ವಿಟ್ಲ : ಜಗತ್ತು ನೋಡ ಲಿರುವ ಶಿಶುವಿಗೆ ಗರ್ಭಾವಸ್ಥೆ ಯಲ್ಲಿಯೇ ಸಂಸ್ಕಾರ ಕೊಡುವ ಕೆಲಸ ಮಾತೆಯರಿಂದ ಆದಾಗ ಸುಸಂಸ್ಕೃತ ನಿರ್ಮಾಣ ಸಾಧ್ಯ. ಹಾಗೆಯೇ ಧಾರ್ಮಿಕ ಕೇಂದ್ರಗಳು ಧಾರ್ಮಿಕ ಚಟುವಟಿಕೆಗಳೊಂದಿಗೆ ನೈತಿಕ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರಗಳಾಗಿ ಬೆಳೆಯಬೇಕು ಎಂದು ಸಂಸ್ಕಾರ ಭಾರತಿ ಲೋಕ ಕಲಾ ವಿಭಾಗ ಪ್ರಮುಖ್ ದಯಾನಂದ ಜಿ.ಕತ್ತಲ್‌ಸಾರ್ ನುಡಿದರು.
ಅವರು ಕೇಪು ಗ್ರಾಮದ ಅಡ್ಯನಡ್ಕ ಸಮೀಪದ ಅಮೈ ಶ್ರೀ ಉಳ್ಳಾಲ್ತಿ ಭಜನ ಮಂದಿರದ 45ನೇ ವಾರ್ಷಿಕೋತ್ಸವ ಸಂದರ್ಭ ಏರ್ಪಡಿಸಿದ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಧ.ಗ್ರಾ. ಯೋಜನೆಯ ವಿಟ್ಲ ವಲಯದ ಮೇಲ್ವಿಚಾರಕ ಜನಾರ್ದನ್ ಮಾತನಾಡಿದರು.
ಮಂಡಳಿಯ ಗೌರವಾಧ್ಯಕ್ಷ ಶ್ರೀನಿವಾಸ ರೈ ಕುಂಡಕೋಳಿ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಅಧ್ಯಕ್ಷ ಸತೀಶ್ ಉಬರು ಉಪಸ್ಥಿತರಿದ್ದರು. ಇದೇ ಸಂದರ್ಭ ಭಜನ ಮಂದಿರಕ್ಕೆ ಸುಮಾರು 75,000 ರೂ. ಅಂದಾಜು ಮೊತ್ತದ ಜನರೇಟರನ್ನು ಕೊಡುಗೆಯಾಗಿ ನೀಡಿದ ದಿನೇಶ್ ಪಟ್ಟುಮೂಲೆ ಹಾಗೂ ಕುಟುಂಬದವರಾದ ನಾರಾಯಣ ,ಗಿರಿಜಾ, ಜಯಶ್ರೀ, ಸುರೇಶ್, ಹಾಗೂ ಲತೀಶ್ ಪಟ್ಟುಮೂಲೆ ಇವರನ್ನು ಗೌರವಿಸಲಾಯಿತು. ಹಾಗೂ ದ.ಕ.ಜಿ.ಪಂ.ಕಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ರತ್ನಾವತಿ ಎಚ್.ಎಂ. ಅವರು ಸುಮಾರು 5,000 ರೂ.ಗಳ ಪಾತ್ರೆ ಸಾಮಗ್ರಿಗಳನ್ನು ಭಜನ ಮಂದಿರಕ್ಕೆ ನೀಡಿದರು. ಜೂನ್ ತಿಂಗಳಲ್ಲಿ ನಿವೃತ್ತರಾಗಲಿರುವ ರತ್ನಾವತಿ ಎಚ್.ಎಂ.,ಟಿ. ಕೃಷ್ಣ ಭಟ್ ದಂಪತಿಯನ್ನು ಭಜನ ಮಂದಿರದ ವತಿ ಯಿಂದ ಗೌರವಿಸಲಾಯಿತು.
ಮಂಡಳಿ ಅಧ್ಯಕ್ಷ ಸತೀಶ್ ಯು. ಸ್ವಾಗತಿಸಿದರು. ರವಿಪ್ರಸಾದ್ ವಂದಿಸಿದರು. ಜನಾರ್ದನ ಭಟ್ ಅಮೈ ಕಾರ್ಯಕ್ರಮ ನಿರೂಪಿಸಿದರು.
ದೀಪ ಪ್ರತಿ‚ಷ್ಠೆ, ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ, ಗಣಪತಿ ಹವನ, ದುರ್ಗಾ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ, ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು.