Advertisement

ರಿಜ್ವಾನ್‌ ಕೈ ಹಿಡಿದ ಮುಸ್ಲಿಂ ಸಮುದಾಯ

10:35 PM Dec 09, 2019 | Lakshmi GovindaRaj |

ಬೆಂಗಳೂರು: ಎಲ್ಲ ನಾಯಕರ ವಿರೋಧದ ನಡುವೆಯೂ ಹಠ ಹಿಡಿದು ಟಿಕೆಟ್‌ ಪಡೆದು ಕೊನೆಗೂ ಗೆಲುವಿನ ದಡ ಸೇರುವಲ್ಲಿ ರಿಜ್ವಾನ್‌ ಅರ್ಷದ್‌ ಯಶಸ್ವಿಯಾಗಿದ್ದಾರೆ.  ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಹಾಗೂ ಹಾಲಿ ವಿಧಾನ ಪರಿ ಷತ್‌ ಸದಸ್ಯರಾಗಿದ್ದರಿಂದ ಯಾವುದೇ ಕಾರಣಕ್ಕೂ ರಿಜ್ವಾನ್‌ ಅರ್ಷದ್‌ಗೆ ಟಿಕೆಟ್‌ ನೀಡಬಾರದು ಎಂದು ಹಿರಿಯ ನಾಯಕರಾದ ಬಿ.ಕೆ.ಹರಿ ಪ್ರಸಾದ್‌ ಹಾಗೂ ಕೆ.ಎಚ್‌. ಮುನಿಯಪ್ಪ ಇತರರ ವಿರೋಧ ವ್ಯಕ್ತಪಡಿಸಿದರೂ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಿಜ್ವಾನ್‌ಗೆ ಟಿಕೆಟ್‌ ಕೊಡಿ ಸುವಲ್ಲಿ ಯಶಸ್ವಿಯಾದರು.

Advertisement

ಮಾಜಿ ಸಚಿವ ಜಮೀರ್‌ ಅಹಮದ್‌ ಸಹಕಾರ: ರಿಜ್ವಾನ್‌ ಅರ್ಷದ್‌ ನಾಯಕರ ನಡುವಿನ ಹೋರಾಟದಲ್ಲಿ ಟಿಕೆಟ್‌ ಪಡೆದು ಯಶಸ್ವಿಯಾಗಿದರೂ, ಆರಂಭದಲ್ಲಿ ಪಕ್ಷದ ಹಿರಿಯ ನಾಯಕರ ಅಸಹಕಾರದಿಂದ ಬೇಸತ್ತು ಕೊಂಡಿದ್ದ ರಿಜ್ವಾನ್‌ ಅರ್ಷದ್‌ ಒಂದು ಹಂತದಲ್ಲಿ ಪ್ರಚಾರದ ಸಂದರ್ಭದಲ್ಲಿಯೇ ಹತಾಶರಾಗಿದ್ದರು. ಕ್ಷೇತ್ರದಲ್ಲಿನ ಪರಿಸ್ಥಿತಿಯಿಂದ ಸ್ವತಃ ಮುಸ್ಲಿಂ ನಾಯಕರಾದ ಯು.ಟಿ.ಖಾದರ್‌ ಕೂಡ ಶಿವಾಜಿನಗರ ಕ್ಷೇತ್ರದ ಚುನಾವಣಾ ಉಸ್ತುವಾರಿ ಬದಲಾಯಿಸಿಕೊಂಡರೂ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗ ಮಾಜಿ ಸಚಿವ ಜಮೀರ್‌ ಅಹಮದ್‌ ಮುಸ್ಲಿಂ ನಾಯಕರನ್ನು ಒಟ್ಟುಗೂಡಿ ಸಿದ್ದು ರಿಜ್ವಾನ್‌ ಗೆಲುವಿಗೆ ಪೂರಕವಾಯಿತು.

ಮತ ಪಡೆಯುವಲ್ಲಿ ಬಿಜೆಪಿ ವಿಫ‌ಲ: ಶಿವಾಜಿ ನಗರದಲ್ಲಿ ಅಲ್ಪ ಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಾರಿ ರಿಜ್ವಾನ್‌ ಅರ್ಷದ್‌ ಅವರನ್ನು ಸಂಪೂರ್ಣವಾಗಿ ಸಮು ದಾಯ ಬೆಂಬಲಿಸಿದ್ದು, ಅವರ ಗೆಲುವಿನ ದಾರಿ ಯನ್ನು ಸುಗಮಗೊಳಿಸಿತು. ಅದಕ್ಕೆ ಪರ್ಯಾ ಯವಾಗಿ ಬಿಜೆಪಿಗೆ ಹಿಂದೂ ಮತಗಳನ್ನು ಒಗ್ಗೂಡಿಸುವಲ್ಲಿ ವಿಫ‌ಲವಾಯಿತು.

ಲಕ್ಷಕ್ಕೂ ಕಡಿಮೆ ಮತದಾನ: ಕ್ಷೇತ್ರದಲ್ಲಿ ಲಕ್ಷಕ್ಕೂ ಕಡಿಮೆ ಮತದಾನವಾಗಿದ್ದು ಜೆಡಿಎಸ್‌ ಹಾಗೂ ಎಸ್‌ಡಿಪಿಐ ಪಕ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರೂ, ಮುಸ್ಲಿಂ ಮತಗಳು ವಿಭಜನೆ ಯಾಗದೇ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಪರ ವಾಗಿ ಚಲಾವಣೆಯಾಗಿದ್ದು, ಅವರಿಗೆ ವರವಾಗಿ ಪರಿಣಮಿಸಿದೆ. ಹೀಗಾಗಿ ಕಾಂಗ್ರೆಸ್‌ ನಾಯಕರ ಅಸಹಕಾರದ ನಡುವೆಯೂ ಬಿಜೆಪಿ ಅಭ್ಯರ್ಥಿಯ ಬಗ್ಗೆ ಮತದಾರರಿಗೆ ಇರುವ ಸಿಟ್ಟು ರಿಜ್ವಾನ್‌ ಅರ್ಷದ್‌ ಗೆಲ್ಲುವಂತೆ ಮಾಡಿದೆ.

ಗೆದ್ದವರು
ರಿಜ್ವಾನ್‌ ಅರ್ಷದ್‌(ಕಾಂಗ್ರೆಸ್‌)
ಪಡೆದ ಮತ: 49,890
ಗೆಲುವಿನ ಅಂತರ‌: 13521

Advertisement

ಸೋತವರು
ಸರವಣ (ಬಿಜೆಪಿ)
ಪಡೆದ ಮತ: 36,369

ತನ್ವೀರ್‌ ಅಹ್ಮದ್‌ (ಜೆಡಿಎಸ್‌)
ಪಡೆದ ಮತ: 1,098

ಗೆದ್ದದ್ದು ಹೇಗೆ?
-ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ಮುಸ್ಲಿಂ ಸಮುದಾಯ ಸಂಪೂರ್ಣ ಬೆಂಬಲ

-ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರೂ, ಮುಸ್ಲಿಂ ಮತಗಳು ವಿಭಜನೆಯಾಗದ್ದದ್ದು

-ತಮಿಳು ಭಾಷಿಕರಾದ ಬಿಜೆಪಿ ಅಭ್ಯರ್ಥಿ ಶರವಣ ಬಗ್ಗೆ ಮತದಾರರಿಗೆ ಇರುವ ಆಕ್ರೋಶ

ಸೋತದ್ದು ಹೇಗೆ?
-ಬಿಜೆಪಿ ಅಭ್ಯರ್ಥಿ ಸರವಣ ಬಗ್ಗೆ ಕ್ಷೇತ್ರದ ಮತದಾರರ ಅನಾದರ

-ಬಿಜೆಪಿ ನಾಯಕರ ನಡುವಿನ ಭಿನ್ನಾಭಿಪ್ರಾಯ ಮತ ಪಡೆದಿರುವುದು

-ಕ್ಷೇತ್ರದಲ್ಲಿ ಹಿಂದೂ ಮತಗಳನ್ನು ಕ್ರೋಢಿಕರಿಸುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫ‌ಲ

ವಿಧಾನಸಭೆಯ ಈ ಉಪ ಚುನಾವಣೆ ಶಿವಾಜಿನಗರ ಕ್ಷೇತ್ರದ ಮಟ್ಟಿಗೆ ವಿಶೇಷ ವಾಗಿತ್ತು. ಒಂದೆಡೆ ಸಿಎಂ ಬಿಎಸ್‌ವೈ ನೇತೃ ತ್ವದ ಬಿಜೆಪಿ ಸರ್ಕಾರದ ಬಲ, ಮತ್ತೂಂದೆಡೆ ಜನ ಬಲ. ಚುನಾವಣೆ ಇವೆರಡರ ನಡುವಿನ ಸಂಘರ್ಷವಾಗಿತ್ತು. ಕ್ಷೇತ್ರದ ಜನ ಯುವ ನಾಯಕನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಬೆಂಬ ಲಿಸಿದ್ದಾರೆ. ಗೆಲುವು ನೀಡಿದ್ದಾರೆ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ.
-ರಿಜ್ವಾನ್‌ ಅರ್ಷದ್‌, ಕಾಂಗ್ರೆಸ್‌ ವಿಜೇತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next