Advertisement

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

12:45 AM May 22, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆ ದಿದ್ದ ಬಾಂಬ್‌ ಸ್ಫೋಟ ಪ್ರಕ ರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳ ತಂಡ ಬೆಂಗಳೂರು ಮತ್ತು ಹುಬ್ಬಳ್ಳಿಯ ನಾಲ್ಕು ಕಡೆಗಳಲ್ಲಿ ಶೋಧ ನಡೆಸಿವೆೆ. ಈ ವೇಳೆ ಬೆಂಗ ಳೂರಿನ ವೈದ್ಯ ಸೇರಿ ಮೂವರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಅಲ್ಲದೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳು ನಾಡು ರಾಜ್ಯಗಳ 11 ಸ್ಥಳ ಗಳಲ್ಲಿ ಎನ್‌ಐಎ ಶೋಧ ನಡೆ ಸಿದ್ದು, ರಾಜ್ಯದ ಮೂವರ ಸಹಿತ ಒಟ್ಟು 11 ಮಂದಿ ಯನ್ನು ವಶಕ್ಕೆ ಪಡೆದುಕೊಂಡಿದೆ.

Advertisement

ಮಂಗಳವಾರ ಮುಂಜಾನೆ 7 ಗಂಟೆ ಸುಮಾರಿಗೆ ಬೆಂಗಳೂರಿನ ಜೆ.ಪಿ. ನಗರ ಮತ್ತು ಹೆಗಡೆನಗರದ 2 ಕಡೆ ಹಾಗೂ ಹುಬ್ಬಳ್ಳಿಯ ಕಸಬಾಪೇಟೆ ಠಾಣೆ ವ್ಯಾಪ್ತಿಯ 2 ಕಡೆ ಇಬ್ಬರ ಮನೆಗಳ ಮೇಲೆ ಮಧ್ಯಾಹ್ನದವರೆಗೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ಡಾ| ಸಬೀಲ್‌ ಅಹ್ಮದ್‌ ಅಲಿಯಾಸ್‌ ಮೋಟು ಡಾಕ್ಟರ್‌ ಮತ್ತು ಹುಬ್ಬಳ್ಳಿಯ ಶೋಯಬ್‌ ಮಿರ್ಜಾ ಅಲಿ ಯಾಸ್‌ ಛೋಟು ಹಾಗೂ ಈತನ ಸಹೋದರ ಅಜೀಜ್‌ ಅಹಮದ್‌ ಮಿರ್ಜಾ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳಾದ ತೀರ್ಥಹಳ್ಳಿಯ ಅಬ್ದುಲ್‌ ಮತೀನ್‌ ತಾಹಾ, ಮುಸಾವೀರ್‌ ಹುಸೇನ್‌ಗೆ ವಿದೇಶ ದಲ್ಲಿರುವ ಹ್ಯಾಂಡ್ಲರ್‌ಗಳ ಸೂಚನೆ ಮೇರೆಗೆ ಆರ್ಥಿಕ ಮತ್ತಿತರ ನೆರವು ನೀಡಿದ್ದರು. ಅಲ್ಲದೆ ಈ ಹಿಂದೆ ಇದೇ ಆರೋಪಿಗಳನ್ನು ವಿದೇಶ ದಿಂದಲೇ ನಿಯಂತ್ರಿಸುತ್ತಿದ್ದರು ಎನ್ನಲಾ ಗಿದೆ. ದಾಳಿ ಸಂದರ್ಭದಲ್ಲಿ ಕೆಲವು ಡಿಜಿಟಲ್‌ ಸಾಮಗ್ರಿ ಹಾಗೂ ಕೆಲವು ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಎಲ್‌ಇಟಿ ಸಂಘಟನೆ ಸದಸ್ಯ ವೈದ್ಯ
ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಹಿಂದೂ ಮುಖಂಡರು, ಪತ್ರಕರ್ತರು, ರಾಜಕೀಯ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಸಂಬಂಧ 2012ರ ಫೆಬ್ರವರಿಯಲ್ಲಿ ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹುಬ್ಬಳ್ಳಿಯ ಇಬ್ಬರು ವೈದ್ಯರ ಸಹಿತ ಮೂವರನ್ನು ಬಂಧಿಸಲಾಗಿತ್ತು. ಆದರೆ ಡಾ| ಸಬೀಲ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2021ರಲ್ಲಿ ಈತನನ್ನು ಅಫ್ಘಾನಿಸ್ಥಾನದಿಂದ ಗಡಿಪಾರು ಮಾಡಲಾಗಿತ್ತು. ಬಳಿಕ ಆರೋಪಿಯನ್ನು ದಿಲ್ಲಿಯಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಎಲ್ಲರೂ ನಿಷೇಧಿತ ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾ ಪರ ಕೆಲಸ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅನಂತರ ಆರೋಪಿ ಜಾಮೀನು ಪಡೆದು ಹೊರಬಂದಿದ್ದ. ಸದ್ಯ ಈತನ ವಿರುದ್ಧ ದಾಖಲಾಗಿರುವ ಪ್ರಕರಣ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿಯಲ್ಲೂ ದಾಳಿ, ಇಬ್ಬರು ವಶಕ್ಕೆ
ಸೋಮವಾರ ರಾತ್ರಿ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದ ಎನ್‌ಐಎ ಅಧಿಕಾರಿಗಳು ಕೆಲವರ ವಿಚಾರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ತೆರಳಿದ್ದಾರೆಂದು ತಿಳಿದುಬಂದಿದೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರರು ಕೋಡ್‌ವರ್ಡ್‌ ಮೂಲಕ ಸಂಭಾಷಣೆ ನಡೆಸುತ್ತಿದ್ದರು ಹಾಗೂ ಐಸಿಸ್‌ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಮೇರೆಗೆ 10-12 ಜನರುಳ್ಳ ಅಧಿಕಾರಿಗಳ ತಂಡ ಹುಬ್ಬಳ್ಳಿಗೆ ಆಗಮಿಸಿತ್ತು. ಮಂಗಳವಾರ ಬೆಳಗ್ಗೆ ಪ್ರತ್ಯೇಕ ಮೂರು ತಂಡಗಳಲ್ಲಿ ಕಸಬಾಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಹಳೇಹುಬ್ಬಳ್ಳಿ ರಜಿಯಾ ಟೌನ್‌ ನಿವಾಸಿ ಶೋಯೆಬ್‌ ಮಿರ್ಜಾ ಉರ್ಫ್‌ ಛೋಟು ಹಾಗೂ ಈತನ ಸಹೋದರ ಅಜೀಜ್‌ ಅಹಮದ್‌ ಮಿರ್ಜಾ ನಿವಾಸಕ್ಕೆ ತೆರಳಿ ವಿಚಾರಣೆ ಮಾಡಿದ್ದರು. ಅನಂತರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಎನ್‌ಐಎ ಕಚೇರಿಗೆ ಕರೆದೊಯ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next