕರಿಗೆ ಕಡಿವಾಣ ಹಾಕುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಣ್ಣು ಕಾಣದಂತೆ ಇದ್ದಾರೆ. ಟ್ರಾಫಿಕ್ ಪೊಲೀಸ್ ಕಾವಲು ಹಾಕಲು ನಾಗರಿಕರು ಒತ್ತಾಯಿಸಿದ್ದಾರೆ.
ಕೋಟೆಕಲ್, ತಹಶೀಲ್ದಾರ್ ಕಚೇರಿ, ಬಾದಾಮಿ ನಾಕಾ, ತೋಗುಣಸಿ ಕ್ರಾಸ್ ಬಳಿ ಹಂಪ್ ಹಾಕುವ ಉದ್ದೇಶವಿದೆ. ಸುಮಾರು 10 ಕಡೆ ಡಾಂಬರ್ ಹಂಪ್ ಹಾಕಬೇಕು. ಸದ್ಯ ಡಾಂಬರ ಪ್ಲಾಂಟ್ ಬಂದಾಗಿವೆ. ಅವು ಪ್ರಾರಂಭವಾದ ಕೂಡಲೇ ಅಳವಡಿಸಲಾಗುವುದು.
ಅಸ್ಲಾಮ ಮಕಾಂದರ,ಅಭಿಯಂತರರು ಗುಳೆದಗುಡ್ಡ