Advertisement

ಫಲಿತಾಂಶ ಆಡಳಿತ ವಿರೋಧಿ ಅಲೆ; ಮೋದಿ ಅಲೆಯಲ್ಲ : ಉಗ್ರಪ್ಪ

04:27 PM Mar 15, 2017 | Team Udayavani |

ಸುರತ್ಕಲ್‌: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಆಯಾ ರಾಜ್ಯಗಳ ಆಡಳಿತ ವಿರೋಧಿ ಅಲೆ ವಿನಾ ಅದು ಮೋದಿಗೆ ಕೊಟ್ಟ ಜನಾದೇಶ ಅಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಹೇಳಿದರು.

Advertisement

ಸುರತ್ಕಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಆಡಳಿತದಲ್ಲಿದ್ದ ಸಮಾಜವಾದಿ ಪಕ್ಷದ ಆಡಳಿತ ವಿರೋಧಿ ಅಲೆಯಲ್ಲಿ ಮೋದಿ ಗೆದ್ದಿದ್ದಾರೆ. ಅದೇ ರೀತಿಯಲ್ಲಿ ಉತ್ತರಾಖಂಡ, ಪಂಜಾಬ್‌, ಮಣಿಪುರ ಮತ್ತು ಗೋವಾದಲ್ಲಿ ಜನ ಆಯಾ ಸರಕಾರದ ವಿರುದ್ಧ ಮತ ಹಾಕಿದ್ದಾರೆ ಹೊರತು ಬೇರೆ ಏನೂ ಅಲ್ಲ. ಮಣಿಪುರ ಹಾಗೂ ಗೋವಾದಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇಲ್ಲಿ ನಾವು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಮಣಿಪುರ,  ಗೋವಾ ರಾಜ್ಯಗಳ ರಾಜ್ಯಪಾಲರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು. 

ಎಸ್‌.ಎಂ. ಕೃಷ್ಣ ಸಹಿತ ಕಾಂಗ್ರೆಸ್‌ನ ನಾಯಕರು ಪಕ್ಷ ತೊರೆಯುತ್ತಿರುವುದಕ್ಕೆ ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷವು ಕೃಷ್ಣ ಅವರಿಗೆ ಮುಖ್ಯಮಂತ್ರಿ, ರಾಜ್ಯಪಾಲರ ಸಹಿತ ಹಲವು ಅತ್ಯುನ್ನತ ಹುದ್ದೆ ನೀಡಿದೆ. ಜಯಪ್ರಕಾಶ್‌ ಹೆಗ್ಡೆ ಸಚಿವರಾಗಿದ್ದರು. ಬಿಜೆಪಿಯನ್ನು, ಅದರ ಕೋಮುವಾದಿ ಧೋರಣೆಯನ್ನು ಟೀಕಿಸಿದವರೇ ಇದೀಗ ಆ ಸಂಸ್ಕೃತಿಯನ್ನು ಅಪ್ಪಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಶಾಸಕ ಮೊದಿನ್‌ ಬಾವಾ, ಹೇಮಂತ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next