Advertisement
ಇಲ್ಲೊಂದು ಕಥೆ.ಒಂದೂರಿನಲ್ಲಿ ಒಬ್ಬ ಪಂಡಿತರಿದ್ದರು. ಅವರ ಊರಿನ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ಒಂದು ದಿನ ನದಿಯಲ್ಲಿ ಸ್ನಾನ ಮುಗಿಸಿ ಏಳುವಾಗ ಈ ನದಿಯ ಗುಂಟ ಸಮುದ್ರದ ವರೆಗೆ ಒಮ್ಮೆ ಹೋಗಿ ಬಂದರೆ ಹೇಗೆ ಎಂಬ ಆಲೋಚನೆ ಅವರ ತಲೆಯಲ್ಲಿ ಮೊಳೆಯಿತು. ನದಿ ಯುದ್ದಕ್ಕೂ ಸಮುದ್ರ ಸೇರುವಲ್ಲಿಯ ವರೆಗೆ ಸಾಗುವುದು ಹೊಸ ಸಾಹಸ ವಾದೀತಲ್ಲ ಎಂಬುದು ಅವರ ಚಿಂತನೆ.
Related Articles
Advertisement
ಕೊನೆಗೆ ಲಭ್ಯವಿದ್ದ ಎಲ್ಲ ಮಾಹಿತಿ ಒಟ್ಟು ಗೂಡಿಸಿ ಪಂಡಿತರು ತಮ್ಮದೇ ಆದ ಒಂದು ಭೂಪಟ ತಯಾರಿಸಿದರು. ಅದನ್ನು ಹಿಡಿದು ಕೊಂಡು ಒಂದು ದೋಣಿಯೇರಿ ಯಾನ ಆರಂಭಿಸಿದರು.
ಯಾನದಲ್ಲಿ ಮತ್ತೆ ತೊಂದರೆಗಳು! ಐದು ಮೈಲು ದೂರ ಹೋಗಬೇಕಾದರೆ ನದಿ ಎಡಕ್ಕೆ ತಿರುಗಿತು. ಆದರೆ ಭೂಪಟದ ಪ್ರಕಾರ ಅದು ಬಲಕ್ಕೆ ತಿರುಗಬೇಕಿತ್ತು. ಇಪ್ಪತ್ತು ಮೈಲು ದೂರದಲ್ಲಿ ಒಂದು ಜಲಪಾತ ಸಿಕ್ಕಿತು. ಭೂಪಟದಲ್ಲಿ ಅದರ ಉಲ್ಲೇಖವೇ ಇರಲಿಲ್ಲ. ಐವತ್ತು ಮೈಲು ಕಳೆಯುವಷ್ಟರಲ್ಲಿ ಒಂದು ಹಳ್ಳಿ ಸಿಗುತ್ತದೆ, ಅಲ್ಲಿ ಊಟ ಪೂರೈಸಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಹಳ್ಳಿ ಸಿಗಲೇ ಇಲ್ಲ. ಭೂಪಟದಲ್ಲಿ ಹೇಳಿದ್ದನ್ನು ನದಿ ಅನುಸರಿಸುತ್ತಲೇ ಇರಲಿಲ್ಲ.
ಕೊನೆಗೆ ಅವರು ಸ್ವಲ್ಪ ಹೊತ್ತು ದೋಣಿ ಯನ್ನು ಅದರ ಪಾಡಿಗೆ ತೇಲಲು ಬಿಟ್ಟು ಮೌನವಾಗಿ ಕುಳಿತರು. ಆ ಮೌನದಲ್ಲಿ ಅವರ ತಲೆಯೊಳಗೆ ಒಂದು ಬೆಳಕು ಹುಟ್ಟಿತು- “ತೊಂದರೆ ಹುಟ್ಟಿಕೊಳ್ಳುತ್ತಿರು ವುದು ನನ್ನ ಭೂಪಟದಿಂದ; ನದಿಯಿಂದ ಅಲ್ಲ. ನದಿ ನನಗಿಂತ ಮೊದಲೇ ಇಲ್ಲಿತ್ತು. ಈಗ ನಾನು ಇಲ್ಲಿ ತೇಲುತ್ತಿದ್ದೇನೆ ಎಂಬುದು ಅದಕ್ಕೆ ಗೊತ್ತಿರಲಾರದು. ಹೀಗಾಗಿ ನಾನು ನದಿಯನ್ನು ಅನುಸರಿಸ ಬೇಕು, ನದಿ ನನ್ನನ್ನು ಅನುಸರಿಸುವುದು ಸಾಧ್ಯವೇ ಇಲ್ಲ’.
ಇಷ್ಟು ಹೊಳೆದದ್ದೇ ತಡ, ಪಂಡಿತರು ಭೂಪಟವನ್ನು ನದಿಗೆಸೆದರು, ನಿರುಮ್ಮಳ ವಾಗಿ ಹುಟ್ಟುಹಾಕಲು ತೊಡಗಿದರು.
( ಸಾರ ಸಂಗ್ರಹ)